More

    ಇಂದಿನದು ನಾಚಿಕೆಗೇಡಿನ ರಾಜಕಾರಣ

    ಅಂಕೋಲಾ: ಮಠ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ರಾಜಕೀಯ ನುಸುಳಿ ಹೇಸಿಗೆ ಹುಟ್ಟಿಸುವಂತಾಗಿದೆ ಎಂದು ಆರ್​ಎಸ್​ಎಸ್ ಪ್ರಚಾರಕ ರವೀಂದ್ರ ಹೇಳಿದರು.

    ತಾಲೂಕಿನ ಬಾಸಗೋಡದಲ್ಲಿ ಪಹರೆ ವೇದಿಕೆಯಿಂದ ಏರ್ಪಡಿಸಿದ್ದ ಜ್ಞಾನಸತ್ರ 14ನೇ ವರ್ಷದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಭು ಶ್ರೀ ರಾಮ ಕೂಡ ರಾಜಕಾರಣಿಯಾಗಿದ್ದ. ಆದರೆ, ಅವತ್ತಿನ ರಾಜಕಾರಣವನ್ನು ಇಂದಿಗೆ ಹೋಲಿಸಿದರೆ ನಿಜಕ್ಕೂ ಖೇದವಾಗುತ್ತದೆ. ಸ್ವಾತಂತ್ರ್ಯಾನಂತರ ರಾಜಕೀಯ ಎನ್ನುವ ಪದ ನಾಚಿಕೆಗೇಡಿನ ಸಂಗತಿಯಾಗಿದೆ. ರಾಜಕೀಯಕ್ಕೆ ಬರುವವರು ಸನ್ಯಾಸಿಯಂತಹ ಮನಸ್ಥಿತಿ ಉಳ್ಳವರಾಗಿರಬೇಕು. ಆದರೆ, ಇಲ್ಲಿರುವುದು ಕೇವಲ ಸ್ವಾರ್ಥ ಸಾಧನೆ ಎಂದರು.

    500 ವರ್ಷಗಳ ನಿರಂತರ ಹೋರಾಟ ಮಾಡಿದ ಉದಾಹರಣೆಗಳಿದ್ದರೆ ಅದು ಅಯೋಧ್ಯೆಯಲ್ಲಿ ಮಾತ್ರ. ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಕಟ್ಟಡಗಳನ್ನು ಕೆಡವಿ ಬಾಬರ್ ಮಸೀದಿಯನ್ನು ನಿರ್ವಿುಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುದೀರ್ಘ ಹೋರಾಟಗಳು ನಡೆದು ಕೊನೆಗೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ರಾಮ ಮಂದಿರ ನಿರ್ವಣಕ್ಕೆ ಚಾಲನೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ವೆಂಕಣ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಸತ್ರದ ರೂವಾರಿ ನಾಗರಾಜ ನಾಯಕ ಸ್ವಾಗತಿಸಿದರು. ರೇಖಾ ಹೆಗಡೆ ರಾಮ ಗೀತೆ ಹಾಡಿದರು. ಆನಂದ ಭಾಗವತ ಯಕ್ಷಗಾನ ಗೀತೆ ಪ್ರಸ್ತುತಪಡಿಸಿದರು. ಶಿಕ್ಷಕ ರಾಜೇಶ ಮಾಸ್ತರ ನಿರ್ವಹಿಸಿದರು. ಗಂಗಾ ನಾಯಕ ವಂದಿಸಿದರು.

    ಐತಿಹಾಸಿಕ ಸ್ಥಳ: ಅಯೋಧ್ಯ ವಾಸ್ತುಶಿಲ್ಪಿ ರಾಮ ನಾಯಕ ಮಾತನಾಡಿ, ದೇಶದ ಪ್ರಖ್ಯಾತ ದೇವಾಲಯಗಳ ವಾಸ್ತುಶಿಲ್ಪಗಳನ್ನು ಅಧ್ಯಯನ ಮಾಡಿದ ಖ್ಯಾತ ಶಿಲ್ಪಿ ಡಾ. ರಾಮಪುರಿ ಇವರ ನೇತೃತ್ವದಲ್ಲಿಯೇ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದೊಂದು ದಿನ ಇದೊಂದು ಐತಿಹಾಸಿಕ ಸ್ಥಳವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts