More

    ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

    ಮುಂದುವರಿದ ಭಾಗ..

    ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು...ಜಾಗತಿಕ ತಾಪ ಏರಿಕೆ ಆಮೆಗಳ ಜನನದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿ ಹೆಣ್ಣಿನ ಸಂಖ್ಯೆ ಹೆಚ್ಚಾಗಿ ಗಂಡಿನ ಸಂಖ್ಯೆ ಕಡಿಮೆಯಾಗಬಹುದು. ನಂತರದ ದಿನಗಳಲ್ಲಿ ಸಂತಾನಕ್ರಿಯೆಗೆ ಗಂಡೇ ಸಿಗದೆ, ಹೆಣ್ಣು ತಾಯಿಯಾಗದೆ, ಅವುಗಳ ವಂಶ ನಿರ್ವಂಶವಾಗಬಹುದು. ಆಗ ಜೀವ ವೈವಿಧ್ಯತೆಯೇ ವ್ಯತ್ಯಾಸವಾಗಬಹುದು.

    ಕೋಸ್ಟರಿಕಾ ದೇಶ, ಭಾರತದ ಒಡಿಶಾ, ಚೆನ್ನೈ ಮುಂತಾದ ಸಮುದ್ರದ ತೀರದಲ್ಲಿ ಲಕ್ಷಾಂತರ ಆಮೆಗಳು ಒಂದೇ ದಿವಸ ಬಂದು ಮರಳಿನ ಅಡಿಯಲ್ಲಿ ಮೊಟ್ಟೆಯಿಡುತ್ತವೆ. ಪ್ರತಿಯೊಂದು ಕಡಲಾಮೆಯು ಅಂದಾಜು ನೂರು ಮೊಟ್ಟೆಗಳಿಟ್ಟರೆ, ಒಂದೇ ದಿವಸದಲ್ಲಿ ಕೋಟಿ ಮರಿಗಳು ಹುಟ್ಟುತ್ತವೆ.

    ಅಷ್ಟೊಂದು ಕಡಲಾಮೆಗಳು ಗರ್ಭ ಧರಿಸಬೇಕೆಂದರೆ ಒಂದೇ ದಿವಸದಲ್ಲಿ ಸಂತಾನಕ್ರಿಯೆ ನಡೆಯುತ್ತದೆಯೇ ಎಂಬ ಅನುಮಾನ ಬರುತ್ತದೆ. ಆದರೆ, ಬೇರೆ ಬೇರೆ ಗಂಡಿನ ಜತೆ ಕೆಲವು ದಿನಗಳ ಅಂತರದಲ್ಲಿ ಸಂತಾನಕ್ರಿಯೆ ನಡೆದು ವೀರ್ಯಾಣುಗಳನ್ನು ತನ್ನ ಗರ್ಭಕೋಶದಲ್ಲಿ ಮುಂದಿನ ಎಪ್ಪತ್ತೈದು ದಿವಸಗಳವರೆಗೆ ಶೇಖರಣೆ ಮಾಡಿ ಯಾವಾಗಬೇಕಾದರೂ ಮೊಟ್ಟೆಗಳಾಗಬಹುದು. ಕೆಲವು ಉಪಜಾತಿಯ ಆಮೆಗಳು ಏಕಪತ್ನಿವ್ರತಸ್ತನಂಥವು, ಇನ್ನೂ ಕೆಲವು ಬಹುಪತಿತ್ವ, ಬಹುಪತ್ನಿತ್ವದವು. ಆದರೆ, ಎಲ್ಲ ಆಮೆಗಳು ಒಂದೇ ದಿವಸ ಹೇಗೆ ಮೊಟ್ಟೆ ಇಡುತ್ತವೆ? ಇವುಗಳು ಮಾತನಾಡಿಕೊಳ್ಳುತ್ತವೆಯೇ? ಇದು ಹೇಗೆ ಸಾಧ್ಯ? ಒಂದಲ್ಲ ಎರಡಲ್ಲ, ಲಕ್ಷಾಂತರ ಆಮೆಗಳು ಮಾತನಾಡಿಕೊಳ್ಳಬೇಕು. ಇವುಗಳು ಸಂಘಜೀವಿಗಳೂ ಅಲ್ಲ. ಎಲ್ಲ ಆಮೆಗಳೂ ನೂರಾರು, ಸಾವಿರಾರು ಕಿ.ಮೀ. ಅಂತರದಿಂದ ಬೇರೆ ಬೇರೆ ದಿಕ್ಕಿನಿಂದ ಒಂದೇ ದಡಕ್ಕೆ ಬರುವುದಾದರೂ ಹೇಗೆ? ಇದಲ್ಲದೆ ಸಮುದ್ರದ ನೀರಿನ ಉಷ್ಣಾಂಶ ಇದನ್ನು ನಿರ್ಧಾರ ಮಾಡಬಹುದೇ? ಅಥವಾ ಭೂಮಿಯ ಕಾಂತೀಯ ಶಕ್ತಿ ನಿರ್ಧಾರ ಮಾಡಬಹುದೇ? ಹೇಗೆ? ಒಂದೊಂದು ಆಮೆಯೂ ನೂರು, ನೂರಿಪ್ಪತ್ತು, ನೂರೈವತ್ತು, ಇನ್ನೂರು ಮೊಟ್ಟೆ ಇಡುತ್ತವೆ. ಅಷ್ಟೊಂದು ಮೊಟ್ಟೆಗಳನ್ನು ಇಡಲು ಅಷ್ಟೊಂದು ಆಮೆಗಳು ಜಾಗವನ್ನು ಪ್ರತ್ಯೇಕವಾಗಿ ಹೇಗೆ ತಯಾರಿ ಮಾಡಿಕೊಳ್ಳುತ್ತವೆ? ಎಲ್ಲ ಮೊಟ್ಟೆಗಳೂ ಮರಿಗಳಾಗುವುದಿಲ್ಲ. ಅಂದರೆ, ಉಳಿದ ಮೊಟ್ಟೆಗಳ ಪರಿಣಾಮ ಏನಾಗಬಹುದು? ಅವುಗಳನ್ನು ಕರಗಿಸಲು ಆ ಮರಳಿನಲ್ಲಿ ಎಂತಹ ಕ್ರಿಮಿ ಕೀಟಗಳು, ಹುಳಗಳು, ಸೂಕ್ಷ್ಮಜೀವಿಗಳು ಇರಬಹುದು? ಇದೆಲ್ಲದಕ್ಕೂ ಉತ್ತರ ನಾಳೆ ನೋಡಿ.

    ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

    ಬಿಗ್​ ಬಾಸ್​ ಮನೆಯಲ್ಲಿ ಎರಡೆರೆಡು ಲವ್​ ಸ್ಟೋರಿ! ಶುಭಾ ಮದುವೆ ನಂತರ ಇವರ ಮದುವೆ ಫಿಕ್ಸ್​ ಅಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts