More

    ಅಫ್ಘಾನಿಸ್ತಾನ ಭೂಕಂಪನ ಎಫೆಕ್ಟ್​! ಉತ್ತರ ಭಾರತದಲ್ಲಿ 2 ನಿಮಿಷ ನಡುಗಿದ ಭೂಮಿ, ಜನರಲ್ಲಿ ಆತಂಕ

    ನವದೆಹಲಿ: ಅಫ್ಘಾನಿಸ್ತಾನದ ಹಿಂದು ಕುಶ್​ ವಲಯದಲ್ಲಿ ಮಂಗಳವಾರ ಸಂಜೆ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಬಳಿಕ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸುಮಾರು 2 ನಿಮಿಷಗಳ ಕಾಲ ಭೂಮಿ ಬಲವಾಗಿ ನಡುಗಿರುವುದು ಅಥವಾ ಕಂಪಿಸಿರುವುದು ಕಂಡುಬಂದಿದೆ. ನಿನ್ನೆ ಎರಡು ಬಾರಿ ಅಫ್ಘಾನಿಸ್ತಾನದಲ್ಲಿ ಭೂಕಂಪನವಾಗಿದೆ.

    ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಅಫ್ಘಾನಿಸ್ತಾನದ ಫೈಜಾಬಾದ್‌ನ ಆಗ್ನೇಯ ಭಾಗದ ಸುಮಾರು 133 ಕಿ.ಮೀ ದೂರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಅಫ್ಘಾನಿಸ್ತಾನವು ಆಗಾಗ ಭೂಕಂಪಗಳಿಗೆ ಒಳಗಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್ಸ್​ ಜಂಕ್ಷನ್‌ನ ಸಮೀಪದಲ್ಲಿರುವ ಹಿಂದು ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚು ಭೂಪಂಕಗಳು ಸಂಭವಿಸುತ್ತಿವೆ.

    ಇದನ್ನೂ ಓದಿ: ಯುಗಾದಿ ರಾಶಿಫಲ; ಯಾರಿಗೆ ಏನು?: ಶ್ರೀ ಶೋಭಾಕೃತ ಸಂವತ್ಸರದ ವರ್ಷ ಭವಿಷ್ಯ

    ಉತ್ತರ ಭಾರತ ಮಾತ್ರವಲ್ಲದೆ, ಪಾಕಿಸ್ತಾನದ ಕೆಲವು ನಗರಗಳು ಸಹ ಭೂಕಂಪನ ಅನುಭವಿಸಿವೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಭೂಕಂಪನಕ್ಕೆ ಸಾಕ್ಷಿಯಾಗಿ ಹಂಚಿಕೊಂಡಿರುವ ವಿಡಿಯೋಗಳು ಜನರು ಬೀದಿಗಳಲ್ಲಿ ಜಮಾಯಿಸಿರುವುದನ್ನು ತೋರಿಸುತ್ತದೆ ಮತ್ತು ತಮ್ಮ ಮನೆಗಳಲ್ಲಿ ವಸ್ತುಗಳು ಬಿದ್ದಿರುವುದನ್ನು ಜನರು ವರದಿ ಮಾಡಿದ್ದಾರೆ. ಕೆಲಕಾಲ ಭೂಕಂಪನದ ಅನುಭವವಾದ ಕಾರಣ ಅನೇಕ ಜನರು ತಮ್ಮ ವಸತಿ ಕಟ್ಟಡಗಳನ್ನು ತೊರೆದು, ತೆರೆದ ಜಾಗಕ್ಕೆ ಜಮಾಯಿಸಿರುವುದು ಸಹ ವಿಡಿಯೋಗಳಲ್ಲಿ ಇದೆ. ತಕ್ಷಣಕ್ಕೆ ಯಾವುದೇ ಪ್ರಾಣ ಹಾನಿಯ ಕುರಿತು ವರದಿಯಾಗಿಲ್ಲ.

    ಭೂಕಂಪನ ಅನುಭವ ಆಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಅದರ ಬಗ್ಗೆ ಚರ್ಚಿಸ ತೊಡಗಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ಭೂಕಂಪ ಟ್ರೆಂಡ್​ ಆಗಿತ್ತು. ಭಾರತದಲ್ಲಿ ಜನರು ತಮ್ಮ ಮನೆಗಳಿಂದ ಚಿತ್ರಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು ಮತ್ತು ಭೂಮಿ ಹೇಗೆ ಕಂಪಿಸಿತು ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ. ಭೂಕಂಪ ಸಂಭವಿಸಿದ ತಕ್ಷಣ ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಮೊಬೈಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

    ಇದನ್ನೂ ಓದಿ: ವರ್ಷದ ಮುನ್ನೋಟ: ಈ ಯುಗಾದಿಯಿಂದ ಮುಂದಿನ ಯುಗಾದಿವರೆಗೆ..

    ಡೈನಿಂಗ್ ಟೇಬಲ್ ಅಲುಗಾಡುವುದನ್ನು ಮೊದಲು ಗಮನಿಸಿದ್ದೇನೆ ಎಂದು ನೋಯ್ಡಾ ನಿವಾಸಿಯೊಬ್ಬರು ಹೇಳಿದ್ದಾರೆ. ಫ್ಯಾನ್​ಗಳು ಸಹ ನಡುಗುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ನೋಯ್ಡಾದ ಹೈಡ್ ಪಾರ್ಕ್ ಸೊಸೈಟಿಯ ನಿವಾಸಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಕಾರಾತ್ಮಕ ನೋಟ: ಇಂಧನ ರಂಗದಲ್ಲಿ ಸ್ವಾವಲಂಬನೆ ಸಾಧ್ಯತೆ

    ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ಮುಗಿಸಿದರು ರಕ್ಷಿತ್​ ಶೆಟ್ಟಿ

    ಮಿನುಗುತಾರೆಯೊಂದಕ್ಕೆ ಅಪ್ಪು ಹೆಸರು; ನಕ್ಷತ್ರವಾದ ಪುನೀತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts