More

    ಟೈಟಾನಿಕ್​ ಹಡಗಿನ ಕೊನೆಯ ಊಟದ ಮೆನು ಹರಾಜು: ಮಾರಾಟವಾದ ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಲಂಡನ್​: ಐಷಾರಾಮಿ ಟೈಟಾನಿಕ್‌ ಹಡಗಿನ ಘೋರ ದುರಂತದ ಬಗ್ಗೆ ಹಲವಾರು ಮಂದಿ ಕೇಳಿಯೇ ಇರುತ್ತೀರಿ. ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಎಂದೇ ಕರೆಯಲ್ಪಡುವ ಈ ಹಡಗಿನ ದುರಂತದ ಕುರಿತ ಚಲನಚಿತ್ರ ಬಂದ ಮೇಲಂತೂ ಟೈಟಾನಿಕ್‌ ಹಡಗು ಜಗತ್ತಿಗೇ ಚಿರಪರಿಚಿತವಾಗಿದೆ. ನೀರಿನ ಮೇಲಿನ ಸ್ವರ್ಗದಂತಿದ್ದ ಟೈಟಾನಿಕ್​ 1912, ಏಪ್ರಿಲ್​ 14ರ ರಾತ್ರಿ ತನ್ನ ಮೊದಲ ಅಟ್ಲಾಂಟಿಕ್ ಪ್ರಯಾಣದ ಸಂದರ್ಭದಲ್ಲಿ ಮಂಜುಗೆಡ್ಡೆಗೆ ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಡೆಯಾಯಿತು.

    ಹಡಗು ಮುಳುಗುವ ಮೂರು ದಿನಗಳಿಗೂ ಮುಂಚೆ ಪ್ರಥಮ ದರ್ಜೆಯ ಪ್ರಯಾಣಿಕರಿಗೆ ರೆಡಿ ಮಾಡಿದ್ದ ಟೈಟಾನಿಕ್​ನ ಕೊನೆಯ ಊಟದ ಮೆನು ಇದೀಗ 83 ಸಾವಿರ ಪೌಂಡ್​ ಅಂದರೆ, 84.5 ಲಕ್ಷ ರೂಪಾಯಿಗೆ ಇಂಗ್ಲೆಂಡ್​ನಲ್ಲಿ ಶನಿವಾರ ಸಂಜೆ ನಡೆದ ಹರಾಜಿನಲ್ಲಿ ಮಾರಾಟವಾಗಿದೆ. ದುರಂತ ನಡೆದ ಸಮಯದಲ್ಲಿ ಪ್ರಯಾಣಿಕರನ್ನು ಲೈಫ್‌ಬೋಟ್‌ಗಳಿಗೆ ಸ್ಥಳಾಂತರಿಸುವಾಗ ಅದನ್ನು ಯಾರು ತೆಗೆದುಕೊಂಡರು ಮತ್ತು ವಿಕ್ಟೋರಿಯಾ ಪಡಿಂಗ್ ಎಂದರೇನು ಎಂಬ ಪ್ರಶ್ನೆಗಳನ್ನು ಮೆನು ಹುಟ್ಟುಹಾಕಿದ್ದು, ಅದಕ್ಕೆ ಉತ್ತರವೂ ಸರಳವಾಗಿದೆ. ಅದೇನೆಂದರೆ, ಅಂದು ಸಂಜೆ ಏಪ್ರಿಕಾಟ್ ಮತ್ತು ಫ್ರೆಂಚ್ ಐಸ್ ಕ್ರೀಂನೊಂದಿಗೆ ಬಡಿಸಿದ ಬೇಯಿಸಿದ ಸಿಹಿಭಕ್ಷ್ಯವು ಹಿಟ್ಟು, ಮೊಟ್ಟೆ, ಜಾಮ್, ಬ್ರಾಂಡಿ, ಸೇಬುಗಳು, ಚೆರ್ರಿಗಳು, ಸಿಪ್ಪೆ, ಸಕ್ಕರೆ ಮತ್ತು ಮಸಾಲೆಗಳ ಮಿಶ್ರಣವಾಗಿತ್ತು.

    ಮೆನುವಿನಲ್ಲಿ ನೀರಿನ ಕಲೆಗಳು ಸಹ ಇವೆ. ಬಿಳಿ ಬಣ್ಣದ ನಕ್ಷತ್ರದ ಲಾಂಛನವನ್ನು ಒಳಗೊಂಡಿರುವ ಮೆನುವಿನಲ್ಲಿ, ಸಿಂಪಿ, ಸಾಲ್ಮನ್, ದನದ ಮಾಂಸ, ಸ್ಕ್ವಾಬ್, ಬಾತುಕೋಳಿ ಮತ್ತು ಚಿಕನ್ ಸೇರಿದಂತೆ ಆಲೂಗಡ್ಡೆ, ಅಕ್ಕಿ ಮತ್ತು ಪಾರ್ಸ್ನಿಪ್ ಪ್ಯೂರೀಯನ್ನು ಒಳಗೊಂಡಂತೆ 1912ರ ಏಪ್ರಿಲ್ 11 ರಂದು ಸಿದ್ಧಪಡಿಸಿದ ಆಹಾರಗಳು ಪಟ್ಟಿಯನ್ನು ಹೊಂದಿದೆ. ಇದಾದ ಮೂರೇ ದಿನಕ್ಕೆ ಅವಘಡ ಸಂಭವಿಸಿತು. ಈ ಐತಿಹಾಸಿಕ ಊಟದ ಮೆನು, ಟೈಟಾನಿಕ್ ಹಡಗು ಐರ್ಲೆಂಡ್‌ನ ಕ್ವೀನ್ಸ್‌ಟೌನ್‌ನಿಂದ ನ್ಯೂಯಾರ್ಕ್‌ಗೆ ಹೊರಟ ಮರುದಿನ ಪ್ರಯಾಣಿಕರಿಗೆ ನೀಡಿದ ಊಟದ ಬಗ್ಗೆ ತಿಳಿಸುತ್ತದೆ.

    ಈ ಊಟದ ಮೆನುವನ್ನು ಟಾರ್ಟನ್​ ಡೆಕ್​ ಬ್ಲಾಂಕೆಟ್​ ಸೇರಿದಂತೆ ಇತರೆ ಟೈಟಾನಿಕ್ ಕಲಾಕೃತಿಗಳೊಂದಿಗೆ ಹೆನ್ರಿ ಅಲ್ಡ್ರಿಡ್ಜ್​ ಮತ್ತು ಆತನ ಗೆಳೆಯರು ಸೇರಿ ಮಾರಾಟ ಮಾಡಿದ್ದಾರೆ. ನೋವಾ ಸ್ಕಾಟಿಯಾದ ಡೊಮಿನಿಯನ್‌ನಲ್ಲಿರುವ ಸಮುದಾಯ ಇತಿಹಾಸಕಾರ ಲೆನ್ ಸ್ಟೀಫನ್‌ಸನ್‌ಗೆ ಸೇರಿದ 1960ರ ಫೋಟೋ ಆಲ್ಬಮ್‌ನಲ್ಲಿ ಈ ಮೆನು ಕಂಡುಬಂದಿದೆ. ಟೈಟಾನಿಕ್​ಗೆ ಸಂಬಂಧಿಸಿದ ಕೆಲವು ಪ್ರಥಮ ದರ್ಜೆ ಮೆನುಗಳಲ್ಲಿ ಇದು ಕೂಡ ಒಂದು ಎಂದು ಹರಾಜು ಹೌಸ್ ಮ್ಯಾನೇಜರ್ ಆಂಡ್ರ್ಯೂ ಆಲ್ಡ್ರಿಡ್ಜ್ ನಂಬಿದ್ದಾರೆ.

    ಹರಾಜಿನಲ್ಲಿ ಟೈಟಾನಿಕ್ ಕಲಾಕೃತಿಗಳು ಅವುಗಳ ಮೂಲದ ಆಧಾರದ ಮೇಲೆ ವಿವಿಧ ವರ್ಗಗಳಿಗೆ ಸೇರುತ್ತವೆ. ಅವುಗಳಲ್ಲಿ ಟೈಟಾನಿಕ್​ ಅವಶೇಷಗಳಿಗೆ ವಶಕ್ಕೆ ಪಡೆದ ವಸ್ತುಗಳು, ಅವಘಡದಿಂದ ಬದುಕುಳಿದವರ ಬಳಿ ಇರುವ ವಸ್ತುಗಳು ಹಾಗೂ ಹಡಗಿನಿಂದ ಸ್ಮರಣಾರ್ಥವಾಗಿ ತೆಗೆದುಕೊಳ್ಳಲಾದ ಐಷಾರಾಮಿ ಡಿನ್ನರ್ ಮೆನುವಿನಂತೆ ಹಡಗಿನ ಇತರೆ ವಸ್ತುಗಳಾಗಿವೆ. ಈ ಡಿನ್ನರ್​ ಮೆನುವನ್ನು ಮೃತದೇಹಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪ್ಲೈಮೌತ್ ವಿಶ್ವವಿದ್ಯಾನಿಲಯದಲ್ಲಿ ಕಡಲ ಇತಿಹಾಸದ ಸಹಾಯಕ ಪ್ರಾಧ್ಯಾಪಕ ಹ್ಯಾರಿ ಬೆನೆಟ್ ನಂಬಿದ್ದಾರೆ.

    ಟೈಟಾನಿಕ್​ ಘಟನೆ ಹಿನ್ನೆಲೆ
    1912ರ ಏಪ್ರಿಲ್​ 15ರಂದು ಟೈಟಾನಿಕ್​ ದುರಂತ ಸಂಭವಿಸಿತು. ಸೌತಾಂಪ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್​ ಹಡಗು ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ 400 ಮೈಲು ದೂರದಲ್ಲಿ ಟೈಟಾನಿಕ್‌ ಹಡಗು ದುರಂತದಲ್ಲಿ ಮುಳುಗಡೆಯಾಯಿತು. ಒಂದು ಶತಮಾನಕ್ಕೂ ಅಧಿಕ ಸಮಯದಲ್ಲಿ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳು ಬಿದ್ದಿವೆ. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೇವಲ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. (ಏಜೆನ್ಸೀಸ್​)

    ಟೈಟಾನಿಕ್ ಸಿನಿಮಾದಲ್ಲಿ ಕೇಟ್ ವಿನ್ಸ್ಲೆಟ್ ಧರಿಸಿದ್ದ ಓವರ್ ಕೋಟ್ ಬೆಲೆ ಎಷ್ಟು ಗೊತ್ತಾ?

    ಸಿನಿಮಾ ಸೆಟ್​ನಲ್ಲಿ ಅವಘಡ: ಟೈಟಾನಿಕ್​ ಖ್ಯಾತಿಯ ನಟಿ ಕೇಟ್​ ಆಸ್ಪತ್ರೆಗೆ ದಾಖಲು

    ಟೈಟಾನಿಕ್‌ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯ ಪತ್ರ ₹48 ಲಕ್ಷಕ್ಕೆ ಹರಾಜು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts