More

    ಸಿದ್ದಿ ಡಮಾಮಿ ಕಲಾವಿದೆ ಹುಸೇನಾಬಿ ಸಿದ್ದಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಳಿಯಾಳ: ತಾಲೂಕಿನ ಸಾಂಬ್ರಾಣಿ ಗ್ರಾಮದ ಹುಸೇನಾಬಿ ಬುಡೇನ್‌ಸಾಬ್‌ ಸಿದ್ದಿ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಿದ್ದಿ ಡಮಾಮಿ ನೃತ್ಯ ಕಲಾವಿದರಾಗಿರುವ ಅವರು ಸಾಂಪ್ರದಾಯಿಕ ಸಿದ್ದಿನಾಸ ಹಾಡುಗಳಿಗೂ ಪ್ರಸಿದ್ಧರು.

    103 ವರ್ಷದ ಹುಸೇನಾಬಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ 2019 ರ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಅವರಿಗೆ ರಾಜ್ಯೋತ್ಸವದ ಗರಿ ಲಭಿಸಿದೆ. ಹುಸೇನಾಬಿ ಅವರು ತಮ್ಮ ಪೂರ್ವಜರಿಂದ ಬಂದ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನೂರಾರು ಹಾಡುಗಳನ್ನು ಬಾಯಲ್ಲೇ ಹೇಳಬಲ್ಲವರಾಗಿದ್ದಾರೆ. ನೂರಾರು ಮದುವೆ ಹಾಗೂ ಹಲವು ವಿಶೇಷ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ.

    ಕಪ್ಪು ನಿಗ್ರೋ ಸಮುದಾಯಕ್ಕೆ ಸೇರಿದ ಸಿದ್ದಿಗಳು ಉತ್ತರ ಕನ್ನಡ ಹಾಗೂ ಬೆಳೆಗಾವಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಮಾತ್ರ ಇದ್ದಾರೆ. ವಿವಿಧ ಧರ್ಮದ ಅನುಯಾಯಿಗಳು ಇದ್ದಾರೆ. ಆದರೆ, ಎಲ್ಲರೂ ಪರಿಸ್ಪರ ವಿವಾಹವಾಗುವುದಲ್ಲದೇ ಸಿದ್ದಿ ಮೂಲ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಉಳಿದೆಲ್ಲವಕ್ಕಿಂತ ಸಿದ್ದಿ ಸಮುದಾಯದ ಆಚರಣೆಗಳು ಭಿನ್ನವಾಗಿವೆ.

    ಮುಖ್ಯವಾಗಿ ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಕಾಡು ಸೊಪ್ಪಿನ ಎಲೆಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಮಾಡುವ ಸಿದ್ದಿ ಡಮಾಮಿ ನೃತ್ಯ ಸಾಕಷ್ಟು ಪ್ರಸಿದ್ಧವಾಗಿದೆ. ಮದುವೆಗಳಲ್ಲಿ ಸಿದ್ದಿನಾಸ ಹಾಡುಗಳನ್ನು ಹೇಳಲಾಗುತ್ತದೆ.

    ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ತಿಳಿಯುತ್ತಿದ್ದಂತೆ ಸಾಂಬ್ರಾಣಿ ಗ್ರಾಪಂನಿಂದ ಹುಸೇನಾಬಿ ಅವರ ಮನೆಗೆ ತೆರಳಿ ಸನ್ಮಾನ ಮಾಡಲಾಯಿತು.

    ಇದನ್ನೂ ಓದಿ: 27 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಸಭೆ ಕರೆಯದೇ ಆಯ್ಕೆ ನಡೆಸಿದ ಬಗ್ಗೆ ಕಸಾಪ ಆಕ್ಷೇಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts