More

    ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಮರ, ತಂದೆ-ಮಗ ಸ್ಥಳದಲ್ಲೇ ಸಾವು..

    ಚಾಮರಾಜನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮವಾಗಿ ಕಾರಿನಲ್ಲಿದ್ದ ತಂದೆ ಮಗ ಇಬ್ಬರೂ ಸ್ಥಳದಲ್ಲೇ ದಾರುಣ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.

    ಹೊನ್ನೂರು ಗ್ರಾಮದ ಹೆಚ್.ಬಿ.ರಾಜು (49) ಹಾಗೂ ಇವರ ಪುತ್ರ ಶರತ್ (22) ಸಾವಿಗೀಡಾದವರು. ಯಳಂದೂರಿನಲ್ಲಿ ಹೋಲ್‌ಸೇಲ್ ಅಂಗಡಿ ನಡೆಸುತ್ತಿದ್ದ ರಾಜಣ್ಣ ತಮ್ಮ ಪುತ್ರನೊಂದಿಗೆ ಕಾರಿನಲ್ಲಿ ಕುದೇರು ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

    ಇವರು ಮಾರುತಿ ಒಮ್ನಿಯಲ್ಲಿ ಪ್ರಯಾಣಿಸುತ್ತಿದ್ದು, ಆಲದ ಮರ ಬಿದ್ದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗಿದ್ದ ಇವರಿಬ್ಬರು ಅಪ್ಪಚ್ಚಿಯಾಗಿ ಸಾವಿಗೀಡಾಗಿದ್ದಾರೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಮರ, ತಂದೆ-ಮಗ ಸ್ಥಳದಲ್ಲೇ ಸಾವು..

    ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಮರ, ತಂದೆ-ಮಗ ಸ್ಥಳದಲ್ಲೇ ಸಾವು..

    ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..

    ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts