More

    ಹುಡುಗಿ ಮದ್ವೆ ವಯಸ್ಸು ಕನಿಷ್ಠ 21; ಮಸೂದೆ ಪರಿಶೀಲಿಸಬೇಕಾದ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ಏಕೈಕ ಸ್ತ್ರೀ!

    ನವದೆಹಲಿ: ಹುಡುಗಿಯ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವ ಮಹತ್ವದ ಮಸೂದೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದೇನೋ ನಿಜ. ಆದರೆ ಮಸೂದೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲೆಂದು ಮತ್ತೊಂದು ಸಂಸದೀಯ ಸಮಿತಿ ರಚಿಸಿ ಅದಕ್ಕೆ ಜವಾಬ್ದಾರಿ ವಹಿಸಲಾಗಿದೆ. ಆದರೆ 31 ಜನರ ಆ ಸಮಿತಿಯಲ್ಲಿ ಏಕೈಕ ಸ್ತ್ರೀ ಇರುವುದು ಜನರು ಹುಬ್ಬೇರಿಸುವಂತೆ ಮಾಡಿದೆ.

    ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಸರ್ಕಾರ, ಅದರಲ್ಲಿ ಹುಡುಗಿಯ ಮದುವೆಯ ಗರಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಮಹತ್ವದ ಅಂಶ ಇರುವುದನ್ನು ಪ್ರಸ್ತಾಪಿಸಿತ್ತು. ಬಳಿಕ ಅದೇ ಅಧಿವೇಶನದಲ್ಲಿ ಈ ಮಸೂದೆಯ ಸಾಧಕ-ಬಾಧಕಗಳ ಪರಿಶೀಲಿಸಿ ತಿಳಿಸಲು ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು.

    ಇದನ್ನೂ ಓದಿ: ನಿಂತಿದ್ದ ಬಸ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ತಂತಾನೇ ಚಲನೆ; ನಂತರ ಮುಂದಿದ್ದ ಬಸ್​ಗೆ ಡಿಕ್ಕಿ: ಕೊಟ್ಟಿಗೆಹಾರದಲ್ಲಿ ಇದೆಂಥ ಅಚ್ಚರಿ!?

    ಈ ಸಂಸದೀಯ ಸಮಿತಿಯಲ್ಲಿ 31 ಸಂಸದರಿದ್ದು, ಆ ಪೈಕಿ ಪುರುಷರು 30 ಮಂದಿ ಹಾಗೂ ಮಹಿಳೆ ಮಾತ್ರ ಒಬ್ಬರೇ ಇರುವುದು ಅಚ್ಚರಿ ಮೂಡಿಸಿದೆ. ಹುಡುಗಿಯ ಬದುಕಿನ ಮಹತ್ವದ ಅಂಶವನ್ನು ನಿರ್ಣಯಿಸುವ ಈ ಮಸೂದೆಯ ಪರಿಶೀಲನೆಗೆ ರಚಿಸಿದ ಸಂಸದೀಯ ಸಮಿತಿಯಲ್ಲಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಇರಬೇಕಿತ್ತು. ಆದರೆ ಇದರಲ್ಲಿ ತೃಣಮೂಲ ಕಾಂಗ್ರೆಸ್​ನ ಸಂಸದೆ ಸುಶ್ಮಿತಾ ದೇವ್ ಬಿಟ್ಟರೆ ಉಳಿದ 30 ಮಂದಿ ಪುರುಷರು.

    ಕಾರು-ಬಸ್​ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು, ಐವರಿಗೆ ಗಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts