More

    ರಾಜ್ಯದಲ್ಲಿ ಸತತ ಎರಡನೇ ದಿನವೂ ಸಾವಿರ ದಾಟಿದ ಕರೊನಾ ಕೇಸ್; 10 ಸಾವಿರ ಗಡಿ ದಾಟಿತು ಸಕ್ರಿಯ ಪ್ರಕರಣ..

    ಬೆಂಗಳೂರು: ಸುಮಾರು ಮೂರೂವರೆ ತಿಂಗಳ ಬಳಿಕ ಮತ್ತೆ ಸಾವಿರದ ಗಡಿ ದಾಟಿದ್ದ ಕರೊನಾ ಪ್ರಕರಣಗಳ ಸಂಖ್ಯೆ ಸತತ ಎರಡನೇ ದಿನ, ಅಂದರೆ ಇಂದೂ ಸಾವಿರ ದಾಟಿದ್ದು, ಆತಂಕವನ್ನು ಹೆಚ್ಚಿಸಿದೆ. ಮತ್ತೊಂದೆಡೆ ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿದೆ.

    ರಾಜ್ಯದಲ್ಲಿ ಭಾನುವಾರ 1,187 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೋವಿಡ್ ಸೋಂಕು ಖಚಿತತೆ ಪ್ರಮಾಣ ಶೇ.1.08 ತಲುಪಿದೆ. 24 ಗಂಟೆಗಳಲ್ಲಿ ರಾಜ್ಯಾದ್ಯಂತ 1,08,911 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಕಳೆದ ಮೂರು ತಿಂಗಳ ನಂತರ ಪಾಸಿಟಿವಿಟಿ ದರ ಶೇ.1ಕ್ಕಿಂತ ಅಧಿಕವಾಗಿದೆ. ಈ ಮೂಲಕ ಸಕ್ರಿಯ ಪ್ರಕರಣ 10,292ಕ್ಕೆ ಏರಿಕೆ ಆಗಿದೆ.

    ಇದನ್ನೂ ಓದಿ: ಹುಡುಗಿ ಮದ್ವೆ ವಯಸ್ಸು ಕನಿಷ್ಠ 21; ಮಸೂದೆ ಪರಿಶೀಲಿಸಬೇಕಾದ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ಏಕೈಕ ಸ್ತ್ರೀ!

    ಒಟ್ಟು ಸೋಂಕಿತರ ಸಂಖ್ಯೆ 30.09 ಲಕ್ಷಕ್ಕೆ ತಲುಪಿದೆ. ಸೋಂಕಿಗೆ 6 ಮಂದಿ ಬಲಿಯಾಗಿದ್ದು, ಮೃತರ ಪ್ರಮಾಣ 38,346ಕ್ಕೆ ಏರಿಕೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 275 ಮಂದಿ ಬಿಡುಗಡೆ ಆಗಿದ್ದು, ಒಟ್ಟು ಗುಣಮುಖರ ಸಂಖ್ಯೆ 29.60 ಲಕ್ಷ ಮೀರಿದೆ.

    ಇದನ್ನೂ ಓದಿ: ಹೆಜ್ಜೇನು ನೊಣಗಳ ಕಡಿತಕ್ಕೆ ನಿವೃತ್ತ ಅಧಿಕಾರಿ ಬಲಿ; ವಾಹನ ಪೂಜೆ ಮಾಡುತ್ತಿದ್ದಾಗ ದಾಳಿ…

    ಬೆಂಗಳೂರು ನಗರದಲ್ಲಿ 923, ದಕ್ಷಿಣ ಕನ್ನಡ 63, ಉಡುಪಿ 54, ಮೈಸೂರು 20, ಧಾರವಾಡ 15, ಕೊಡಗು, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ 12, ಮಂಡ್ಯದಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ. 12 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದ್ದು, 8 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಮೂವರು, ದಕ್ಷಿಣ ಕನ್ನಡ, ತುಮಕೂರು ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ನಿಂತಿದ್ದ ಬಸ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ತಂತಾನೇ ಚಲನೆ; ನಂತರ ಮುಂದಿದ್ದ ಬಸ್​ಗೆ ಡಿಕ್ಕಿ: ಕೊಟ್ಟಿಗೆಹಾರದಲ್ಲಿ ಇದೆಂಥ ಅಚ್ಚರಿ!?

    ಕಾರು-ಬಸ್​ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು, ಐವರಿಗೆ ಗಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts