More

    ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ: ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತ ಮಹಿಳೆ..

    ದರ್ಭಾಂಗಾ: ತ್ರಿವಳಿ ತಲಾಖ್‌ನ ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿರುವ ಘಟನೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದಿದೆ.

    ಲಹೇರಿಯಾಸರೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಖುಷ್ಬೂ ಪರ್ವೀನ್ ಎಂಬಾಕೆಯಕೇ ತನ್ನ ಪತಿ ಮೊಹಮ್ಮದ್ ಮಕ್ಸೂದ್​ ವಿರುದ್ಧ ದೂರು ನೀಡಿದ ಮಹಿಳೆಯಾಗಿದ್ದಾಳೆ. ಸದ್ಯ ಮಕ್ಸೂದ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವರದಕ್ಷಿಣೆಗಾಗಿ ತನ್ನ ಅತ್ತೆಯ ಮನೆಯವರು ಪೀಡಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಇದನ್ನೂ ಓದಿ: ಮೇವಿನ ಹಣ ವಾಪಸ್ಸು ಕೇಳಿದ್ದಕ್ಕೆ ಮಹಿಳೆಗೆ ಅಡ್ಡರಸ್ತೆಯಲ್ಲೇ ದೊಣ್ಣೆಯಿಂದ ಥಳಿಸಿ ಕ್ರೌರ್ಯ..

    ಖುಷ್ಬು ಪರ್ವೀನ್ ಪುರ್ನಿಯಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾಬ್ ಬಾಗ್ ಪ್ರದೇಶದ ನಿವಾಸಿ ಮೊಹಮ್ಮದ್ ಶಕುರ್ ಎಂಬುವರ ಪುತ್ರಿಯಾಗಿದ್ದು, ಆಕೆಗೆ 2022ರ ಜೂನ್​ನಲ್ಲಿ ಮೊಹಮ್ಮದ್ ಮಕ್ಸೂದ್ ಎಂಬಾತನ ಜತೆಗೆ ವಿವಾಹವಾಗಿತ್ತು. ಅಂದಿನಿಂದಲೇ ಪತಿ ಮತ್ತು ಅತ್ತೆಯಂದಿರು ತನಗೆ ಕಿರುಕುಳ ನೀಡುತ್ತಿದ್ದು, ಆತ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದಾನೆ ಎಂದು ಖುಷ್ಬು ಪತಿ ವಿರುದ್ಧ ಆರೋಪಿಸಿದ್ದಾಳೆ.

    ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಮುಖ್ಯಸ್ಥೆ ನುಸ್ರತ್ ಜಹಾನ್ ಮಾತನಾಡಿ, ಸಂತ್ರಸ್ತೆಯ ತನ್ನ ಪತಿ ಮೊ ಮಕ್ಸೂದ್ ತಲಾಖ್ ಹೇಳಿ ಮೂರು ಬಾರಿ ವಿಚ್ಛೇದನ ನೀಡಿದ್ದಾನೆ. ಪತಿ ಮತ್ತು ಅತ್ತೆಯಂದಿರು ತನಗೆ ಚಿತ್ರಹಿಂಸೆ ನೀಡುತ್ತಿದ್ದು, ಮನೆಯಲ್ಲಿ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದಿದ್ದಾಳೆ. ಈ ಹಿನ್ನೆಲೆ ಮಹಿಳೆಯ ದೂರಿನ ಮೇರೆಗೆ ಶನಿವಾರ ತಡರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts