More

  ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಚಾಲನೆ

  ಕೊಪ್ಪಳ: ದೇಶವನ್ನು ಸುದೀರ್ವಾಗಿ ಆಳಿದ ಕಾಂಗ್ರೆಸ್​ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೇವಲ 10 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ರೈಲ್ವೆ, ಹೆದ್ದಾರಿ ನಿರ್ಮಾಣದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಮುಂದಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

  ತಾಲೂಕಿನ ಮುನಿರಾಬಾದ್​ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿ ಹಾಗೂ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಪಿಎಂ ಶಂಕು ಸ್ಥಾಪನೆ ನೆರವೇರಿಸುವ ವರ್ಚುವಲ್​ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

  60 ವಷ ಆಳಿದ ಕಾಂಗ್ರೆಸ್​ ಅಭಿವೃದ್ಧಿ ಮಾಡಲಿಲ್ಲ. ದೇಶದ ಜನ ಆತಂಕದಲ್ಲಿದ್ದಾಗ ಬಿಜೆಪಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಿ 2014ರಲ್ಲಿ ಘೋಷಿಸಿತು. ಜನರು ಕೈ ಹಿಡಿದರು. ಅಲ್ಲಿಂದ ಈವರೆಗೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಮೂರು ವಷದ ಮಗುವಿಗೂ ಮೋದಿ ಎಂದರೆ ಯಾರೆಂದು ಗೊತ್ತು. ದೇಶವೊಂದು ಅಭಿವೃದ್ಧಿ ಹೊಂದಬೇಕಾದರೆ ಮೂಲ ಸೌಕರ್ಯ, ರೈಲ್ವೆ, ರಸ್ತೆ, ವಾಯು, ಜಲಮಾರ್ಗ ಸಾರಿಗೆ ಅಭಿವೃದ್ಧಿ ಹೊಂದಬೇಕು. ಸದ್ಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.

  ಪಿಎಂ ವಿಶ್ವಕರ್ಮ ಯೋಜನೆ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಎರಡು ಬಾರಿ ಸಂಸದನಾಗಿರುವೆ. ಮುನಿರಾಬಾದ್​ ನಿಲ್ದಾಣ ಅಭಿವೃದ್ಧಿಗೆ 21 ಕೋಟಿ ರೂ. ನೀಡಲಾಗಿದೆ. ಸೇತುವೆ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿದೆ. ಹುಲಗಿಗೆ ಲಾಂತರ ಭಕ್ತರು ಆಗಮಿಸುತ್ತಾರೆ. ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಭೂ ಸ್ವಾಧಿನಕ್ಕೂ ಕೇಂದ್ರವೇ ಹಣ ನೀಡುತ್ತಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

  ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ವಿಜಯಕುಮಾರ್​ ಮಾತನಾಡಿ, ಅಮೃತ ಭಾರತ ಸ್ಟೇಷನ್​ ಯೋಜನೆಯಡಿ ದೇಶದ 554 ರೈಲ್ವೆ ನಿಲ್ದಾಣ ಹಾಗೂ 1500 ಕೆಳ ಮತ್ತು ಮೇಲ್ಸೇತುವೆ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ನಮ್ಮ ವ್ಯಾಪ್ತಿಯ 7 ನಿಲ್ದಾಣ, 13 ಸೇತುವೆಗಳಿಗೆ ಚಾಲನೆ ದೊರೆತಿದೆ. ಇದೊಂದು ಐತಿಹಾಸಿಕ ಕ್ಷಣ ಎಂದರು.

  ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಕಾವ್ಯ, ಗಂಗಮ್ಮ, ಹಾರ್ಷಿಯಾ, ಕೆ.ಉಷಾ, ಟಿ.ದುರ್ಗಾಪರಮೇಶ್ವರಿ, ಶ್ರೇಯಾ, ದೀಪಿಕಾ, ಸುಚಿತ್ರಾಗೆ ಗಣ್ಯರು ಬಹುಮಾನ ವಿತರಿಸಿದರು.

  ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣನವರ, ಹುಲಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಸಿದ್ದಪ್ಪ ಗುಂಗಾಡಿ, ಉಪಾಧ್ಯಕ್ಷ ನಹ್ಮರ್​ ಅಲಿ, ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಶ, ಹೊಸಳ್ಳಿ ಗ್ರಾಪಂ ಅಧ್ಯಕ್ಷ ಮಾರುತಿ ಬದ್ನಾಳ, ಉಪವಿಭಾಗಾಧಿಕಾದಿ ಕ್ಯಾ.ಮಹೇಶ ಮಾಲಗಿತ್ತಿ, ಮುಖಂಡರಾದ ಪ್ರಭು ಪಾಟೀಲ್​, ಪಾಲಕ್ಷಪ್ಪ, ನಾಗರತ್ನ ಪೂಜಾರ, ಗೋಪಾಲ, ರೈಲ್ವೆ ಅಧಿಕಾರಿಗಳಾದ ಪುಟ್ಟರಾಜ, ಶಮಾರ್ ಇದ್ದರು.

  ಹಿಟ್ನಾಳ್​ ವಿರುದ್ಧ ಗರಂ ಆದ ಸಂಗಣ್ಣ : ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆ ಬಳಿಯ ರೈಲ್ವೆ ಸೇತುವೆ 2014&15ರಲ್ಲಿ ಮಂಜೂರಾಗಿದೆ. ಭೂಸ್ವಾಧಿನಕ್ಕೆ 1.30ಕೋಟಿ ರೂ. ರಾಜ್ಯ ಸರ್ಕಾರ ನೀಡಬೇಕಿತ್ತು. ಈವರೆಗೂ ನೀಡಿಲ್ಲ. ಶಾಸಕ ರಾವೇಂದ್ರ ಹಿಟ್ನಾಳ್​ ಮೂರು ಬಾರಿ ಶಾಸಕರಾಗಿದ್ದಾರೆ. ಆದರೆ, ಅಭಿವೃದ್ಧಿಗೆ ಕೈ ಜೋಡಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಚೊಚ್ಚಲ ಮಗನೆಂದು ಕರೆಸಿಕೊಂಡರೂ ಅಭಿವೃದ್ಧಿ ಮಾಡದಿರುವುದು ನಾಚಿಕೆಗೇಡು. ಕೊಪ್ಪಳ ಅಭಿವೃದ್ಧಿಗೆ 300 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆಂದು ಕುಟುಕಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts