More

    ಜಮೀನಿನ ಖಾತೆ ಬೇರೊಬ್ಬರಿಗೆ ವರ್ಗಾವಣೆ

    ಭದ್ರಾವತಿ: ಜಮೀನನ್ನು ಅಕ್ರಮವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿಕೊಟ್ಟಿರುವ ಗ್ರಾಮ ಲೆಕ್ಕಿಗ ಹಾಗೂ ರೆವಿನ್ಯೂ ಅಽಕಾರಿಗಳ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಕಚೇರಿ ಎದುರು ಮೈದೊಳಲು, ಡಣಾಯಕಪುರ, ಬೀರಹಳ್ಳಿ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಹೊಳೆಹೊನ್ನೂರು ಭಾಗದ ಮೈದೊಳಲು ಗ್ರಾಮದ ರೈತ ಲೋಕೇಶಪ್ಪ ಎಂಬುವವರು ಕಳೆದ ೫೦ ವರ್ಷಗಳಿಂದಲೂ ಮಲ್ಲಿಗೇನಹಳ್ಳಿಯ ಸರ್ವೇ ನಂ. ೩೧ರಲ್ಲಿ ೧.೦೯ ಎಕರೆ ಜಮೀನು ಉಳುಮೆ ಮಾಡುತ್ತಾ ಬಂದಿದ್ದಾರೆ. ಲೋಕೇಶಪ್ಪ ಅವರ ತಂದೆ ಕಳೆದ ೬ ತಿಂಗಳ ಹಿಂದೆ ನಿಧನರಾಗಿದ್ದು ಅವರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮಾಡಿದ್ದ ಸಾಲವನ್ನು ತೀರಿಸಲು ಹೋದಾಗ ಪಹಣಿ ಪ್ರತಿಗಳು ಪಡೆದಿದ್ದರು. ಪತ್ರದ ದಾಖಲೆಗಳು ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆ ಬದಲಾವಣೆ ಆಗಿರುವುದು ತಿಳಿದು ಬಂದಿದೆ.
    ಖಾತೆ ಬದಲಾವಣೆ ಸಂದರ್ಭದಲ್ಲಿ ಅಕ್ರಮ ದಾಖಲೆಗಳನ್ನು ಹೊಂದಿಸಿ ಕಾನೂನು ಬಾಹಿರವಾಗಿ ಬೇರೊಬ್ಬ ವ್ಯಕ್ತಿಗೆ ಜಮೀನು ಖಾತೆ ಬದಲಾಯಿಸಿರುವ ಗ್ರಾಮ ಲೆಕ್ಕಿಗರು, ಹಾಗೂ ರಾಜಸ್ವ ನಿರೀಕ್ಷಕರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಕಾನೂನು ಬಾಹಿರವಾಗಿ ಖಾತೆ ಮಾಡಿಕೊಳ್ಳಲು ಸುಳ್ಳು ದಾಖಲೆಗಳನ್ನು ಒದಗಿಸಿಕೊಟ್ಟ ಬೇನಾಮಿ ವ್ಯಕ್ತಿಯ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು.
    ರೈತ ಲೋಕೇಶಪ್ಪ ಅವರ ಕುಟುಂಬಕ್ಕೆ ಜಮೀನಿನ ಖಾತೆ ಮರು ಬದಲಾವಣೆ ಮಾಡಿಕೊಡಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಎದುರು ಒಲೆ ಹಚ್ಚಿ, ಅಡುಗೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು. ಸ್ಥಳಕ್ಕೆ ಜಿಲ್ಲಾಽಕಾರಿ, ಉಪವಿಭಾಗಾಽಕಾರಿ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
    ರೈತ ಸಂಘದ ಮುಖಂಡರಾದ ಡಿ.ವಿ.ವೀರೇಶ್, ಯಶವಂತರಾವ್ ಘೋರ್ಪಡೆ, ರಾಮಚಂದ್ರರಾವ್ ಘೋರ್ಪಡೆ, ಎಚ್.ಪಿ.ಹಿರಿಯಣ್ಣ, ಎಂ.ಆರ್.ಮೋಹನ್, ಎಚ್.ಎಸ್.ಮಂಜುನಾಥೇಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts