More

    ಭಾರತಕ್ಕೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​ ಭಯೋತ್ಪಾದಕನ ಹತ್ಯೆ

    ನವದೆಹಲಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​ ಉಗ್ರನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಮಸೀದಿಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕ್​ ಆಕ್ರಮಿತ ಕಾಶ್ಮೀರದ ರಾವಲ್​ಕೋಟ್​ನಲ್ಲಿ ನಡೆದಿದೆ.

    ಮೃತನನ್ನು ಲಷ್ಕರ್​-ಇ-ತೊಯ್ಬಾ (LET) ಸಂಘಟನೆಯ ಉನ್ನತ ಕಮಾಂಡರ್​ ರಿಯಾಜ್​ ಅಹ್ಮದ್​ ಅಲಿಯಾಸ್​ ಅಬು ಖಾಸಿಂ ಎಂದು ಗುರುತಿಸಲಾಗಿದೆ. ಈತನನ್ನು ರಾವಲ್​​ಕೋಟ್​ನಲ್ಲಿರುವ ಖುದ್ದೂಸ್​ ಮಸೀದಿಯೊಳಗೆ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಲು ತೆರಳಿದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820ಕ್ಕೆ ಏರಿಕೆ

    ಜಮ್ಮು-ಕಾಶ್ಮೀರದ ಪೂಂಚ್​​​ ಜಿಲ್ಲೆಯ ನಿವಾಸಿಯಾದ ಉಗ್ರ ಅಹ್ಮದ್​ನನ್ನು 1999ರಲ್ಲಿ ಭಾರತದಿಂದ ಗಡಿಯಾಚೆ ನುಸುಳಿ ಉಗ್ರ ಸಂಘಟನೆ ಸೇರಿಕೊಂಡಿದ್ದ. ಜನವರಿ 1ರಂದು ಜಮ್ಮು-ಕಾಶ್ಮೀರದ ಧಾಂಗ್ರಿಯಲ್ಲಿ ನಡೆದ ಉಗ್ರ ದಾಳಿ ಹಿಂದಿನ ಮಾಸ್ಟರ್​ಮೈಂಡ್​ಗಳಲ್ಲಿ ಈತ ಒಬ್ಬನಾಗಿದ್ದ. ಅವಳಿ ಗಡಿ ಜಿಲ್ಲೆಗಳಾದ ಪೂಂಚ್​ ಮತ್ತು ರಜೌರಿಯಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಈತ ಮಾಸ್ಟರ್​ ಮೈಂಡ್​ ಆಗಿದ್ದ ಎಂದು ಹೇಳಲಾಗಿತ್ತು.

    ಅಹ್ಮದ್ ಹೆಚ್ಚಾಗಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಬೇಸ್ ಕ್ಯಾಂಪ್​ನಿಂದ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಇತ್ತೀಚೆಗೆ ರಾವಲಕೋಟ್​ಗೆ ಸ್ಥಳಾಂತರಗೊಂಡಿದ್ದನು. ಈತ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಸಜ್ಜಾದ್ ಜಾತ್​ನ ನಿಕಟವರ್ತಿಯಾಗಿದ್ದು, ಸಂಘಟನೆಯ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts