More

    ಶೌಚಕ್ಕೆಂದು ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿ ದುರಂತ ಸಾವು: ಸರ್ಕಾರಕ್ಕೆ ಆಯೋಗದ ಶಾಕ್​!

    ಚೆನ್ನೈ: ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇರದೇ ಪ್ರಕೃತಿ ಕರೆಗಾಗಿ ಹೊರಗಡೆ ಹೋಗಿ ಸೆಪ್ಟಿಕ್​ ಟ್ಯಾಂಕ್​ಗೆ ಬಿದ್ದು ಮೃತಪಟ್ಟಿದ್ದ ಯುವತಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಎಸ್​ಆರ್​ಸಿ) ತಮಿಳುನಾಡು ಸರ್ಕಾರಕ್ಕೆ ನೋಟಿಸ್​ ಹೊರಡಿಸಿದೆ.

    ಸರ್ಕಾರಿ ಮಹಿಳಾ ಉದ್ಯೋಗಿ ಶರಣ್ಯಾ (24) ಮೃತಪಟ್ಟ ಎರಡು ವಾರಗಳ ನಂತರ ಆಯೋಗ ನೋಟಿಸ್​ ಹೊರಡಿಸಿದೆ. ಶರಣ್ಯಾ ಸಾವಿನ ಬೆನ್ನಲ್ಲೇ ಕಚೇರಿಯಲ್ಲಿ ಮಹಿಳೆಯರಿಗೆ ಶೌಚಗೃಹ ಇಲ್ಲ. ಹೀಗಾಗಿಯೇ ಶರಣ್ಯಾ ನಿರ್ಮಾಣ ಹಂತದ ಕಟ್ಟಡದ ಬಳಿ ಪ್ರಕೃತಿ ಕರೆಗೆ ಹೋಗಲೇಬೇಕಾಯಿತು. ಈ ವೇಳೆ ಕಾಲು ಜಾರಿ ಸೆಪ್ಟಿಕ್​ ಟ್ಯಾಂಕ್​ಗೆ ಬಿದ್ದಿದ್ದರಿಂದ ಆಕೆ ಸಾವಿಗೀಡಾಗಬೇಕಾಯಿತು ಎಂದು ದೂರು ಬಂದ ಬೆನ್ನಲ್ಲೇ ಆಯೋಗ ನೋಟಿಸ್​ ನೀಡಿದೆ. ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಉತ್ತರ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

    ಇದನ್ನೂ ಓದಿ: 2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

    ಘಟನೆ ಬಗ್ಗೆ ವಿಸ್ತೃತ ವರದಿ ನೀಡುವಂತೆ ಆಯೋಗವು ತನ್ನ ಮುಖ್ಯ ಕಾರ್ಯದರ್ಶಿ ಮೂಲಕ ತಮಿಳುನಾಡು ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಸರ್ಕಾರಿ ಕಚೇರಿಯಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾದ ಸರ್ಕಾರಿ ಅಧಿಕಾರಿಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದು, ಆರು ವಾರಗಳ ಒಳಗೆ ನೋಟಿಸ್​ಗೆ ಉತ್ತರ ನೀಡುವಂತೆ ಆಯೋಗ ಹೇಳಿದೆ. ಅಲ್ಲದೆ, ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಡಿಯಲ್ಲಿ ಶೌಚಗೃಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ತಂದಿದ್ದರೂ ರಾಜ್ಯದಲ್ಲಿ ಅದೂ ಸರ್ಕಾರಿ ಕಚೇರಿಯಲ್ಲಿ ಈ ದುಸ್ಥಿತಿ ಇರುವ ಬಗ್ಗೆ ಆಯೋಗ ತೀವ್ರ ಅಸಮಾಧಾನ ಹೊರಹಾಕಿದೆ.

    ಶರಣ್ಯಾ ಕಾಂಚೀಪುರಂ ಕೃಷಿ ಅಭಿವೃದ್ಧಿ ಇಲಾಖೆಯ ಗೋದಾಮಿನ ವ್ಯವಸ್ಥಾಪಕರಾಗಿದ್ದರು. ಸರ್ಕಾರದ ಅಡಿಯಲ್ಲಿ ಕಚೇರಿಯ ಆವರಣದಲ್ಲೇ ನಿರ್ಮಾಣ ಆಗುತ್ತಿರುವ ಕಟ್ಟಡಗಳ ಬಳಿ ಶೌಚಕ್ಕೆ ತೆರಳತ್ತಿದ್ದರು. ಸಣ್ಣ ಶೀಟ್​ನಿಂದ ಸೆಪ್ಟಿಕ್​ ಟ್ಯಾಂಕ್​ ಮುಚ್ಚಲಾಗಿತ್ತು ಅದನ್ನು ತೆರೆದು ಪ್ರಕೃತಿ ಕರೆಯನ್ನು ಮುಗಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಟ್ಯಾಂಕ್​ ಒಳಗೆ ಬಿದ್ದಿದ್ದಾರೆ. ಸುಮಾರು ಅರ್ಧ ಗಂಟೆಯವರೆಗೂ ಶರಣ್ಯಾ ಕಚೇರಿಗೆ ಮರಳದಿದ್ದಾಗ ಅವರು ಸಹೋದ್ಯೋಗಿಗಳು ಚಿಂತಿತರಾಗಿ ಹುಡುಕಾಡಿದ್ದಾರೆ. ಸೆಪ್ಟಿಕ್​ ಟ್ಯಾಂಕ್​ನಲ್ಲಿ ಚಪ್ಪಲಿ ತೇಲುವುದನ್ನು ನೋಡಿ ಆಕೆಯನ್ನು ರಕ್ಷಣೆ ಮಾಡಿ, ತಕ್ಷಣ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಶರಣ್ಯಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ಘಟನೆ ಡಿ.7ರಂದು ನಡೆದಿತ್ತು. (ಏಜೆನ್ಸೀಸ್​)

    ಇದನ್ನೂ ಓದಿ: ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಗ್ರಾ.ಪಂ ಚುನಾವಣೆಗೆ ನಿರ್ಗತಿಕ ವ್ಯಕ್ತಿಯನ್ನು ಅಖಾಡಕ್ಕಿಳಿಸಿದ ಯುವಕರು!

    ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಗಾಗಿ ಕಾದು ಕುಳಿತಿದ್ದ ಜವರಾಯ!

    ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು: 7 ಆರೋಪಿಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts