More

    ಲಾಕ್​ಡೌನ್ 5.0 ಇಂದು ನಿರ್ಧಾರ? ಇನ್ನೆರಡು ವಾರ ನಿರ್ಬಂಧ ವಿಸ್ತರಣೆಯಾಗುವ ಸಾಧ್ಯತೆ

    ನವದೆಹಲಿ: ಕರೊನಾ ಸೋಂಕು ಪ್ರಸರಣ ತಡೆಯಲು ವಿಧಿಸಲಾಗಿರುವ ನಿರ್ಬಂಧವನ್ನು (ಲಾಕ್​ಡೌನ್) 5ನೇ ಹಂತಕ್ಕೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ ಮಹತ್ವದ ಸಭೆ ನಡೆಸಿದ್ದಾರೆ. ಇನ್ನೂ ಎರಡು ವಾರ ಲಾಕ್​ಡೌನ್ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಒಲವು ಹೊಂದಿದೆ ಎನ್ನಲಾಗಿದೆ. ಈ ಕುರಿತು ಶನಿವಾರ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ. ಲಾಕ್​ಡೌನ್ 5.0ರಲ್ಲಿ ಕೈಗೊಳ್ಳಬೇಕಾದ ನಿರ್ಬಂಧ ಮತ್ತ ಸಡಿಲಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಯಾವ ನಿಯಮ ಕಠಿಣಗೊಳಿಸಬೇಕು? ಯಾವುದಕ್ಕೆ ವಿನಾಯಿತಿ ನೀಡಬೇಕು? ಇಂಥ ನಿರ್ಧಾರದಿಂದ ಆರ್ಥಿಕ ಚಟುವಟಿಕೆ ಮೇಲೆ ಉಂಟಾಗುವ ಪರಿಣಾಮ ಕುರಿತು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿ ಉನ್ನತ ಅಧಿಕಾರಿಗಳೊಂದಿಗೆ ಮೋದಿ ಮತ್ತು ಷಾ ಚರ್ಚೆ ನಡೆಸಿದ್ದಾರೆ. ನಿರ್ಬಂಧ ಸಡಿಲಿಕೆಯಿಂದ ವಿವಿಧ ವಲಯ ಮತ್ತು ರಾಜ್ಯಗಳಲ್ಲಿ ಆಗಿರುವ ಪರಿಣಾಮ ಹಾಗೂ ಸೋಂಕು ಹೆಚ್ಚಳದ ಮಾಹಿತಿಯನ್ನು ವಿಶ್ಲೇಷಣಾತ್ಮಕ ವರದಿಯೊಂದಿಗೆ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ಪ್ರಧಾನಿ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರಿಯಕರ ಮದುವೆ ಆಗಲ್ಲ ಅಂದರೂ ಪೊಲೀಸ್ ಸ್ಟೇಷನ್‌ಗೆ ಕರೆಸಿ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ!

    ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಲಾಕ್​ಡೌನ್ ವಿಸ್ತರಣೆ ಮಾಡಿವೆ. ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯನ್ನು ನಿರೀಕ್ಷಿಸುತ್ತಿವೆ. ದಿಗ್ಬಂಧನವನ್ನು 15 ದಿನ ವಿಸ್ತರಿಸಲು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಇಚ್ಛಿಸಿದ್ದಾರೆ. ಹಿಮಾಚಲ ಪ್ರದೇಶದ ಎರಡು ಜಿಲ್ಲೆಗಳಲ್ಲಿ ಜೂ. 30ರವರೆಗೂ ಲಾಕ್​ಡೌನ್ ವಿಸ್ತರಿಸಲಾಗಿದೆ.

    ಧಾರ್ವಿುಕ ಕೇಂದ್ರ ತೆರೆಯಲು ಅನುಮತಿಗೆ ಮನವಿ

    ಧಾರ್ವಿುಕ ಕೇಂದ್ರಗಳ ನಿರ್ಬಂಧ ತೆರವುಗೊಳಿಸಬೇಕು ಎಂದು ಕರ್ನಾಟಕ ಸಹಿತ ಕೆಲ ರಾಜ್ಯಗಳು ಮನವಿ ಮಾಡಿವೆ. ಆದರೆ, ಇದರಿಂದ ಅನೇಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದರೆ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು ಎಂಬುದು ಗೃಹ ಸಚಿವಾಲಯದ ಆತಂಕ.

    ಸಂಭಾವ್ಯ ನಿರ್ಬಂಧಗಳು
    • ಕಂಟೇನ್ಮೆಂಟ್ ವಲಯದಲ್ಲಿ ನಿರ್ಬಂಧ ಕಟ್ಟುನಿಟ್ಟು.
    • ಕೋವಿಡ್-19 ಪ್ರಸರಣಕ್ಕೆ ಕಾರಣವಾದ ಕೆಲ ಚಟುವಟಿಕೆಗೆ ನಿರ್ಬಂಧ. 
    • ಶಾಲಾ, ಕಾಲೇಜು, ಧಾರ್ವಿುಕ ಸ್ಥಳ, ಸಿನಿಮಾ ಮಂದಿರ ಬಂದ್ ಮುಂದುವರಿಕೆ.
    • ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸದಂತೆ ನಿರ್ಬಂಧ.
    • ಆರೋಗ್ಯ ಸಚಿವಾಲಯದ ಮಾರ್ಗದರ್ಶಿಯ ಅನ್ವಯ ಮಾಲ್​ಗಳಲ್ಲಿ ಮಳಿಗೆ ತೆರೆಯುವ ಕುರಿತು ನಿರ್ಧಾರ.
    • ಹೋಟೆಲ್ ಮತ್ತು ರೆಸ್ಟೋರಂಟ್ ತೆರೆಯಲು ಅನುಮತಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡುವುದು.
    • ವಲಸೆ ಕಾರ್ವಿುಕರು ತಮ್ಮೂರಿಗೆ ಹೋಗುಲು ಎದುರಿಸುತ್ತಿರುವ ಸಮಸ್ಯೆ ವಾರ ಅಥವಾ 10 ದಿನಗಳಲ್ಲಿ ಬಗೆಹರಿಸುವುದು.

    ಲಾಕ್​ಡೌನ್ 5.0 ಇಂದು ನಿರ್ಧಾರ? ಇನ್ನೆರಡು ವಾರ ನಿರ್ಬಂಧ ವಿಸ್ತರಣೆಯಾಗುವ ಸಾಧ್ಯತೆ

    ಇದನ್ನೂ ಓದಿ: ಮೋದಿ ಗೆದ್ದೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಇನ್ನಿಲ್ಲ; ಸಾವಿನಲ್ಲೂ ಗೊಂದಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts