More

    ಛಾಯಾಗ್ರಾಹಕರ ಮೇಲಿನ ಹಲ್ಲೆಗೆ ಖಂಡನೆ

    ಹುಣಸೂರು: ಬೆಂಗಳೂರು ಶಿವಾಜಿನಗರದ ಕಲ್ಯಾಣಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಛಾಯಾಗ್ರಾಹಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕು ಛಾಯಾಗ್ರಾಹಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

    ನಗರದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸಂಘದ ಸದಸ್ಯರು ಛಾಯಾಗ್ರಾಹಕರಿಗೆ ಸರ್ಕಾರ ರಕ್ಷಣೆ ನೀಡಲಿ, ಹಲ್ಲೆಗೊಳಗಾದ ಛಾಯಾಗ್ರಾಹಕರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ ಎಂದು ಘೋಷಣೆಗಳನ್ನು ಕೂಗಿದರು.

    ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ರಾಮಸ್ವಾಮಿ ಮಾತನಾಡಿ, ಹೊಟ್ಟೆಪಾಡಿಗಾಗಿ ಮದುವೆ ಸಮಾರಂಭಗಳ ಚಿತ್ರೀಕರಣ ಮಾಡುವ ಛಾಯಾಗ್ರಾಹಕರನ್ನು ಕೇವಲವಾಗಿ ನೋಡುವುದು ಸರಿಯಲ್ಲ. ಛಾಯಾಗ್ರಾಹಕರು ಸ್ವಾಭಿಮಾನದಿಂದ ಮತ್ತು ಗೌರವದಿಂದ ಬಾಳುವವರು. ಬೆಂಗಳೂರಿನ ಘಟನೆಯಿಂದಾಗಿ ಛಾಯಾಗ್ರಾಹಕರಿಗೆ ಯಾವುದೇ ರಕ್ಷಣೆ ಇಲ್ಲವೆನ್ನುವುದು ಸಾಬೀತಾಗಿದೆ. ಸರ್ಕಾರ ದುಡಿದು ತಿನ್ನುವ ಇಂತಹ ಸಮುದಾಯಗಳ ಬೆಂಬಲಕ್ಕೆ ನಿಲ್ಲಬೇಕು. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಎಚ್.ಎಸ್. ದಾಮೋದರ್, ಸಂಘಟನಾ ಕಾರ್ಯದರ್ಶಿ ರಘು, ನಿದೇಶಕರಾದ ಎಚ್.ಎಸ್.ಗಜೇಂದ್ರ, ಎಸ್.ಲೋಕೇಶ್, ಕಾಂತರಾಜು, ಶಿವರಾಜು, ಚೇತನ್‌ಕುಮಾರ್, ಮಹದೇವಸ್ವಾಮಿ, ಶಶಿಕುಮಾರ್, ಮಹದೇವ, ರಮೇಶ್, ಕುಮಾರ್, ಹರೀಶ್ ಇತರರು ಭಾಗವಹಿಸಿದ್ದರು.

    See also  ಸಿಐಡಿ ಮುಂದೆ ನಾಳೆ ಯಡಿಯೂರಪ್ಪ ಹಾಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts