More

    ಮೋಟೆಬೆನ್ನೂರಲ್ಲಿ ಗ್ರಾಮಸ್ಥರಿಂದ ವಿಜಯೋತ್ಸವ

    ಬ್ಯಾಡಗಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗ್ರಾಮದ ಮಹದೇವಪ್ಪ ಮೈಲಾರ ಅವರ ಹೆಸರನ್ನು ಹಾವೇರಿ ರೈಲು ನಿಲ್ದಾಣಕ್ಕೆ ನಾಮಕರಣಗೊಳಿಸಿರುವುದು ಸಂತಸ ತಂದಿದೆ ಎಂದು ಬಿಜೆಪಿಯ ಯುವ ಮೋರ್ಚಾ ಮಾಜಿ ಅಧ್ಯಕ್ಷ ವಿಜಯಭರತ ಬಳ್ಳಾರಿ ಹೇಳಿದರು.

    ಮಹದೇವಪ್ಪ ಮೈಲಾರ ರೈಲು ನಿಲ್ದಾಣ ಎಂದು ನಾಮಕರಣಗೊಳಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ಕೆ ಗ್ರಾಮದ ಬಸ್ ನಿಲ್ದಾಣ ಬಳಿ ಭಾನುವಾರ ಗ್ರಾಮಸ್ಥರೊಂದಿಗೆ ಆಚರಿಸಲಾದ ವಿಜಯೋತ್ಸವದಲ್ಲಿ ಸಿಹಿ ಹಂಚಿ ಅವರು ಮಾತನಾಡಿದರು. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಸೇನಾನಿಗೆ ಜನ್ಮನೀಡಿದ ಮೋಟೆಬೆನ್ನೂರು ಗ್ರಾಮದ ಕೀರ್ತಿ ನಾಡಿನಗಲಕ್ಕೆ ಪಸರಿಸಿದೆ. ಸ್ವಾತಂತ್ರಹೋರಾಟದಲ್ಲಿ ಧುಮುಕಿ ಬ್ರಿಟಿಷ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಹಲವು ಚಳವಳಿಗಳಲ್ಲಿ ಪಾಲ್ಗೊಂಡು ದಿಟ್ಟತನ ತೋರಿದ್ದರು. ತಮ್ಮಂತೆ ತಮ್ಮ ಪತ್ನಿ ಸಿದ್ದಮ್ಮ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ದಾರಿದೀಪವಾಗಿದ್ದರು. ಹಲವು ಬಾರಿ ಬ್ರಿಟಿಷರು ಬಂಧಿಸಿದರೂ ಹೋರಾಟದಿಂದ ಹಿಂದೆ ಸರಿಯಲಿಲ್ಲ ಎಂದರು. ಹೋರಾಟಗಾರರ ಸ್ಮರಣೆಗಾಗಿ ಗ್ರಾಮದಲ್ಲಿ ಮೈಲಾರ ಮಹದೇವ ಸಭಾಭವನ ನಿರ್ವಿುಸಿದ್ದು, ಹಾವೇರಿ ರೈಲು ನಿಲ್ದಾಣಕ್ಕೆ ಮಹದೇವಪ್ಪ ಮೈಲಾರ ಹೆಸರನ್ನು ನಾಮಕರಣ ಮಾಡುವಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೇಡಿಕೆ ಸಲ್ಲಿಸಿದರು. ಸ್ಪಂದಿಸಿದ ಸಂಸದ ಶಿವಕುಮಾರ ಉದಾಸಿ ಹಾಗೂ ಕೇಂದ್ರ ರೇಲ್ವೆ ಸಚಿವರು ಸಾರ್ವಜನಿಕರ ಹಿತ ಕಾಯುವ ಮೂಲಕ ದೇಶಾಭಿಮಾನ ಹೆಚ್ಚಿಸಿದ್ದಾರೆ ಎಂದರು. ಎಪಿಎಂಸಿ ಮಾಜಿ ಸದಸ್ಯ ಶಿವಬಸಪ್ಪ ಕೊಳೂರು, ತಾಪಂ ಮಾಜಿ ಅಧ್ಯಕ್ಷ ನಾಗರಾಜ ಬಳ್ಳಾರಿ, ಗ್ರಾಮಸ್ಥರಾದ ಗುಡ್ಡಪ್ಪ ಮೈಲಾರ, ಮಾಲತೇಶ ಜಿಂಗಾಡೆ, ದಾನಪ್ಪ ಬಳ್ಳಾರಿ, ಪುಟ್ಟಪ್ಪ ಬ್ಯಾಟಪ್ಪನವರ, ಮಂಜುನಾಥ ಗಾಣಿಗೇರ, ಸತೀಶ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts