More

    ಹಳಿಯಾಳದಲ್ಲಿ ಗುರುಪೂರ್ಣಿಮೆ ನಾಳೆ

    ಹಳಿಯಾಳ: ಪಟ್ಟಣದಲ್ಲಿ ಜು. 9ರಂದು ಗುರುಪೂರ್ಣಿಮೆ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಮಾಜದ ಎಲ್ಲರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ ಎಂದು ಮರಾಠಾ ಜಗದ್ಗುರು ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.

    ಸ್ವಾಮೀಜಿಗಳ ನೇತೃತ್ವದಲ್ಲಿ ಗುರು ಪೂರ್ಣಿಮೆ ಮಹೋತ್ಸವ ನಡೆಸಲು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಮರಾಠಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

    ಗುರುಪೂರ್ಣಿಮೆ ಕಾರ್ಯಕ್ರಮ ಯಾವುದೇ ಜಾತಿ, ಪಂಥ, ಸಮಾಜಕ್ಕೆ ಸೀಮಿತವಾಗಿಲ್ಲ. ಕಾರಣ ಎಲ್ಲ ಧರ್ಮ, ಜಾತಿ, ಸಮುದಾಯದವರು ಹಾಗೂ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷದವರು, ವಿವಿಧ ಸಂಘ-ಸಂಸ್ಥೆಯವರು ತಪ್ಪದೇ ಆಗಮಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಕಾರ್ವಿುಕ ಸಚಿವ ಸಂತೋಷ ಲಾಡ್, ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್, ಕೆಕೆಎಂಪಿ ಅಧ್ಯಕ್ಷ ಸುರೇಶ ರಾವ್ ಸಾಠೆ, ಕೆಕೆಎಂಒ ಅಧ್ಯಕ್ಷ ಶ್ಯಾಮಸುಂದರ ಗಾಯಕವಾಡ, ಮಾಜಿ ಶಾಸಕ ಸುನೀಲ ಹೆಗಡೆ, ಮಾಜಿ ಎಂಎಲ್​ಸಿ ಎಸ್.ಎಲ್. ಘೊಟ್ನೇಕರ್, ವೀರ ಶಿವಾಜಿ ಸೇನೆ ಅಧ್ಯಕ್ಷ ಕಮಲೇಶ ಪಡತಾರೆ, ಮರಾಠಾ ವಿದ್ಯಾವರ್ಧಕ ಸಂಸ್ಥೆ ಧಾರವಾಡದ ಅಧ್ಯಕ್ಷ ಮನೋಹರ ಮೋರೆ ಇತರರು ಭಾಗವಹಿಸಲಿದ್ದಾರೆ ಎಂದರು. ಬಳಿಕ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು.

    ಪ್ರಮುಖರಾದ ಕೆಕೆಎಂಪಿ ಜಿಲ್ಲಾಧ್ಯಕ್ಷ ಪ್ರಕಾಶ ಪಾಕ್ರಿ, ತಾಲೂಕಾಧ್ಯಕ್ಷ ಚೂಡಪ್ಪ ಬೊಬಾಟಿ, ಪ್ರಮುಖರಾದ ಸುಭಾಶ ಕೊರ್ವೆಕರ, ಚಂದ್ರಕಾಂತ ಕಮ್ಮಾರ, ತಾನಾಜಿ ಪಟ್ಟೇಕಾರ, ನಾರಾಯಣ ಟೋಸುರ, ಟಿ.ಆರ್. ನಾಕಾಡಿ, ದೇಮಾನಿ ಶಿರೋಜಿ, ಸಂಜು ಕೋಳೂರ, ಯಲ್ಲಪ್ಪ ಮಾಲವನಕರ, ಸಂತೋಷ ಮಿರಾಶಿ, ಅರುಣ ಗೋಂಧಳಿ, ಅಶೋಕ ಮಿರಾಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts