More

    ಟಾಟಾ, ಬಿರ್ಲಾ, ಅಂಬಾನಿ ಸಂಸ್ಥೆಗಳಿಂದ ಬ್ಯಾಂಕ್​ ಸ್ಥಾಪನೆ? ಪರವಾನಗಿಯಲ್ಲಿ ಸಡಿಲತೆ ತೋರಿದ ಆರ್​ಬಿಐ

    ನವದೆಹಲಿ: ಬ್ಯಾಂಕಿಂಗ್​ ಸೆಕ್ಟರ್​ಗೂ ಇಂಡಸ್ಟ್ರಿಯಲ್​ ಸೆಕ್ಟರ್​ಗೂ ಬಹಳಷ್ಟು ವ್ಯತ್ಯಾಸವಿದೆ. ಎರಡೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂಪಾಯಿಯ ವ್ಯವಹಾರ ನಡೆಯುತ್ತದೆ. ಒಂದು ವೇಳೆ ಇಂಡಸ್ಟ್ರಿಯಲಿಸ್ಟ್​ಗಳ ಕೈಗೆ ಬ್ಯಾಂಕಿಂಗ್​ ವ್ಯವಹಾರವನ್ನೂ ಕೊಟ್ಟುಬಿಟ್ಟರೆ? ಇದನ್ನೂ ಓದಿ: ದೆಹಲಿಯಿಂದ ಗೋವಾಕ್ಕೆ ಹಾರಿದ ಸೋನಿಯಾ, ರಾಹುಲ್​; ಕಾರಣವೇನು ಗೊತ್ತಾ?

    ಹೌದು. ಇಂತದ್ದೊಂದು ಆಲೋಚನೆಯನ್ನು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಈಗಾಗಲೇ ಮಾಡಿದೆ. ಇಂಡಸ್ಟ್ರಿಯಲಿಸ್ಟ್​ಗಳು ಬ್ಯಾಂಕ್​ ತೆರೆಯಲು ಪರವಾನಗಿ ನೀಡಲು ಮುಂದಾಗಿದೆ. ಅದೇ ಹಿನ್ನೆಲೆಯಲ್ಲಿ ಟಾಟಾಸ್​, ಬಿರ್ಲಾಸ್, ಅಂಬಾನಿ, ಮಹಿಂದ್ರಾ & ಮಹಿಂದ್ರಾ, ಆದಿತ್ಯಾ ಬಿರ್ಲಾ, ಟೆಕ್​ ಮಹಿಂದ್ರಾ, ಟಾಟಾ ಸನ್​, ಸನ್​ ಫಾರ್ಮಾ ಸೇರಿ ಅನೇಕ ಸಂಸ್ಥೆಗಳು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು ಅರ್ಜಿಗಳನ್ನು ಹಿಂಪಡೆದಿರುವುದಾಗಿಯೂ ತಿಳಿಸಲಾಗಿದೆ.

    ಇದನ್ನೂ ಓದಿ: ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ 6 ಸಾವಿರ ರೂಪಾಯಿ

    50 ಸಾವಿರ ಆಸ್ತಿ ಮೌಲ್ಯ ಹೊಂದಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್​ಬಿಎಫ್​ಸಿ) ಬ್ಯಾಂಕ್​ ತೆರೆಯಬಹುದು ಎಂದು ಆರ್​ಬಿಐ ಹೇಳಿದೆ. ನಮ್ಮದೇಶದಲ್ಲಿ ಹಲವಾರು ಎನ್​ಬಿಎಫ್​ಸಿಗಳು 50 ಸಾವಿರಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ. ಹಲವಾರು ಸಣ್ಣ ಪ್ರಮಾಣದ ಬ್ಯಾಂಕುಗಳಿಗಿಂತ ಇಂತಹ ಸಂಸ್ಥೆಗಳು ಹೆಚ್ಚು ಮೌಲ್ಯ ಹೊಂದಿವೆ ಮತ್ತು ವ್ಯವಹಾರ ನಡೆಸುತ್ತಿವೆ. ಹೀಗಿರುವಾಗ ಈ ಸಂಸ್ಥೆಗಳಿಗೆ ಪರವಾನಗಿ ಸಿಕ್ಕರೆ, ಅವುಗಳು ಟಾಪ್​ ಬ್ಯಾಂಕ್​ಗಳ ಸಾಲಿಗೆ ಸೇರಿ, ಸಣ್ಣ ಬ್ಯಾಂಕುಗಳಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಎನ್​ಬಿಎಫ್​ಸಿಗಳಿಗೆ ಬ್ಯಾಂಕಿಂಗ್​ ಪರವಾನಗಿ ನೀಡುವುದಕ್ಕೂ ಮೊದಲು ನಮ್ಮ ಸಂವಿಧಾನದಲ್ಲಿ ಕೆಲ ಬದಲಾವಣೆ ಆಗಬೇಕಿದೆ. 1949ರ ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದ ನಂತರ ಮಾತ್ರವೇ ಪರವಾನಗಿ ನೀಡಬಹುದಾಗಿದೆ.ಇದನ್ನೂ ಓದಿ: ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

    ಆರ್​ಬಿಐ ಅನೇಕ ಕಠಿಣ ನಿಯಮಗಳನ್ನು ಪಾಲಿಸುತ್ತದೆ. ಪರವಾನಗಿ ವಿಚಾರದಲ್ಲಿಯೂ ಇದರ ನಿಯಮಗಳು ಅಷ್ಟು ಸುಲಭದ್ದಲ್ಲ. ಏಳು ವರ್ಷಗಳ ಹಿಂದೆ ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ ಮತ್ತು ಬಂಧನ್​ ಬ್ಯಾಂಕ್​ಗೆ ಪರವಾನಗಿ ನೀಡಿದ ನಂತರ ಯಾವುದೇ ಬ್ಯಾಂಕ್​ಗೆ ಪರವಾನಗಿ ನೀಡಲಾಗಿಲ್ಲ. ಅದರೆ ಇದೀಗ ಇಂಡಸ್ಟ್ರಿಗಳನ್ನು ಬ್ಯಾಂಕ್​ಗಳಿಗೆ ಸೇರಿಸಿಕೊಳ್ಳುವ ಮೂಲಕ ಪರವಾನಗಿ ನಿಯಮವನ್ನು ಅರ್​ಬಿಐ ಸಡಿಲಿಸಲಿದೆ ಎನ್ನಲಾಗಿದೆ. (ಎಜೆನ್ಸೀಸ್​)

    ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ, ಸೆಂಟ್ರಲ್​ ಫೋರ್ಸ್​ ಕರೆಸಿ ಪಾಠ ಕಲಿಸುತ್ತೇವೆ; ಟಿಎಂಸಿಗೆ ಬಿಜೆಪಿ ಎಚ್ಚರಿಕೆ

    ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್​ 370 ವಾಪಾಸು ತರಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ; ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts