More

    ಕಡಲು ಸೇರಿದ 200 ಒಲಿವ್ ರಿಡ್ಲಿ ಆಮೆ ಮರಿಗಳು

    ಕಾರವಾರ: ಕಡಲ ತೀರದಲ್ಲಿ ಸೇರಿದ್ದವರಲ್ಲಿ ಏನೋ ಸಂಭ್ರಮ. ಮನೆಯಲ್ಲಿ ಮಕ್ಕಳು ಹುಟ್ಟಿದಷ್ಟೇ ಖುಷಿ. ಅದಕ್ಕೆ ಕಾರಣ ಕಪ್ಪು ಕಡಲಾಮೆಗಳು…

    ಹೊನ್ನಾವರದ ಕಾಸರಕೋಡು ಟೊಂಕಾ ಕಡಲ ತೀರದಲ್ಲಿ ಕಳೆದ 45 ದಿನದ ಹಿಂದೆ ಮೊಟ್ಟೆ ಇಟ್ಟಿದ್ದ ಒಲಿವ್ ರಿಡ್ಲಿ ಪ್ರಭೇದಕ್ಕೆ ಸೇರಿದ್ದ ಕಡಲ ಆಮೆಗಳ 200ಕ್ಕೂ ಅಧಿಕ ಮೊಟ್ಟೆಗಳು ಭಾನುವಾರ ಬೆಳಗಿನಜಾವ ಒಡೆದು ಮರಿಗಳಾಗಿವೆ. ಅದನ್ನು ಸ್ಥಳೀಯ ಮೀನುಗಾರರು, ಅರಣ್ಯ ಇಲಾಖೆ ಹಾಗೂ ಕಡಲ ಜೀವಶಾಸ್ತ್ರಜ್ಞರ ಸಮ್ಮುಖದಲ್ಲಿ ಕಡಲಿಗೆ ಬಿಡಲಾಯಿತು.

    ಹೊನ್ನಾವರ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಅದೇ ಭಾಗದಲ್ಲಿ ಕಡಲಾಮೆಗಳು ಬಂದು ಮೊಟ್ಟೆ ಇಟ್ಟಿದ್ದವು. ಸಾಮಾನ್ಯವಾಗಿ ಮರಳಿನಡಿ ಆಮೆಗಳು ಇಡುವ ಮೊಟ್ಟೆಗಳನ್ನು ನಾಯಿಗಳು, ಹಾವು ತಿಂದು ಹಾಳು ಮಾಡುವುದು ಜಾಸ್ತಿ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರಾದ ರಮೇಶ, ನರಸಿಂಹ, ಭಾಸ್ಕರ, ಚಿದಂಬರ, ಚಂದ್ರ, ಗಣಪತಿ, ವಿನಾಯಕ, ರಾಜು, ಜಗದೀಶ, ಪ್ರೀತಿ ತಾಂಡೇಲ ಇತರರು ಅವುಗಳ ಸುತ್ತ ಬೇಲಿ ಕಟ್ಟಿ ರಕ್ಷಣೆ ಮಾಡಿದ್ದರು.

    ಈಗ ಮೊಟ್ಟೆಗಳು ಒಡೆದು ಪುಟ್ಟ ಪುಟ್ಟ ಕಪ್ಪು ಮರಿಗಳು ಹೊರ ಬಂದಿವೆ. ಭಾನುವಾರ ರಾಜ್ಯ ಜೀವ ವೈವಿಧ್ಯ ಮಂಡಳಿ ಸದಸ್ಯ ಪ್ರಕಾಶ ಮೇಸ್ತ, ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಕಾರವಾರ ಕಡಲ ಜೀವ ಶಾಸ್ತ್ರ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts