More

    ಡಬ್ಲ್ಯುಎಚ್​ಒ ವಿರುದ್ಧ ತನಿಖೆಗೆ ಚಾಲನೆ ಕೊಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​

    ವಾಷಿಂಗ್ಟನ್​: ಅಧ್ಯಕ್ಷೀಯ ಚುನಾವಣೆ ಕಡೆಗೆ ಗಮನಹರಿಸತೊಡಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ COVID19 ಸೋಂಕಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ವಿರುದ್ಧ ತನಿಖೆಗೆ ಚಾಲನೆ ಕೊಟ್ಟಿದ್ದಾರೆ.

    ವೈಟ್​ ಹೌಸ್​ನ ಓವೆಲ್ ಆಫೀಸ್​ನಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಡಬ್ಲ್ಯುಎಚ್​ಒ ಬಗ್ಗೆ ನಮಗೆ ಸಮಾಧಾನವಿಲ್ಲ. ಅವರು ನಮ್ಮನ್ನು ತಪ್ಪುದಾರಿಗೆಳೆದಿದ್ದಾರೆ. ನನಗೆ ಗೊತ್ತಿಲ್ಲ. ಅವರಿಗೆ ಈ ಸೋಂಕಿನ ವಿಚಾರ ಮೊದಲೇ ತಿಳಿದಿತ್ತು. ಈ ವಿಚಾರದಲ್ಲಿ ಅದರ ಪಾತ್ರ ಏನು ಎಂಬುದು ಖಾತರಿಯಾಗಬೇಕು. ಅದಕ್ಕಾಗಿ ನಾವು ತನಿಖೆಗೆ ಚಾಲನೆ ನೀಡುತ್ತೇವೆ. ಇದಕ್ಕೆ ಸಂಬಂಧಿಸಿದ ಶಿಫಾರಿಸು ಶೀಘ್ರವೇ ಆಗಲಿದೆ ಎಂದರು.

    ಇದನ್ನೂ ಓದಿ: ನವೆಂಬರ್​ 3 ಒಳ್ಳೆಯ ದಿನ- ಅಂದೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್​

    ಕೇವಲ ಡಬ್ಲ್ಯುಎಚ್​ಒ ಅಷ್ಟೇ ಅಲ್ಲ, ಅದರ ವಿರುದ್ಧದ ತನಿಖೆಯ ಬೆನ್ನಲ್ಲೇ ಚೀನಾದ ವಿರುದ್ಧವೂ ಕ್ರಮಕ್ಕೆ ಮುಂದಾಗುತ್ತೇವೆ. ಡಬ್ಲ್ಯುಎಚ್​ಒದ ಪಾತ್ರ ಎಷ್ಟಿದೆಯೋ ಚೀನಾದ ಪಾತ್ರ ಎಷ್ಟಿದೆಯೋ ಎಲ್ಲವೂ ಬಹಿರಂಗವಾಗಬೇಕು. ಚೀನಾದ ವುಹಾನ್​ನಿಂದ ಈ ಕರೊನಾ ವೈರಸ್ ಹೇಗೆ ಹರಡತೊಡಗಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಅಲ್ಲದೆ, ಚೀನಾದ ಪಾತ್ರ ಈ ವೈರಸ್ ಹರಡುವುದರಲ್ಲಿ ಏನಿದೆ ಎಂಬುದೂ ಗೊತ್ತಾಗಬೇಕಾಗಿದೆ ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.

    ಡಬ್ಲ್ಯುಎಚ್​ಒಗೆ ಅಮೆರಿಕ ಸರಾಸರಿ 400 ರಿಂದ 500 ದಶಲಕ್ಷ ಡಾಲರ್ ಹಣದ ನೆರವನ್ನು ಕೊಡುತ್ತಾ ಬಂದಿದೆ. ಚೀನಾ ಕೇವಲ 38 ಡಾಲರ್ ಅಷ್ಟೇ ಕೊಡುತ್ತಿದೆ. ಆದಾಗ್ಯೂ, ಡಬ್ಲ್ಯುಎಚ್​ಒ ಚೀನಾಕ್ಕೋಸ್ಕರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸೋಂಕಿನ ವಿಚಾರ ಅವರಿಗೆ ಮೊದಲೇ ಗೊತ್ತಾಗಬೇಕಾಗಿತ್ತು. ಅಥವಾ ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಅವರು ಗಮನಹರಿಸಬೇಕಾಗಿತ್ತು. ಅಲ್ಲದೆ, ಅದನ್ನು ಅಲ್ಲೇ ತಡೆಯುವುದಕ್ಕೆ ಯೋಜನೆ ರೂಪಿಸಬೇಕು. ಯಾವುದನ್ನೂ ಮಾಡಲಿಲ್ಲ ಎಂದು ಟ್ರಂಪ್ ಆರೋಪಿಸಿದರು.

    ಇದನ್ನೂ ಓದಿ: COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ

    ಡಬ್ಲ್ಯುಎಚ್​ಒಗೆ ಅನುದಾನವಾಗಿ ಕೊಡ್ತಾ ಇರುವ ಹಣ ನಮ್ಮ ದೇಶದ ವಿವಿಧ ಜನರು ಕಷ್ಟುಪಟ್ಟು ಸಂಪಾದಿಸಿದ್ದು. ಇನ್ನು ಆ ಹಣವನ್ನು ಡಬ್ಲ್ಯುಎಚ್​ಒಗೇ ಕೊಡಬೇಕು ಎಂದೇನೂ ಇಲ್ಲ. ಅಂತಹ ಹಲವು ಗ್ರೂಪ್​ಗಳಿವೆ. ಅವುಗಳಿಗೆ ಹಂಚುವ ಕೆಲಸ ಮಾಡಬಹುದಲ್ಲ. ಇಂತಹ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮಗೆ ಹೆಚ್ಚೇನೂ ಸಮಯ ಬೇಕಾಗಲ್ಲ ಎಂದು ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದಾರೆ.

    ಸೋಂಕು ತಡೆಯುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಬೇಕು. ಅದಕ್ಕೆ ಸಂಬಂಧಪಟ್ಟಂತೆ ಆಯಾ ದೇಶಗಳು ಕ್ರಮತೆಗೆದುಕೊಂಡಿವೆಯೇ ಎಂಬುದನ್ನು ಗಮನಿಸಬೇಕು. ಆದರೆ ನೀವೇನು ಮಾಡಿದ್ರಿ- ಚೀನಾದಲ್ಲಿ ಸೋಂಕು ವ್ಯಾಪಿಸಿರುವಾಗಲೇ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದನ್ನು ನೋಡುತ್ತ ಸುಮ್ಮನಿದ್ದಿರೇಕೆ?. ವುಹಾನ್​ನಿಂದ ಜಗತ್ತಿನೆಲ್ಲೆಡೆ ವಿಮಾನ ಪ್ರಯಾಣಕ್ಕೆ ಅವಕಾಶ ಕೊಟ್ಟು ನೋಡ್ತಾ ಕುಳಿತದ್ದೇಕೆ? ಇವೆಲ್ಲದಕ್ಕೆ ಕಾರಣ ಗೊತ್ತಾಗಬೇಕಲ್ಲವೇ ಎಂದು ಟ್ರಂಪ್​ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಚಿಕಿತ್ಸೆಗೆ ಕ್ರಿಮಿನಾಶಕ ಬಳಸುವ ಐಡಿಯಾ ಕೊಟ್ಟ ಅಮೆರಿಕ ಅಧ್ಯಕ್ಷ; ಮುಜುಗರದಿಂದ ಪಾರಾಗಲು ವೈಟ್​ಹೌಸ್​ ಹೆಣಗಾಟ

    ಆನ್​ಲೈನ್​ ತರಗತಿಯಲ್ಲಿ ಈ ಆ್ಯಪ್​​ಗಳ​ ಬಳಕೆಯೇ ಹೆಚ್ಚು; ಸುರಕ್ಷಿತವಲ್ಲ ಎಂದ್ರೂ ಕೇಳ್ತಿಲ್ಲ ಕೆಲವು ಕಾಲೇಜುಗಳು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts