More

    ರಾಮಮಂದಿರ ಕಾರ್ಯಕ್ರಮ ನೇರ ಪ್ರಸಾರ ನಿಷೇಧಿಸಿಲ್ಲ: ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಸ್ಟಾಲಿನ್ ಸರ್ಕಾರದ ಸ್ಪಷ್ಟನೆ

    ಚೆನ್ನೈ: ರಾಮಮಂದಿರ ಉದ್ಘಾಟನೆಗೆ ಅಣಿಯಾಗುತ್ತಿದ್ದರೆ, ಇಡೀ ಕಾರ್ಯಕ್ರಮ ವೀಕ್ಷಣೆಗೆ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಆಕ್ಷೇಪ ವ್ಯಕ್ತಪಡಿಸಿದ್ದರೆ, ಡಿಎಂಕೆ ಸರ್ಕಾರ ಇದು ಆಧಾರರಹಿತ ಆರೋಪ ಎಂದು ತಳ್ಳಿ ಹಾಕಿದೆ.

    ಇದನ್ನೂ ಓದಿರಿ:‘ರಾಮಮಂದಿರದ ಕಾರ್ಯಕ್ರಮ ಮಿಸ್​ಮಾಡ್ಕೋಬೇಡಿ..ನಾನೂ ಹಾಜರಾಗ್ತೇನೆ’: ನಿತ್ಯಾನಂದ

    ರಾಮಮಂದಿರ ಕಾರ್ಯಕ್ರಮ ವೀಕ್ಷಣೆ ಹಾಗೂ ಪೂಜೆ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಡಿಎಂಕೆ ಸರ್ಕಾರದ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ.

    ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಡಿಎಕೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್‌ ಗಂಭೀರ ಆರೋಪ ಮಾಡಿ್ದದರು. ಆದರೆ ಅವರ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿರುವ ತಮಿಳುನಾಡು ಸರ್ಕಾರ, ರಾಮ ಮಂದಿರ ಕಾರ್ಯಕ್ರಮ ನೇರ ಪ್ರಸಾರ ನಿಷೇಧಿಸಿಲ್ಲ, ಪೂಜೆ ನಡೆಸಿ ಪ್ರಸಾದ ವಿತರಣೆಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದೆ. ತಮಿಳುನಾಡಿದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ ಬಾಬು ಡಿಎಂಕೆ ಯುವಸಮಾವೇಶ ಆಯೋಜನೆಯನ್ನು ಸಹಿಸದೇ ಅದರ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದಿದ್ದಾರೆ.

    ನಿರ್ಮಲಾ ಸೀತಾರಾಮನ್​ ಆರೋಪವೇನು?: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಹಿತ ನಾನಾ ಧಾರ್ಮಿಕ ಚಟುವಟಿಕೆಗಳ ನೇರ ವೀಕ್ಷಣೆಗೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಬಲ್‌ ಕಡಿತಗೊಳಿಸಿ ಕಾರ್ಯಕ್ರಮ ವೀಕ್ಷಿಸದಂತೆ ಮಾಡಲಾಗುತ್ತಿದೆ. ತಮಿಳುನಾಡಿನ 200ಕ್ಕೂ ದೇಗುಲಗಳಲ್ಲಿಯೂ ಭಜನೆ, ಇತರೆ ಧಾರ್ಮಿಕ ಚಟುವಟಿಕೆ ನಡೆಸದಂತೆ ಪೊಲೀಸರನ್ನು ಬಳಸಿ ನಿಗ್ರಹಿಸಲಾಗುತ್ತಿದೆ. ಇದು ಹಿಂದು ವಿರೋಧಿ ಹಾಗೂ ದ್ವೇಷದ ಪ್ರಕ್ರಿಯೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದರು. ಈ ಕುರಿತು ಎಕ್ಸ್‌ನಲ್ಲಿ ಇಂಗ್ಲೀಷ್‌ ಹಾಗೂ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದ ಅವರು, ರಾಮನ ಹೆಸರಿನಲ್ಲಿ ತಮಿಳುನಾಡು ನಡೆಸುತ್ತಿರುವ ದ್ವೇಷದ ರಾಜಕಾರಣ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಸಚಿವರ ತಿರುಗೇಟು: ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ ನಿಷೇಧಿಸಿಲ್ಲ. ಇಂತಹ ಯಾವುದೇ ಆದೇಶಗಳನ್ನು ನಾವು ಜಾರಿ ಮಾಡಿಲ್ಲ. ರಾಮಮಂದಿರಗಳಲ್ಲಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
    ಸೇಲಂನಲ್ಲಿ ಆಯೋಜಿಸಿರುವ ಡಿಎಂಕೆ ಯುವ ಸಮಾವೇಶದ ಯಶಸ್ಸನ್ನು ದಿಕ್ಕುತಪ್ಪಿಸುವ ಉದ್ದೇಶದಿಂದಲೇ ರಾಮಮಂದಿರ ಕಾರ್ಯಕ್ರಮ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ ಬಾಬು ಹೇಳಿದ್ದಾರೆ.

    ಏರ್​ಲಿಫ್ಟ್​ಗೆ ಎಚ್​ಎಎಲ್​ ವಿಮಾನ ನಿರಾಕರಿಸಿದ ಮುಯಿಝು: ಮಾಲ್ಡೀವ್ಸ್‌ನಲ್ಲಿ ಹಾರಿಹೋಯ್ತು ಬಾಲಕನ ಪ್ರಾಣ ಪಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts