More

    ರೈಲು ಪ್ರಯಾಣ ಆರಾಮದಾಯಕ

    ಆಲಮಟ್ಟಿ: ಪ್ರಯಾಸದ ಪ್ರಯಾಣವಾಗಿದ್ದ ರೈಲು ಈಗ ಆರಾಮದಾಯಕ ಪ್ರಯಾಣವಾಗುತ್ತಿದೆ, ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.

    ಆಲಮಟ್ಟಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ, 15.21 ಕೋಟಿ ರೂ ವೆಚ್ಚದಲ್ಲಿ ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಎಂದರು.

    ಇಡೀ ದೇಶಾದ್ಯಂತ ಬಹುತೇಕ ರೈಲ್ವೆ ಮಾರ್ಗಗಳು ಡಬಲಿಂಗ್ ಜತೆಗೆ ವಿದ್ಯುದೀಕರಣಗೊಂಡಿವೆ ಎಂದರು. ಸಾಗರಮಾಲಾ, ಪರ್ವತಮಾಲಾ, ಭಾರತಮಾಲಾ ಯೋಜನೆಯಿಂದ ಇಡೀ ದೇಶಾದ್ಯಂತ ಸಾರಿಗೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.

    ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ರೈಲ್ವೆ ಇಲಾಖೆಯ ಹಿರಿಯ ಹಣಕಾಸು ವ್ಯವಸ್ಥಾಪಕ ಜಿ.ಬೂ.ಝಕಾಬ್, ಎಂ.ಚೇತನಕುಮಾರ, ಚಂದ್ರಹಾಸ್, ಜಯಶ್ರೀ ರಾಠೋಡ, ಲಕ್ಷ್ಮೀ ರಾಠೋಡ, ರಮೇಶ ಆಲಮಟ್ಟಿ, ಕಲ್ಲು ಸೊನ್ನದ, ಎನ್.ಎ. ಪಾಟೀಲ, ವಿ.ಎಂ. ಯಾಳವಾರ, ವಸಂತ ಬಳ್ಳೊಳ್ಳಿ, ಮಹಾಂತೇಶ ಹಿರೇಮಠ, ದಶರಥ ಬಂಡಿವಡ್ಡರ, ಪ್ರಶಾಂತ ಗಣಿ, ಪದ್ಮಾವತಿ ಗುಡಿ, ಸಂತೋಷ ಕಡಿ, ಶಿವಾನಂದ ಕೋಳಿ, ಶೇಖರ ಗೂಗಿಹಾಳ ಮತ್ತೀತರರು ಇದ್ದರು.

    ಆಲಮಟ್ಟಿಯಲ್ಲಿ ವಾರಕ್ಕೊಮ್ಮೆ ಚಲಿಸುವ ಶಿರಡಿ ಎಕ್ಸಪ್ರೆಸ್ ಹಾಗೂ ನಿತ್ಯವೂ ಚಲಿಸುವ ಹೊಸಪೇಟೆ-ಮುಂಬೈ ಎಕ್ಸಪ್ರೆಸ್ ರೈಲು ನಿಲ್ಲಿಸಬೇಕೆಂದು ಆಲಮಟ್ಟಿ ಗ್ರಾಮಸ್ಥರು ಹಾಗೂ ಸಮೀಪದ ವಂದಾಲ ಗ್ರಾಮದ ರೈಲು ನಿಲ್ದಾಣದಲ್ಲಿ ಕೆಲ ಎಕ್ಸಪ್ರೆಸ್ ರೈಲುಗಳನ್ನು ನಿಲ್ಲಿಸಬೇಕೆಂದು ಆಯಾ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕೂಡಗಿ ರೈಲು ನಿಲ್ದಾಣದಲ್ಲಿ ಮೊದಲು ಎಲ್ಲಾ ಪ್ಯಾಸೆಂಜರ್ ರೈಲು ನಿಲ್ಲಿಸಲಾಗುತ್ತಿತ್ತು. ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಆದಾಗಿನಿಂದ ಬಸವನಬಾಗೇವಾಡಿ ರೋಡ್ (ತೆಲಗಿ)ಯಲ್ಲಿ ಮಾತ್ರ ರೈಲು ನಿಲ್ಲಿಸಲಾಗುತ್ತದೆ. ಕೂಡಗಿ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ಸೇರಿದಂತೆ ಒಂದೂ ರೈಲು ನಿಲ್ಲುತ್ತಿಲ್ಲ. ಎಲ್ಲ ಪ್ಯಾಸೆಂಜರ್ ರೈಲು ನಿಲ್ಲಿಸಬೇಕು ಎಂದು ಆ ಗ್ರಾಮಸ್ಥರು ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts