More

    ಏನ್ ಟ್ರೆಂಡ್ ಗುರೂ..! ಕರೊನಾ ಹೇರ್​ಸ್ಟೈಲ್ ಆಯ್ತು. ಈಗ ಕರೊನಾ ಮಾಸ್ಕ್ ಮತ್ತು ನಾನ್

    ಜೋಧ್‌ಪುರ: ಕರೊನಾವೈರಸ್ ರೋಗ ವ್ಯಾಪಾರದಲ್ಲೂ ಈಗ ಒಂದು ಟ್ರೆಂಡ್ ಆಗುತ್ತಿದೆಯೇ? ಹೌದು ಎನ್ನುತ್ತಿದೆ ಜಗತ್ತು.
    ಲಕ್ಷಾನುಗಟ್ಟಲೆ ಜನರನ್ನು ಬಲಿತೆಗೆದುಕೊಂಡ ಮೇಲೆ ಅದರ ವಿರುದ್ಧ ಜಾಗೃತಿ ಮೂಡಿಸಲು ಕರೊನಾ ವೈರಸ್ ಆಕಾರ ಹೇರ್​ಸ್ಟೈಲ್ ಜನಪ್ರಿಯಗೊಂಡಿತು.
    ಮಾಸ್ಕ್, ಸಾಮಾಜಿಕ ಅಂತರ, ನಿಯಮಿತವಾಗಿ ಕೈತೊಳೆಯಲು ಜನರನ್ನು ಪ್ರೋತ್ಸಾಹಸಲು ಜಾಗೃತಿ ಅಭಿಯಾನಗಳನ್ನು ಹಲವು ಇಲಾಖೆ, ಕಂಪನಿಗಳು ಮುಂದಾಗಿವೆ. ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಟ್ರೆಂಡ್ ವಿಶ್ವದಾದ್ಯಂತ ವ್ಯವಹಾರಗಳನ್ನು ಪ್ರೇರೇಪಿಸುತ್ತಿದೆ. ಹೊಟೆಲ್ ಉದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ.

    ಇದನ್ನೂ ಓದಿ: ಮ್ಯಾನ್ಮರ್​ ಸುಂದರಿಯ ಸೊಂಟದ ಸುತ್ತಳತೆ ಕೇಳಿದ್ರೆ ತಲೆ ತಿರುಗುತ್ತೆ: ಇದು ವಿಶ್ವದಾಖಲೆಯಂತೆ!

    ವಿಶೇಷ ಭಕ್ಷ್ಯಗಳ ಮೂಲಕ ಆಹಾರ ಉದ್ಯಮವು ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಂಡಿದೆ. ಕರೋನವೈರಸ್ ಆಕಾರದ ಬರ್ಗರ್‌ಗಳು ಮತ್ತು ಕೇಕ್‌ಗಳಿಂದ ಹಿಡಿದು ಕಾಕ್ಟೈಲ್‌ಗಳು ಮತ್ತು ಮಾಸ್ಕ್-ಆಕಾರದ ಪರೋಟಾಗಳವರೆಗೆ, ಆಹಾರ ಮಳಿಗೆಗಳು ಮಾರಣಾಂತಿಕ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಸೃಜನಶೀಲ ವಿಚಾರಗಳನ್ನು ರೂಪಿಸಿವೆ.
    ಕರೊನಾ ಹೆಸರಿನಲ್ಲಿ ಉತ್ಪನ್ನಗೊಳ್ಳುವ ವಸ್ತು ಹೆಚ್ಚೂ ಕಡಿಮೆ ಹಾಟ್ ಕೇಕ್ ಥರ ಮಾರಾಟವಾಗುತ್ತಿವೆ.
    ಈಗ, ರಾಜಸ್ಥಾನದ ಜೋಧಪುರದ ವೇದಿಕ್ ಮಲ್ಟಿ – ಕುಶನ್ ರೆಸ್ಟೋರೆಂಟ್ ತನ್ನ ಮೆನುವಿನಲ್ಲಿ ಕರೊನಾವೈರಸ್ ವಿರುದ್ಧ ಜಾಗೃತಿ ಮೂಡಿಸುವ ಎರಡು ವಿಶೇಷ ಭಕ್ಷ್ಯಗಳನ್ನು ಪರಿಚಯಿಸಿದೆ. ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಕೋವಿಡ್ ಕರಿ ಮತ್ತು ಮಾಸ್ಕ್ ನಾನ್ ಅನ್ನು ಮಾರಾಟ ಮಾಡುತ್ತಿದೆ.
    ಕೋವಿಡ್ ಕರಿ-ಇದು ಮಲೈ ಕೋಫ್ತಾ ಆಗಿದ್ದು, ಇದರಲ್ಲಿ ಕೋಫ್ತಾಗಳನ್ನು ಕರೊನಾವೈರಸ್ ಕಣದ ಆಕಾರದಲ್ಲಿ ತಯಾರಿಸಲಾಗುತ್ತದೆ. ಮಾಸ್ಕ್ ಆಕಾರದಲ್ಲಿ ನಾನ್ ಇರುತ್ತದೆ.

    ಇದನ್ನೂ ಓದಿ: ಪ್ರೇಯಸಿ ಜತೆ ಚಕ್ಕಂದ ಆಡುವುದನ್ನು ಕಂಡ 6 ವರ್ಷದ ಬಾಲಕನನ್ನು ಕೊಂದ ಪ್ರೇಮಿ

    ಜನರು ಹೊರಗೆ ಹೆಜ್ಜೆ ಹಾಕಲೂ ಹಿಂಜರಿಯುವಂತೆ ಕೋವಿಡ್ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಆದರೆ ಇದೇ ಈಗ ಟ್ರೆಂಡ್ ಕೂಡ ಆಗಿದ್ದು, ಈ ರೆಸ್ಟೋರೆಂಟ್ ಹೊಸ ಭಕ್ಷ್ಯಗಳನ್ನು ಪ್ರಯತ್ನಿಸಲು ಗ್ರಾಹಕರನ್ನು ಆಕರ್ಷಿಸುವ ಉದ್ದೇಶ ಹೊಂದಿದೆ.
    ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ನಾವು ನೈರ್ಮಲ್ಯದ ಬಗ್ಗೆ ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ರೆಸ್ಟೋರೆಂಟ್‌ನಲ್ಲಿ ಸರ್ಶರಹಿತ ಮೆನು, ಸಾಮಾಜಿಕ ದೂರ ಮತ್ತು ಇತರ ಸುರಕ್ಷತಾ ವಿಧಾನಗಳನ್ನು ನಾವು ಪರಿಚಯಿಸಿದ್ದೇವೆ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ.
    ಕೋವಿಡ್ ಕರಿ ಮತ್ತು ಮಾಸ್ಕ್ ನಾನ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತ ಜನಮನ ಆಕರ್ಷಿಸಿವೆ. ಒಬ್ಬ ಬಳಕೆದಾರರು, “ಕರೊನಾ ಕರಿ ಮತ್ತು ಮಾಸ್ಕ್ ನಾನ್ ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ ಎಂದು ಹೇಳಿದ್ದಾರೆ.
    ಇದಕ್ಕೆ ತಮಾಷೆ ಮಾಡುವವರಿಗೇನೂ ಕಡಿಮೆ ಇಲ್ಲ. ಇದರ ಜತೆಗೆ ಸ್ಯಾನಿಟೈಜರ್ ತುಂಬಿದ ಒಂದು ಗ್ಲಾಸ್​​ ಕೂಡ ಇಟ್ಟುಕೊಳ್ಳಿ ಎಂದು ಗೇಲಿ ಮಾಡಿದವರೂ ಇದ್ದಾರೆ.

    ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡವನಿಗೆ ಹೊಡೆಯಿತು ಲಾಟರಿ, ಸಿಕ್ಕಿತು 31 ಕೋಟಿ ರೂಪಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts