More

    ಗೋವಿನ ಸ್ಪರ್ಶ ರಕ್ತದೊತ್ತಡ ಮಟ್ಟವನ್ನು ಸಮತೋಲನದಲ್ಲಿರಿಸುತ್ತೆ: ಕೌ ಹಗ್​ ಡೇಗೆ ಯುಪಿ ಸಚಿವರ ಸಮರ್ಥನೆ

    ಲಖನೌ: ಗೋವನ್ನು ಸ್ಪರ್ಶಿಸುವುದು ಅಥವಾ ಅಪ್ಪಿಕೊಳ್ಳುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಉತ್ತರ ಪ್ರದೇಶದ ಪಶುಸಂಗೋಪನೆ ಸಚಿವ ಧರಮ್​ ಪಾಲ್​ ಸಿಂಗ್​ ಬುಧವಾರ (ಫೆ.8) ಹೇಳಿದರು.

    ಫೆ. 14ರ ಪ್ರೇಮಿಗಳ ದಿನವನ್ನು “ಗೋವು ಅಪ್ಪುಗೆ ದಿನ”ವಾಗಿ ಆಚರಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಘೋಷಣೆ ಮಾಡಿರುವ ದಿನದ ಬೆನ್ನಲ್ಲೇ ಧರಮ್​ ಪಾಲ್​ ಸಿಂಗ್​ ಈ ಹೇಳಿಕೆ ನೀಡುವ ಮೂಲಕ ಎಡಬ್ಲ್ಯುಬಿಐ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾನು ಈ ಆದೇಶವನ್ನು ಸ್ವಾಗತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ನಾನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಅಭಿನಂದಿಸುತ್ತೇನೆ. ಗೋವು ನಮ್ಮ ರಾಷ್ಟ್ರದ ತಾಯಿ ಮತ್ತು ನಮ್ಮ ಭಾಗ್ಯವಿದಾತೆ ಎಂದು ಉತ್ತರ ಪ್ರದೇಶ ಸಚಿವರು ಹೇಳಿದ್ದಾರೆ.

    ಎಡಬ್ಲ್ಯುಬಿಐ ಘೋಷಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಮತ್ತು ಟ್ರೋಲ್‌ಗಳು ಹೆಚ್ಚಾಗಿವೆ. ಇದೇ ಸಂದರ್ಭದಲ್ಲಿ ಸಚಿವರು ಮತ್ತು ಪಶುಸಂಗೋಪನಾ ಮಂಡಳಿಯು ಈ ಸಣ್ಣ ಬದಲಾವಣೆಯು ಫೆ. 14 ರ ಸಮಯದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಜನರಲ್ಲಿ ದೀರ್ಘಕಾಲದಿಂದ ಮರೆಯಾಗುತ್ತಿರುವ ನಮ್ಮ ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

    ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಇದು ಸಂಪತ್ತು ಹಾಗೂ ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಮೋಡಿ ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆಯುವಂತೆ ಮಾಡಿಬಿಟ್ಟಿದೆ. ಹಸುವಿನ ಅಪಾರ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು, ಗೋವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಗೋವುಪ್ರಿಯರು ಗೋಮಾತೆಯ ಮಹತ್ವ ಗಮನದಲ್ಲಿಟ್ಟುಕೊಂಡು ಫೆ. 14 ಹಸು ಅಪ್ಪುಗೆ ದಿನವಾಗಿ ಆಚರಿಸಬಹುದು ಮತ್ತು ಜೀವನವನ್ನು ಸಂತೋಷ ಮತ್ತು ಸಕಾರಾತ್ಮಕ ಆಗಿಸಿಕೊಳ್ಳಬಹುದು ಎಂದು ಮಂಡಳಿ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​)

    ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ

    ವರುಣದಲ್ಲಿ ಕೈ ಕಲಿ ಯಾರೆಂಬುದೇ ಕುತೂಹಲ| ಅದೃಷ್ಠದ ನೆಲೆಗೆ ಬರುವರೇ ಮಾಜಿ ಸಿಎಂ

    ಸಂಪಾದಕೀಯ: ಸೂಕ್ತ ಮಾಹಿತಿ ಅಗತ್ಯ; ಶಾಲಾಸಂಬಂಧಿ ಮಾಹಿತಿ ಸಾರ್ವಜನಿಕಗೊಳಿಸಲು ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts