More

    ಗುಡಿಸಲಿನಲ್ಲಿ ವಾಸವಿದ್ದ ಬಡ ಸ್ನೇಹಿತನಿಗೆ ಹೊಸ ಮನೆ ಉಡುಗೊರೆ ನೀಡಿದ ಸ್ಕೂಲ್​ ಫ್ರೆಂಡ್ಸ್​..!

    ಪುದುಕೊಟ್ಟೈ: ಶಾಲಾ ದಿನಗಳಲ್ಲಿ ಹುಟ್ಟುವಂತಹ ಸ್ನೇಹ ಎಂದೂ ಅಳಿಯದೇ ಶಾಶ್ವತವಾಗಿ ಉಳಿಯುವಂಥದ್ದು. ಶಾಲಾ ಸ್ನೇಹಿತರ ಜತೆ ನಿರಂತರ ಸಂಪರ್ಕ ಇಲ್ಲದೇ ಇರಬಹುದು ಆದರೆ, ಆ ಒಂದು ಬಾಂಧವ್ಯ ಮಾತ್ರ ಎಂದೂ ಮರೆಯಾಗದು. ಅದೇ ರೀತಿಯ ಸ್ನೇಹಕ್ಕೆ ಮುತ್ತುಕುಮಾರ್​ ಮತ್ತು ಕೆ. ನಾಗೇಂದ್ರನ್​ ಹೊಸ ಭಾಷ್ಯ ಬರೆದಿದ್ದಾರೆ.

    ಮುತ್ತುಕುಮಾರ್​ (44) ಓರ್ವ ಲಾರಿ ಚಾಲಕ. ಬಹುತೇಕರಂತೆಯೇ ಮುತ್ತುಕುಮಾರ್​ ಸಹ ಕರೊನಾ ಲಾಕ್​ಡೌನ್​ನಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಲಾಕ್​ಡೌನ್​ಗೂ ಮುಂಚೆ ತಿಂಗಳಿಗೆ 10 ಸಾವಿರದಿಂದ 15 ಸಾವಿರ ಸಂಪಾದನೆ ಮಾಡುತ್ತಿದ್ದ ಮುತ್ತುಕುಮಾರ್​ ಲಾಕ್​ಡೌನ್​ ಬಳಿಕ 1 ಸಾವಿರದಿಂದ 2 ಸಾವಿರ ರೂ. ಗಳಿಸುವುದು ಕಷ್ಟವಾಗಿದೆ.

    ಇದನ್ನೂ ಓದಿ: ಟಾಟಾ, ಬಿರ್ಲಾ, ಅಂಬಾನಿ ಸಂಸ್ಥೆಗಳಿಂದ ಬ್ಯಾಂಕ್​ ಸ್ಥಾಪನೆ? ಪರವಾನಗಿಯಲ್ಲಿ ಸಡಿಲತೆ ತೋರಿದ ಆರ್​ಬಿಐ

    2018ರಲ್ಲಿ ರಾಜ್ಯದಲ್ಲಿ ಎದುರಾದ ಗಜ ಸೈಕ್ಲೋನ್​ನಿಂದಾಗಿ ತಾನು ವಾಸವಿದ್ದ ಗುಡಿಸಲು ಸಹ ಹಾನಿಯಾಗಿತ್ತು. ಇದರ ನಡುವೆ ಕುಟುಂಬದ ಆರು ಸದಸ್ಯರಿಗೆ ಆಹಾರ ಒದಗಿಸುವುದು ಸಹ ಮುತ್ತುಕುಮಾರ್​ಗೆ ಕಠಿಣವಾಗಿದೆ. ಈ ಬಗ್ಗೆ ಮಾತನಾಡಿರುವ ಮುತ್ತುಕುಮಾರ್​, ನಾನು ಹುಟ್ಟಿದಾಗಿನಿಂದ ಗುಡಿಸಲಿನಲ್ಲೇ ವಾಸವಿದ್ದೇನೆ. ನನ್ನ ಆಸೆಯನ್ನು ಈಡೇರಿಸಿಕೊಳ್ಳಲು ನಾನು ಚಾಲಕನಾಗಿ ದುಡಿಯುತ್ತಿದ್ದೆ. ಆದರೆ, ಲಾಕ್​ಡೌನ್​ ಕಳೆದ ಆರು ತಿಂಗಳಿಂದ ನನ್ನ ಆದಾಯವನ್ನು ತಗ್ಗಿಸಿತು. ಸೈಕ್ಲೋನ್​ನಿಂದ ಮನೆಯ ಸುತ್ತ ಇದ್ದ ಮರಗಳು ಮನೆಯ ಮೇಲೆ ಬಿದ್ದು, ಭಾರೀ ಹಾನಿಯಾಯಿತು ಎಂದಿದ್ದಾರೆ.

    ಇದರ ನಡುವೆ ಮುತ್ತುಕುಮಾರ್​ ಕಳೆದ ಸೆಪ್ಟೆಂಬರ್​ನಲ್ಲಿ ತಮ್ಮ ಶಾಲಾ ಶಿಕ್ಷಕರ ಮನೆಯಲ್ಲಿ ಸ್ನೇಹಿತ ಕೆ. ನಾಗೇಂದ್ರನ್​ರನ್ನು ಭೇಟಿ ಮಾಡಿದ್ದರಂತೆ. ಬಳಿಕ ತಮ್ಮ ಮನೆಗೆ ಆಹ್ವಾನವನ್ನು ನೀಡಿದ್ದರಂತೆ. ಸ್ನೇಹಿತನ ಮನೆಗೆ ಬಂದ ನಾಗೇಂದ್ರನ್​ ಮನೆಯ ಸ್ಥಿತಿ ನೋಡಿ ಬೇಸರವಾಗಿತ್ತಂತೆ. ಈ ಬಗ್ಗೆ ಮಾತನಾಡಿರುವ ನಾಗೇಂದ್ರನ್​, 30 ವರ್ಷಗಳ ಬಳಿಕ ಸ್ನೇಹಿತನನ್ನು ಭೇಟಿ ಮಾಡಿದೆ. ಅವನ ಮನೆಯ ಸ್ಥಿತಿ ನೀಡಿ ಬೇಜಾರಾಯಿತು. ಮನೆಯೊಗಳಗೆ ಹೋಗಬೇಕಾದರೂ ತುಂಬಾ ಬಗ್ಗಿ ಹೋಗಬೇಕಾದಂತಹ ಸ್ಥಿತಿ ಇತ್ತು. ಬಳಿಕ ಸ್ನೇಹಿತನಿಗೆ ಸಹಾಯ ಮಾಡಿದೆ. ವಾಟ್ಸ್​ಆ್ಯಪ್​ ಗ್ರೂಪ್​ ಮಾಡಿ ಅದರಲ್ಲಿ ಸ್ನೇಹಿತನ ಮನೆಯ ಚಿತ್ರವನ್ನು ಫಾರ್ವರ್ಡ್​ ಮಾಡಿದೆ. ಅನೇಕರು ಸಹಾಯ ಮಾಡಲು ಮುಂದೆ ಬಂದರು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!

    ಕೇವಲ ಮೂರೇ ತಿಂಗಳಲ್ಲಿ 1.5 ಲಕ್ಷ ರೂ. ನೆರವಿನಿಂದ ನಾಗೇಂದ್ರನ್​ ಮತ್ತು ಸ್ನೇಹಿತರು ಮುತ್ತುಕುಮಾರ್​ಗಾಗಿ ಹೊಸ ಮನೆಯನ್ನು ಯಾವುದೇ ಇಂಜಿನಿಯರ್​ ಸಹಾಯವಿಲ್ಲದೆ ನಿರ್ಮಿಸಿಕೊಟ್ಟಿದ್ದಾರೆ. ಮನೆಯನ್ನು ದೀಪಾವಳಿ ಉಡುಗೊರೆಯನ್ನಾಗಿ ಮುತ್ತುಕುಮಾರ್​ ಕುಟುಂಬಕ್ಕೆ ಸ್ನೇಹಿತರು ನೀಡಿದ್ದಾರೆ. ಮನೆ ಪಕ್ಕ ಮುತ್ತುಕುಮಾರ್​ ತಾಯಿಗಾಗಿ ಒಂದು ಸಣ್ಣ ಗುಡಿಸಲನ್ನು ಸಹ ಸ್ನೇಹಿತರು ನಿರ್ಮಿಸಿದ್ದಾರೆ. ಸ್ನೇಹಿತರ ಸಹಾಯವನ್ನು ನೆನೆದು ಮುತ್ತುಕುಮಾರ್​ ಆನಂದ ಭಾಷ್ಪ ಹರಿಸಿದರು. (ಏಜೆನ್ಸೀಸ್​)

    ಕರ್ನಾಟಕ ಬಂದ್​: ಕನ್ನಡ ಪರ ಸಂಘಟನೆಗಳಿಗೆ ಶಾಸಕ ಬಸನಗೌಡ ಪಾಟೀಲ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts