More

    ಆನ್​ಲೈನ್​ ತರಗತಿಯಲ್ಲಿ ಈ ಆ್ಯಪ್​​ಗಳ​ ಬಳಕೆಯೇ ಹೆಚ್ಚು; ಸುರಕ್ಷಿತವಲ್ಲ ಎಂದ್ರೂ ಕೇಳ್ತಿಲ್ಲ ಕೆಲವು ಕಾಲೇಜುಗಳು…!

    | ದೇವರಾಜ್ ಎಲ್. ಬೆಂಗಳೂರು

    ಲಾಕ್​ಡೌನ್ ವೇಳೆ ರಾಜ್ಯದ 111 ತಾಂತ್ರಿಕ ಕಾಲೇಜುಗಳು ಆನ್​ಲೈನ್ ತರಗತಿ ನಡೆಸಲು ಅಸಡ್ಡೆ ತೋರಿವೆ.

    ಅಲ್ಲದೆ, ಈ ವೇಳೆ ಅತಿ ಹೆಚ್ಚಾಗಿ ಬಳಕೆ ಮಾಡಿದ್ದ ಆನ್​ಲೈನ್ ಆಪ್ ‘ಜೂಮ್ ಎಂಬ ಅಂಶ ತಿಳಿದುಬಂದಿದೆ. ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 85 ಸರ್ಕಾರಿ, 44 ಅನá-ದಾನಿತ ಮತ್ತು 170 ಖಾಸಗಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜá-ಗಳು ಸೇರಿ ಒಟ್ಟಾರೆ 313 ಕಾಲೇಜುಗಳಿವೆ. ಈ ಪೈಕಿ ಲಾಕ್​ಡೌನ್ ವೇಳೆ ತರಗತಿ ನಡೆಸಿರುವ ಕಾಲೇಜುಗಳ ಸಂಖ್ಯೆ 202 ಮಾತ್ರ. ಉಳಿದ 111 ಕಾಲೇಜುಗಳು ಶಿಕ್ಷಣ ಇಲಾಖೆಯ ಸುತ್ತೋಲೆಗೆ ತಲೆಕೆಡಿಸಿಕೊಂಡಿಲ್ಲ.

    ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ದೇಶದಲ್ಲಿ 21 ದಿನಗಳ ಲಾಕ್​ಡೌನ್​ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ವೇಳೆ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲದಿರುವುದರಿಂದ ಕಾಲೇಜುಗಳು ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ತರಗತಿ ನಡೆಸುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಆ ಪ್ರಕಾರವಾಗಿ ಏ.14ರವರೆಗೆ ತರಗತಿಗಳು ನಡೆದಿವೆ. ಲಾಕ್​ಡೌನ್ ವಿಸ್ತರಣೆ ನಂತರವೂ ತರಗತಿಗಳನ್ನು ಮೇ 3ರವರೆಗೆ ನಡೆಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್​ಗಳು, 31 ಅನುದಾನಿತ ಪಾಲಿಟೆಕ್ನಿಕ್, 72 ಖಾಸಗಿ ಪಾಲಿಟೆಕ್ನಿಕ್ ಮತ್ತು 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮಾತ್ರ ತರಗತಿ ನಡೆಸಿವೆ.

    ಜೂಮ್ ಆಪ್: 202 ಕಾಲೇಜುಗಳು 12,338 ತರಗತಿಗಳನ್ನು ತೆಗೆದುಕೊಂಡಿವೆ. 2,67,029 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯು ಬೋಧನೆ ಮಾಡಲು ಜೂಮ್ ವಾಟ್ಸ್ ಆಪ್, ಎನ್​ಪಿಟಿಇಎಲ್/ಸ್ವಯಂ, ಇಂಪಾರ್ಟಸ್ ಹಾಗೂ ಇತರೆ ಆನ್​ಲೈನ್ ಫ್ಲಾಟ್​ಫಾಮ್ರ್ ಬಳಕೆ ಮಾಡಿಕೊಳ್ಳಲು ತಿಳಿಸಿತ್ತು. 7,463 ತರಗತಿಗಳು ಜೂಮ್ ಆಪ್ ಮೂಲಕವೇ ನಡೆದಿದ್ದು, 1.29 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವ್ಯಾಟ್ಸ್​ಆಪ್​ನಲ್ಲಿ 3,994 ತರಗತಿಗಳು ನಡೆದಿದ್ದು, 1.17 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎನ್​ಪಿಟಿಇಎಲ್​ನಲ್ಲಿ 83 ತರಗತಿಗಳು ನಡೆದಿದ್ದು, 3,378 ವಿದ್ಯಾರ್ಥಿಗಳು, ಇತರೆ ಆಪ್​ನಲ್ಲಿ 838 ತರಗತಿಗಳು ನಡೆದಿದ್ದು, 17,155 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ತಾಂತ್ರಿಕ ಶಿಕ್ಷಣ ಇಲಾಖೆ ತಿಳಿಸಿದೆ.

    ಜೂಮ್ ಆಪ್ ಸುರಕ್ಷಿತವಲ್ಲ

    ಕೇಂದ್ರ ಸರ್ಕಾರ ಜೂಮ್ ಆಪ್ ಬಳಕೆ ಸುರಕ್ಷಿತವಲ್ಲವೆಂದು ಹೇಳಿದ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಈ ಜೂಮ್ ಆಪ್ ಕೈ ಬಿಟ್ಟು ಇತರೆ ಆಪ್ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

    ಈಗಾಗಲೇ ಪಠ್ಯಕ್ರಮ ಸಂಪೂರ್ಣ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಾಲೇಜುಗಳು ಆನ್​ಲೈನ್ ತರಗತಿ ತೆಗೆದುಕೊಂಡಿಲ್ಲ ದಿರಬಹುದು. ಈ ಬಗ್ಗೆ ವಿಚಾರಿಸುತ್ತೇನೆ. ಜೂಮ್ ಬಳಕೆ ಮಾಡದಂತೆ ಸೂಚನೆ ನೀಡಿದ್ದೇನೆ.

    | ಎಚ್.ಯು. ತಳವಾರ್ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ

    ಬಿಸಿಲು ಜಾಸ್ತಿ ಇದ್ರೆ ಕರೊನಾ ತನ್ನಿಂತಾನೇ ಸಾಯುತ್ತಾ? ಮಹಾರಾಷ್ಟ್ರ, ಕರ್ನಾಟಕದಲ್ಲಿ ನಡೆದ ಅಧ್ಯಯನ ಏನು ಹೇಳುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts