More

    ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

    ಬರ್ಲಿನ್​: ಜಾಗತಿಕವಾಗಿ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡು ಭೀತಿ ಸೃಷ್ಟಿಸಿರುವ ಮಾರಕ ಕರೊನಾ ವೈರಸ್​ ಆರೋಗ್ಯದ ಮಹತ್ವವನ್ನು ಸಾರಿದೆ. ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಅನೇಕರು ಆರೋಗ್ಯ ವೃದ್ಧಿಗೆ ಗಮನ ನೀಡುತ್ತಿದ್ದು, ಕರೊನಾ ವಿರುದ್ಧ ಹೋರಾಡಲು ಪ್ರತಿರೋಧಕ ವ್ಯವಸ್ಥೆ(ಇಮ್ಯೂನಿಟಿ ಸಿಸ್ಟಮ್​) ಬಲವಾಗಿಬೇಕೆಂಬುದು ಪರಿಣಿತರ ಸಲಹೆಯಾಗಿದೆ. ಹೀಗಾಗಿ ಅದನ್ನು ದುರ್ಬಲಗೊಳಿಸದಿರಲು ಜನರು ಈ ಒಂದು ಅಂಶವನ್ನು ಗಮನದಲ್ಲಿಡಬೇಕು.

    ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಆದರೆ, ಅದೇ ಉಪ್ಪಿನಾಂಶ ಅಧಿಕವಾದರೆ ನಿಮ್ಮ ಪ್ರತಿರೋಧಕ ವ್ಯವಸ್ಥೆಯನ್ನೇ ದುರ್ಬಲಗೊಳಿಸುವುದರೊಂದಿಗೆ ಬ್ಯಾಕ್ಟಿರೀಯಾ ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ದೇಹ ಸ್ಪಂದಿಸದಂತೆ ಮಾಡುತ್ತದೆ ಎಂಬುದು ಹೊಸ ಸಂಶೋಧನೆಯೊಂದರಿಂದ ಬಹಿರಂಗವಾಗಿದೆ.

    ಜರ್ಮನಿಯ ಬೊನ್ನಾ ಯೂನಿವರ್ಸಿಟಿ ಹಾಸ್ಪಿಟಲ್​ನ ಸಂಶೋಧಕರು ಹೆಚ್ಚಿನ ಉಪ್ಪಿನಾಂಶವಿರುವ ಆಹಾರವನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ್ದು, ಇದರ ಫಲಿತಾಂಶವಾಗಿ ಇಲಿಗಳು ಗಂಭೀರ ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡಲು ತುಂಬಾ ಬಳಲಿದವು ಎಂದು ತಿಳಿದುಬಂದಿದೆ.

    ಸ್ವಯಂಪ್ರೇರಿತ ಮಾನವರ ಮೇಲೂ ಪ್ರಯೋಗ ನಡೆಸಲಾಗಿದೆ. ಪ್ರತಿದಿನ 6 ಗ್ರಾಂ ಅಧಿಕ ಉಪ್ಪಿನಾಂಶವಿರುವ ಆಹಾರವನ್ನು ನೀಡಿ ಪರೀಕ್ಷಿಸಿದಾಗ ಅವರಲ್ಲಿ ಇಮ್ಯೂನಿಟಿ ಸಿಸ್ಟಮ್​ ದುರ್ಬಲಗೊಳ್ಳುತ್ತಿರುವುದು ಕಂಡುಬಂದಿದೆ.

    ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ)ಯು ಕೂಡ ಸಲಹೆಯನ್ನು ನೀಡಿದೆ. ಪ್ರತಿದಿನ 0.17 ಔನ್ಸ್​(4.84 ಗ್ರಾಂ) ಉಪ್ಪನ್ನು ಸೇವಿಸಬೇಕೆಂದು ಹೇಳಿದೆ. ಬೊನ್ನಾ ಯೂನಿವರ್ಸಿಟಿ ಪ್ರಾಧ್ಯಾಪಕ ಕ್ರಿಶ್ಚಿಯನ್​ ಕರ್ಟ್ಸ್​ ಹೇಳುವಂತೆ ಅತಿಯಾದ ಉಪ್ಪನ್ನು ಸೇವಿಸುವುದರಿಂದ ದೇಹಕ್ಕೆ ಮುಖ್ಯವಾದ ಪ್ರತಿರೋಧಕ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತದೆ ಎಂಬುದು ನೂತನ ಸಂಶೋಧನೆಯಲ್ಲಿ ತಿಳಿದುಬಂದಿದೆ.

    ದೇಹವು ಉಪ್ಪಿನ ಸಾಂದ್ರತೆಯನ್ನು ರಕ್ತದಲ್ಲಿ ಇರಿಸುತ್ತದೆ ಮತ್ತು ವಿವಿಧ ಅಂಗಗಳಲ್ಲಿ ಹೆಚ್ಚಾಗಿ ಸ್ಥಿರವಾಗಿರುತ್ತದೆ ಇಲ್ಲದಿದ್ದರೆ ಪ್ರಮುಖ ಜೈವಿಕ ಪ್ರಕ್ರಿಯೆಯು ಕಾರ್ಯನಿರ್ವಹಿಸುವುದಿಲ್ಲ ಎಂದು ಕ್ರಿಶ್ಚಿಯನ್​ ಕರ್ಟ್ಸ್​ ಹೇಳಿದ್ದು, ಚರ್ಮ ಸಂಬಂಧ ಸೋಂಕುಗಳಲ್ಲಿ ಮಾತ್ರ ಉಪ್ಪಿನ ಮೂಲ ಕೆಲಸ ಮಾಡುತ್ತದೆ. ಹೀಗಾಗಿ ಸೋಡಿಯಂ ಕ್ಲೋರೈಡ್​ ಚರ್ಮ ಸಂಬಂಧಿ ರೋಗಗಳಿಗೆ ಮಾತ್ರ ಸರಿ. ಆದರೆ, ದೇಹದೊಳಗಿನ ಕ್ರಿಯೆಗೆ ಸಂಬಂಧಿಸಿರುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ

    ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts