More

    VIDEO: ಸಿಪಿಎಲ್ ಟೂರ್ನಿಯಲ್ಲಿ ಟಿಕೆಆರ್​ ತಂಡಕ್ಕೆ ಸತತ 5ನೇ ಜಯ

    ಪೋರ್ಟ್​ ಆಫ್ ಸ್ಪೇನ್​: ಟ್ರಿನ್​ಬಾಗೊ ನೈಟ್​ ರೈಡರ್ಸ್​ (ಟಿಕೆಆರ್​) ತಂಡ ಹೀರೋ ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​) ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಸತತ 5ನೇ ಜಯ ದಾಖಲಿಸಿತು. ಕ್ವೀನ್ಸ್​ ಪಾರ್ಕ್​ ಓವೆಲ್​ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಿಕೆಆರ್​ ತಂಡ 7 ವಿಕೆಟ್​ಗಳಿಂದ ಗಯಾನ ಅಮೆಜಾನ್​ ವಾರಿಯರ್ಸ್​ ತಂಡವನ್ನು ಮಣಿಸಿದರೆ, ದಿನದ ಮತ್ತೊಂದು ಪಂದ್ಯದಲ್ಲಿ ಮೊಹಮದ್​ ನಬಿ (15ಕ್ಕೆ 5) ಸರ್ವ ಶ್ರೇಷ್ಠ ನಿರ್ವಹಣೆ ಫಲವಾಗಿ ಸೇಂಟ್​ ಲೂಸಿಯಾ ಜೌಕ್ಸ್​ ತಂಡ 6 ವಿಕೆಟ್​ಗಳಿಂದ ಸೇಂಟ್​ ಕಿಟ್ಸ್​ ಹಾಗೂ ನೆವಿಸ್​ ಪೆಟ್ರಿಯೋಟ್ಸ್​ ಎದುರು ಜಯ ದಾಖಲಿಸಿತು.

    ಇದನ್ನೂ ಓದಿ: ಭರ್ಜರಿ ಸಿಕ್ಸರ್: ಸ್ಟೇಡಿಯಂ ಆಚೆಯಿದ್ದ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಕೆವಿನ್​ ಒಬ್ರೆಯನ್​!

    ಮೊದಲು ಬ್ಯಾಟಿಂಗ್​ ಮಾಡಿದ ಗಯಾನ ಅಮೆಜಾನ್​ ವಾರಿಯರ್ಸ್​ ತಂಡ, ಖಾರಿ ಪೀರೆ (18ಕ್ಕೆ 3) ಮಾರಕ ದಾಳಿಗೆ ನಲುಗಿ 7 ವಿಕೆಟ್​ಗೆ 112 ರನ್​ಗಳಿಸಿದರೆ, ಪ್ರತಿಯಾಗಿ ಟಿಕೆಆರ್​ ತಂಡ 18.2 ಓವರ್​ಗಳಲ್ಲಿ 3 ವಿಕೆಟ್​ಗೆ 115 ರನ್​ ಪೇರಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಟಿಕೆಆರ್​ ತಂಡ ಲೀಗ್​ನಲ್ಲಿ ಸತತ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

    ಗಯಾನ ಅಮೆಜಾನ್​ ವಾರಿಯರ್ಸ್​: 7 ವಿಕೆಟ್​ಗೆ 112 (ಹೆಟ್ಮೆಯೆರ್​ 26, ರಾಸ್​ ಟೇಲರ್​ 26, ಕಿಮೊ ಪೌಲ್​ 28 ಅಜೇಯ, ಪೀರೆ 18ಕ್ಕೆ 3), ಟಿಕೆಆರ್​: 18.2 ಓವರ್​ಗಳಲ್ಲಿ 3 ವಿಕೆಟ್​ಗೆ 115 (ಟಿಮ್​ ಸೀಫರ್ಟ್​ 39 ಅಜೇಯ, ಡರೇನ್​ ಬ್ರಾವೊ 26 ಅಜೇಯ​, ಇಮ್ರಾನ್​ ತಾಹೀರ್​ 25ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts