More

    ಸಚಿವರ ಬುಡಕ್ಕೆ ಬೆಂಕಿಯಿಟ್ಟ ಅಂತಾರಾಷ್ಟ್ರೀಯ ‘ಸ್ಮಂಗ್ಲಿಂಗ್‌ ರಾಣಿ’

    ಕೊಚ್ಚಿ: ಕೇರಳ ಸರ್ಕಾರವನ್ನೇ ನಡುಗಿಸಿರುವ ಚಿನ್ನದ ರಾಣಿ ಸ್ವಪ್ನಾ ಸುರೇಶ್‌ ಇದೀಗ ಸಚಿವ ಕೆ.ಟಿ.ಜಲೀಲ್‌ ಬುಡಕ್ಕೂ ಬೆಂಕಿ ಇಟ್ಟಿದ್ದಾಳೆ.

    ಗೋಲ್ಡ್‌ ಸ್ಮಗ್ಲಿಂಗ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಈಕೆ, ಸಚಿವ ಕೆ.ಟಿ.ಜಲೀಲ್‌ ಜತೆ ಅನೇಕ ಬಾರಿ ಕರೆ ಮಾಡಿರುವುದು ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೇ, ಈಕೆಗೆ ಬಹುತೇಕ ರಾಜಕೀಯ ಮುಖಂಡರ ಜತೆ ದೊಡ್ಡ ಪ್ರಮಾಣದಲ್ಲಿ ಲಿಂಕ್‌ ಇತ್ತು ಎನ್ನುವ ವಿಷಯವೂ ಇದೀಗ ಬಹಿರಂಗಗೊಂಡಿದೆ.

    ಕೇರಳದ ತಿರುವನಂತಪುರದಲ್ಲಿ ಸಿಕ್ಕಿರುವ ಬ್ಯಾಗ್‌ನಲ್ಲಿ ಚಿನ್ನವು ಸ್ಮಂಗ್ಲಿಂಗ್‌ಗೆ ಸಂಬಂಧಪಟ್ಟಿರುವ ಬಗ್ಗೆ ತನಿಖೆ ನಡೆಸಿ, ಸ್ವಪ್ನಾ ಸುರೇಶ್‌ನನ್ನು ಬಂಧಿಸಿರುವ ಎನ್‌ಐಎ ಅವರ ಫೋನ್‌ನಿಂದ ಕರೆಯ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈ ವಿಷಯ ಬಹಿರಂಗಗೊಂಡಿದೆ.

    ಇದನ್ನೂ ಓದಿ: ಚಿನ್ನದ ರಾಣಿಗೆ ಭಯೋತ್ಪಾದನಾ ಲಿಂಕ್‌? ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ತನಿಖಾ ಸಂಸ್ಥೆ

    ಜೂನ್‌ 1ರಿಂದ ಜೂನ್‌ 26ರ ನಡುವೆ ಜೂನ್ 1 ಮತ್ತು ಜೂನ್ 26ರ ನಡುವೆ ಸ್ವಪ್ನಾ ಮತ್ತು ಸಚಿವ ಜಲೀಲ್‌ ನಡುವೆ ಒಂಬತ್ತು ಬಾರಿ ಫೋನ್‌ ಸಂಭಾಷಣೆ ನಡೆದಿದೆ. ಹೆಚ್ಚಿನ ಕರೆಗಳು 1-2 ನಿಮಿಷಗಳ ಕಾಲ ನಡೆದವು ಎಂಬ ಮಾಹಿತಿ ಸಿಕ್ಕಿದೆ.

    ತಿರುವನಂತಪುರದ ಯುಎಇ ದೂತಾವಾಸದಲ್ಲಿ ವ್ಯಕ್ತಿಯ ಹೆಸರನ್ನು ಬಳಸಿಕೊಂಡು ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಸಚಿವ ಜಲೀಲ್‌, ಕರೆ ಬಂದಿರುವುದು ನಿಜ, ಆದರೆ ಇವೆಲ್ಲಾ ಅಧಿಕೃತ ಕರೆಗಳಾಗಿವೆ, ಅಂದರೆ ಕಚೇರಿಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡಲು ಕರೆ ಮಾಡಿರುವುದಾಗಿ ಎಂದಿದ್ದಾರೆ.

    ಏನಿದು ಪ್ರಕರಣ: 

    ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಅರಬ್‌ ದೇಶಕ್ಕೂ ನಿದ್ದೆಗೆಡಿಸಿರೋ ‘ಚಿನ್ನದ ರಾಣಿ’- ಗೋಳೋ ಎನ್ನುತ್ತಿರುವ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts