More

    ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ ಅಮೆರಿಕ: ಮುಂದಿನ 8 ವಾರ ನಿರ್ಣಾಯಕ ಎಂದ ಅಧ್ಯಕ್ಷ ಟ್ರಂಪ್​

    ವಾಷಿಂಗ್ಟನ್​: ಕರೋನಾ ವೈರಸ್​ Covid19 ಸೋಂಕು ಅಮೆರಿಕವನ್ನೂ ಕಂಗೆಡಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅಲ್ಲದೆ, ಮುಂದಿನ ಎಂಟು ವಾರ ನಿರ್ಣಾಯಕ ಎಂದೂ ಹೇಳಿದ್ದಾರೆ. ಈ ನಡೆಯ ಮೂಲಕ ಸೋಂಕು ತಡೆಯ ಕಾರ್ಯಾಚರಣೆಗೆ ಫೆಡರಲ್ ಫಂಡ್​ನಿಂದ 50 ಶತಕೋಟಿ ಡಾಲರ್ ಹಣ ಪಡೆಯುವುದಕ್ಕೆ ಅಮೆರಿಕ ಸರ್ಕಾರಕ್ಕೆ ಸಾಧ್ಯವಾಗಲಿದೆ.

    ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಈ ಸೋಂಕಿಗೆ ಅಮೆರಿಕದಲ್ಲಿ ಇದುವರೆಗೆ 41 ಜನ ಸಾವನ್ನಪ್ಪಿದ್ದಾರೆ. 2,000ಕ್ಕೂ ಹೆಚ್ಚು ಜನ ಸೋಂಕು ಪೀಡಿತರಾಗಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವ ಕಾರಣ ಇದೀಗ ಅಧಿಕೃತವಾಗಿಯೇ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಲಾಗುತ್ತಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಮುಂದಿನ ಎಂಟು ವಾರ ನಮಗೆ ಬಹಳ ನಿರ್ಣಾಯಕವಾದುದು ಎಂದು ಟ್ರಂಪ್ ವೈಟ್​ಹೌಸ್​​ನ ರೋಶ್​ ಗಾರ್ಡನ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

    ನಮ್ಮ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಅವರಿಗೆ ಸಿಗಬೇಕಾದ ಆರೋಗ್ಯ ಸೇವೆಗಳು ಸರಿಯಾದ ಸಮಯದಲ್ಲಿ ಸಿಗಲಿದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸೋಂಕಿನ ಬಗ್ಗೆ ಶಂಕೆ ಇರುವವರು ಮತ್ತೊಮ್ಮೆ ಬೇಕಾದರೂ ಪರೀಕ್ಷಿಸಿಕೊಳ್ಳಬಹುದು. ಅದು ಈಗಿನ ಅವಶ್ಯಕತೆ ಕೂಡ ಎಂದು ಟ್ರಂಪ್ ಹೇಳಿದ್ದಾರೆ. (ಏಜೆನ್ಸೀಸ್​)

    FACT CHECK: ಕರೋನಾ ವೈರಸ್​ ತುರ್ತುಪರಿಸ್ಥಿತಿ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿದೆ ಎನ್ನಲಾದ ಸುತ್ತೋಲೆ ಫೇಕ್​

    ಮನೆಯಲ್ಲೇ ಇದೆ ಕರೊನಾಕ್ಕೆ ಔಷಧ; ಹೀಗೆ ಮಾಡಿದರೆ ಕರೊನಾ ಬರುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts