More

    ದೇಹದ ಎಲ್ಲ ಅಂಗಗಳಿಗೆ ಪೋಷಕಾಂಶಗಳನ್ನು ಸಾಗಿಸುವ ರಕ್ತದ ಬಗ್ಗೆ ಹೀಗಿರಲಿ ನಿಮ್ಮ ಕಾಳಜಿ…

    ನಮ್ಮ ದೇಹದಲ್ಲಿ ರಕ್ತವು ಪ್ರಮುಖ ವಾಹಕವಾಗಿದೆ. ಎಲ್ಲ ಅಂಗಾಂಗಗಳಿಗೆ ಪೋಷಕಾಂಶಗಳನ್ನು ಸಾಗಿಸುವುದೇ ರಕ್ತದ ಮುಖ್ಯ ಕೆಲಸ. ಸಾಮಾನ್ಯವಾಗಿ ನಮ್ಮ ಆಹಾರ ಮತ್ತು ಜೀವನಶೈಲಿಯಿಂದಾಗಿ ಕೆಲವು ಕಲ್ಮಶಗಳು ರಕ್ತದಲ್ಲಿ ಸಂಗ್ರಹಗೊಳ್ಳುತ್ತವೆ. ರಕ್ತದಲ್ಲಿನ ಕಲ್ಮಶಗಳಿಂದಾಗಿ ಅನೇಕ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನೀವು ಆರೋಗ್ಯವಾಗಿರಬೇಕಾದರೆ ರಕ್ತವನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಆರೋಗ್ಯಕರ ವಸ್ತುಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತವನ್ನು ಶುದ್ಧೀಕರಿಸಬಹುದು.

    ತುಳಸಿ: ತುಳಸಿ ಎಲೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ರಕ್ತವನ್ನು ಶುದ್ಧೀಕರಿಸುವ ಆಮ್ಲಜನಕವನ್ನು ತುಳಸಿ ಎಲೆಗಳು ಹೊಂದಿವೆ. ಇದು ನಂಜುನಿರೋಧಕ (ಆ್ಯಂಟಿಸೆಪ್ಟಿಕ್​) ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ನಮ್ಮಿಂದ ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

    ಬೇವಿನ ಎಲೆಗಳು: ರಕ್ತವನ್ನು ಶುದ್ಧೀಕರಿಸಲು ಬೇವಿನ ಎಲೆಗಳು ಕೂಡ ಸಹಾಯ ಮಾಡುತ್ತದೆ. ಇದು ಸಹ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ರಕ್ತದ ಕಲ್ಮಶಗಳನ್ನು ಹೊರಹಾಕಿ, ಇಡೀ ದೇಹವನ್ನು ಆರೋಗ್ಯಕರವಾಗಿಸುತ್ತದೆ.

    ಬೀಟ್​ರೂಟ್​: ಬೀಟ್​ರೂಟ್​ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ತರಕಾರಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಕಬ್ಬಿಣಾಂಶಗಳು ಸಮೃದ್ಧವಾಗಿದೆ. ಬೀಟ್​​ರೂಟ್​ನಲ್ಲಿ ಬೀಟಾಸಯಾನಿನ್ ಇದೆ. ಇದು ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುತ್ತದೆ. ಬೀಟ್​ರೂಟ್​ ಜ್ಯೂಸ್ ಅಥವಾ ಸಲಾಡ್ ಸೇವಿಸುವುದರಿಂದ ನೀವು ಅನೇಕ ರೋಗಗಳಿಂದ ಮುಕ್ತರಾಗಬಹುದು.

    ಅರಿಶಿನ: ಅರಿಶಿನ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಏಕೆಂದರೆ, ಅರಿಶಿನ ಅತ್ಯತ್ತುಮ ಆಯುರ್ವೇದಿಕ ಔಷಧಿ ಎಂದು ಎಲ್ಲರು ಹೇಳುತ್ತಾರೆ. ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರ ನಂಜುನಿರೋಧಕ ಗುಣಗಳು ರಕ್ತವನ್ನು ಶುದ್ಧೀಕರಿಸುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಕರ್ಕ್ಯುಮಿನ್ ಅನ್ನು ಹೊಂದಿದೆ. ಅರಿಶಿನವನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಕಬ್ಬಿಣಾಂಶದ ಕೊರತೆಯನ್ನು ಸರಿಪಡಿಸಲು ಸಹ ಸಹಾಯ ಮಾಡುತ್ತದೆ.

    ಬೆಲ್ಲ: ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೆಲ್ಲವು ಅಜೀರ್ಣ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಬೆಲ್ಲದ ಸೇವನೆಯು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ತ್ಯಾಜ್ಯವನ್ನು ಹೊರಹಾಕುತ್ತದೆ.

    ಬೆಳ್ಳುಳ್ಳಿ: ಬೆಳ್ಳುಳ್ಳಿ ರಕ್ತಕ್ಕೆ ತುಂಬಾ ಒಳ್ಳೆಯದು. ಇದು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿಯ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ. (ಏಜೆನ್ಸೀಸ್​)

    ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಸೇವನೆ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ…

    ಹಸಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಸೋಶಿಯಲ್​ ಮೀಡಿಯಾ ಸ್ಟಾರ್​ಗಳ ವಾದಕ್ಕೆ ತಜ್ಞರ ಉತ್ತರವೇನು?

    ಸೋಂಪು ಕಾಳು ಟೀ ಕುಡಿದರೆ ತೂಕ ನಷ್ಟ, ಕಣ್ಣಿನ ಆರೋಗ್ಯ…ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts