More

    ರಾಜ್ಯದಲ್ಲೇ ಮೊದಲ “ಅಸೆಂಬ್ಲಿ ಫಿಟ್ಟರ” ತರಬೇತಿ ಹಳಿಯಾಳ ದೇಶಪಾಂಡೆ ಐಟಿಐಯಲ್ಲಿ ಆರಂಭ

    ಹಳಿಯಾಳ: ದೇಶಪಾಂಡೆ ಐಟಿಐ ಕಾಲೇಜ್‌ “ಅಸೆಂಬ್ಲಿ ಫಿಟ್ಟರ” ತರಬೇತಿಯನ್ನು ಆರಂಭಿಸಿದ ಕರ್ನಾಟಕ ರಾಜ್ಯದ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಳಿಯಾಳದ ವಿಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಟ್ರಸ್ಟಿ ಪ್ರಸಾದ ಆರ್. ದೇಶಪಾಂಡೆ ಹೇಳಿದರು.

    ಪಟ್ಟಣದ ದೇಶಪಾಂಡೆ ಆರ್ ಸೆಟಿಯಲ್ಲಿ ಬುಧವಾರ ಆಯೋಜಿಸಿದ್ದ “ಅಸೆಂಬ್ಲಿ ಫಿಟ್ಟರ” ತರಬೇತಿಗೆ ಚಾಲನೆ ನೀಡಿ ಹಾಗೂ ತರಬೇತಿ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದರು. 

    ವಿದ್ಯಾರ್ಥಿಗಳು ಈ ಹೆಚ್ಚುವರಿ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ದೇಶಪಾಂಡೆ ಕರೆ ನೀಡಿದರು.

    ಆಡಳಿತಾಧಿಕಾರಿ  ಪ್ರಕಾಶ ಪ್ರಭು ಮಾತನಾಡಿ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಉತ್ಕೃಷ್ಟ ಕೌಶಲ್ಯ ಸಂವರ್ಧನ ತರಬೇತಿಗಾಗಿ ಖ್ಯಾತ ವಾಹನ ಉತ್ಪಾದನ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್‌ ಮೋಟಾರದ ಜೊತೆ ಅಸೆಂಬ್ಲಿ ಫಿಟ್ಟರ ತರಬೇತಿ ಪ್ರಾರಂಭಿಸುವ ಸಲುವಾಗಿ ಆಗಸ್ಟ ನಲ್ಲಿ ಒಡಂಬಡಿಕೆ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ ಫಿಟ್ಟರ ವೃತ್ತಿಯ ತರಬೇತಿಯ ಜೊತೆಗೆ  ಕೈಗಾರಿಕೆಗಳಿಗೆ ಬೇಕಾದ ಕೌಶಲದ ಅಗತ್ಯವನ್ನು ಪೂರೈಸಲು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ನೆರವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ  ಟೊಯೋಟಾ ಕಿರ್ಲೋಸ್ಕರ್  ಮೋಟರ್ಸ್ ನ ಅಧಿಕಾರಿ ಸಿದ್ಧಲಿಂಗೇಶ್ವರ ಶೆಟ್ಟರ, ಸಿಬಿಡಿ ಆರ್ ಸೆಟಿಯ ಹಿರಿಯ ಸಲಹೆಗಾರ ಆನಂತಯ್ಯ ಆಚಾರ ಇದ್ದರು. ‌ ಪ್ರಾಚಾರ್ಯ ದಿನೇಶ ಆರ್. ನಾಯ್ಕ ಸ್ವಾಗತಿಸಿದರು, ಸುಕುಮಾರ ಉಪಾಧ್ಯೆ ವಂದಿಸಿದರು.

    ಇದನ್ನೂ ಓದಿ: ಡಿಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹಣ ಲಪಟಾಯಿಸಿದ ಖದೀಮರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts