More

    ಯುಎಸ್​ ಕ್ಯಾಪಿಟಲ್​ ಗಲಭೆ: ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್​ ವಿರುದ್ಧ ಮತ್ತೊಂದು ದೋಷಾರೋಪ

    ವಾಷಿಂಗ್ಟನ್​: ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಟ್ರಂಪ್​ ವಿರುದ್ಧ ಮಂಗಳವಾರ ಮತ್ತೊಂದು ದೋಷಾರೋಪ ಹೊರಿಸಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ 3ನೇ ಬಾರಿ ದೋಷಾರೋಪ ಎದುರಿಸುತ್ತಿದ್ದಾರೆ. 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಡೆಯಲು ಯತ್ನಿಸಿದ ಆರೋಪವನ್ನು ಈ ಬಾರಿ ಎದುರಿಸುತ್ತಿದ್ದಾರೆ.

    ಟ್ರಂಪ್ ಮೇಲಿನ ಆರೋಪಗಳ ಬಗ್ಗೆ ಸ್ಪೆಷಲ್​ ಕೌನ್ಸೆಲ್​ ಜ್ಯಾಕ್​ ಸ್ಮಿತ್​ ಅವರ ತನಿಖೆಯ ಬಳಿಕ ಹೊಸ ದೋಷಾರೋಪ ಉದ್ಭವಿಸಿದೆ. ಈ ಬಗ್ಗೆ ಟ್ರಂಪ್​ ಕೂಡ ಟ್ವೀಟ್​ ಮಾಡಿದ್ದು, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸುವ ಸಲುವಾಗಿ ಜಾಕ್ ಸ್ಮಿತ್ ಅವರು ತಮ್ಮ ನೆಚ್ಚಿನ ಅಧ್ಯಕ್ಷರ ಮತ್ತೊಂದು ನಕಲಿ ದೋಷಾರೋಪಣೆಯನ್ನು ಹೊರತರುತ್ತಾರೆ ಎಂಬುದನ್ನು ನಾನು ಮೊದಲೇ ಕೇಳಿದ್ದೆ ಎಂದಿದ್ದಾರೆ.

    2020ರಲ್ಲಿ ವ್ಯಾಪಕವಾದ ಮತದಾನದ ವಂಚನೆ ನಡೆದಿದೆ ಎಂಬ ಸುಳ್ಳು ಹೇಳಿಕೆಗಳನ್ನು ನಂಬಿ ಟ್ರಂಪ್ ಅವರು ನಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಅಧಿಕಾರಿಗಳು ಟ್ರಂಪ್​ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೆ, ಬೈಡೆನ್ ಅವರ ಗೆಲುವನ್ನು ಪ್ರಮಾಣೀಕರಿಸದಂತೆ ಯುಎಸ್​ ಕಾಂಗ್ರೆಸ್ ಅನ್ನು ತಡೆಯುವ ಪ್ರಯತ್ನದಲ್ಲಿ ಟ್ರಂಪ್​ ಅವರ ಬೆಂಬಲಿಗರು 2021ರ ಜನವರಿ 6ರಂದು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ಮಾಡಿದರು ಎಂದು ದೋಷಾರೋಪಣೆಯಲ್ಲಿ ಉಲ್ಲೇಖವಾಗಿದೆ.

    ಇದನ್ನೂ ಓದಿ: ದೇವಸ್ಥಾನದಲ್ಲಿ ಪೂಜಾ ಸಾಮಗ್ರಿ ಕಳವು ಮಾಡಿದ್ದ ಕಳ್ಳನ ಬಂಧನ : ಬೆಳ್ಳಿ ಇನ್ನಿತರ ಲೋಹದ ವಸ್ತುಗಳ ಜಪ್ತಿ

    ಟ್ರಂಪ್ ಈಗಾಗಲೇ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಮಾಜಿ ಯುಎಸ್ ಅಧ್ಯಕ್ಷರಾಗಿದ್ದಾರೆ. ಈಗಾಗಲೇ ಡೊನಾಲ್ಡ್​ ಟ್ರಂಪ್ ಅವರು​ ವರ್ಗೀಕೃತ ದಾಖಲೆಗಳ ಪ್ರಕರಣದಲ್ಲಿ ಸಿಲುಕಿದ್ದು, ಅವರ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ. ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದ ಮತ್ತು ವೈಟ್​ಹೌಸ್​ ತೊರೆದ ಬಳಿಕ ತಮ್ಮ ಫ್ಲೊರಿಡಾ ನಿವಾಸದಲ್ಲೇ ದಾಖಲೆಗಳನ್ನು ಉಳಿಸಿಕೊಳ್ಳುವ ಮೂಲಕ ಕಾನೂನಿನ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ ಫೆಡರಲ್​ ಗ್ರ್ಯಾಂಡ್​ ಜ್ಯೂರಿ ಟ್ರಂಪ್​ ವಿರುದ್ಧ ದೋಷಾರೋಪಣೆ ಹೊರಿಸಿದೆ.

    ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್‌ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ, ಬಳಿಕ ಆ ವಿಷಯದಲ್ಲಿ ಬಾಯಿಬಿಡದಂತೆ ಆಕೆಗೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಾಕಷ್ಟುಸಾಕ್ಷ್ಯಗಳಿದೆ ಎಂದು ಮ್ಯಾನ್‌ಹಟನ್‌ನ ಗ್ರ್ಯಾಂಡ್‌ ಜ್ಯೂರಿನ ದೋಷಾರೋಪ ಹೊರಿಸಿದೆ. (ಏಜೆನ್ಸೀಸ್​)

    ವರ್ಗೀಕೃತ ದಾಖಲೆಗಳ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಬಿಗ್​ ಶಾಕ್​

    ನೀಲಿತಾರೆಗೆ ಹಣ ನೀಡಿದ ಪ್ರಕರಣ: ಡೊನಾಲ್ಡ್​ ಟ್ರಂಪ್​ಗೆ ಎದುರಾಯ್ತು ಸಂಕಷ್ಟ, ಪ್ರತಿಭಟನೆಗೆ ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts