ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣ ಮೇಲ್ದರ್ಜೆಗೆ

1 Min Read
ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣ ಮೇಲ್ದರ್ಜೆಗೆ

ಬೆಂಗಳೂರು: ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುತ್ತಿರುವುದು ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಾಂಸ್ಕೃತಿಕ ನಗರ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಐತಿಹಾಸಿಕ, ಪಾರಂಪರಿಕ ಮಹತ್ವವುಳ್ಳ ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮೋದಿ ಸಂಕಲ್ಪ ಮಾಡಿರುವುದು ಸಂತಸ ಉಂಟು ಮಾಡಿದೆ. 20.93 ಕೋಟಿ ರೂ. ವೆಚ್ಚದಲ್ಲಿ ಚನ್ನಪಟ್ಟಣ ರೈಲು ನಿಲ್ದಾಣ, 20.96 ಕೋಟಿ ರೂ.ವೆಚ್ಚದಲ್ಲಿ ರಾಮನಗರ ರೈಲು ನಿಲ್ದಾಣವನ್ನು ಸ್ಥಳೀಯ ಸಾಂಸ್ಕೃತಿಕ ಸೊಗಡಿನ ಮಾದರಿಯಲ್ಲಿಯೇ ಉನ್ನತೀಕರಿಸುತ್ತಿರುವುದು ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಬೃಹತ್ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ. ನಿತ್ಯವೂ ಉದ್ಯೋಗ, ವ್ಯವಹಾರಕ್ಕಾಗಿ ಎರಡೂ ನಗರಗಳ ನಡುವೆ ಸಂಚರಿಸುವ ಜಿಲ್ಲೆಯ ಅಸಂಖ್ಯಾತ ಜನರಿಗೆ ಇದರಿಂದ ಅನುಕೂಲವೂ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

See also  ಅಭಿಯಾನ ಹಮ್ಮಿಕೊಂಡು ಶೇ.100 ಗುರಿ ಸಾಧಿಸಿ ; ಕಾರ್ಯಪಡೆ ಸಭೆಯಲ್ಲಿ ಡಿಸಿ ರಾಕೇಶ್ ಕುಮಾರ್ ಸೂಚನೆ
Share This Article