More

    ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು: 7 ಆರೋಪಿಗಳ ಬಂಧನ

    ಬೆಂಗಳೂರು: ಸಿನಿಮಾ ನಿರ್ವಪಕ ಉಮಾಪತಿ ಶ್ರೀನಿವಾಸ್ ಮತ್ತು ಆತನ ಸಹೋದರ ದೀಪಕ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ 7 ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

    ದರ್ಶನ್, ರಾಜನ್, ಗಿರೀಶ್, ಮೋಹನ್ ಹಾಗೂ ಟೋನಿ ಜೊಸೇಫ್ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಟೆಂಪೋ ಟ್ರಾವೆಲರ್ ವಾಹನ, ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಬಾಂಬೆ ರವಿ ಹಾಗೂ ಭರತ್ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಮಾಪತಿ ಮತ್ತು ದೀಪಕ್ ಜತೆಗೆ ಕುಖ್ಯಾತ ರೌಡಿಗಳಾದ ಸೈಕಲ್ ರವಿ ಮತ್ತು ಬೇಕರಿ ರಘು ಕೊಲೆಗೂ ಸಂಚು ರೂಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಯಾವ ಕಾರಣಕ್ಕೆ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿಲ್ಲ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

    ಗಸ್ತು ಪೊಲಿಸರಿಗೆ ಸಿಕ್ಕಿಬಿದ್ದರು..

    ಭಾನುವಾರ ಬೆಳಗಿನ ಜಾವ ಐದು ಗಂಟೆಯಲ್ಲಿ ಜಯನಗರ ಇನ್​ಸ್ಪೆಕ್ಟರ್ ಎಚ್.ವಿ.ಸುದರ್ಶನ್ ಗಸ್ತಿನಲ್ಲಿದ್ದಾಗ ನ್ಯಾಷನಲ್ ಕಾಲೇಜು ಸಮೀಪ ಟೆಂಪೋ ಟ್ರಾವೆಲರ್ ನಿಂತಿತ್ತು. ಅನುಮಾನದ ಮೇರೆಗೆ ಇನ್​ಸ್ಪೆಕ್ಟರ್ ಸುದರ್ಶನ್ ಟೆಂಪೋ ಪರಿಶೀಲನೆ ನಡೆಸಲು ಮುಂದಾಗಿದ್ದರು. ಆಗ ಆರೋಪಿಗಳು ವಾಹನವನ್ನು ಪೊಲೀಸರ ಮೇಲೆಯೇ ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಲ್ಲದೆ, ಆರೋಪಿಗಳ ಗ್ಯಾಂಗ್ ಕಿಟಕಿಯಿಂದ ಪೇದೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದರು.

    ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಲು ಯತ್ನ?

    ಬಂಧಿತರೆಲ್ಲರೂ ತಲೆಮರೆಸಿಕೊಂಡಿರುವ ರೌಡಿಶೀಟರ್ ಬಾಂಬೆ ರವಿ ಸಹಚರರು. ಆತನ ಅಣತಿಯಂತೆ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಹಣಕಾಸಿನ ವಿಚಾರಕ್ಕೆ ನಿರ್ವಪಕರಾದ ಉಮಾಪತಿ, ದೀಪಕ್ ಹತ್ಯೆಗೆ ಸಂಚು ರೂಪಿಸಿರುವ ಶಂಕೆ ಇದೆ. ರೌಡಿಶೀಟರ್​ಗಳಾದ ಸೈಕಲ್ ರವಿ ಹಾಗೂ ಬೇಕರಿ ರಘು ಜೈಲಿನಿಂದ ಹೊರಗೆ ಬಂದಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅವರ ಹತ್ಯೆಗೆ ಹೊಂಚು ಹಾಕಿರಬಹುದು. ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ನಿರ್ವಪಕ ಉಮಾಪತಿ ಹಾಗೂ ದೀಪಕ್ ಅವರನ್ನು ಸಂರ್ಪಸಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts