ಹೈದರಾಬಾದ್: ತಿರುಪತಿಯ ತಿರುಮಲ ಶ್ರೀವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯು 6ರಿಂದ 8 ತಿಂಗಳ ಕಾಲ ಬಂದ್ ಆಗಿರಲಿದೆ. ದೇಶಾದ್ಯಂತ ಕರೊನಾ ಭೀತಿ ಆವರಿಸಿರುವ ಸಂದರ್ಭದಲ್ಲೇ ಇಂಥದ್ದೊಂದು ಸುದ್ದಿ ಹೊರಬಿದ್ದಿದೆ. ಆದರೆ ದೇವಸ್ಥಾನದ ಗರ್ಭಗುಡಿಯನ್ನು ಮುಚ್ಚಲು ಬೇರೆಯೇ ಕಾರಣವಿದೆ.
ತಿರುಮಲ ತಿರುಪತಿ ದೇವಸ್ಥಾನಮ್ಸ್ ಆಡಳಿತ ಮಂಡಳಿಯು ಶ್ರೀವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿ ಮೇಲಿನ ಮೂರಂತಸ್ತಿನ ವಿಮಾನಾಕೃತಿಯ ಗೋಪುರವಾಗಿರುವ ಆನಂದ ನಿಲಯದ ಬಂಗಾರದ ಕವಚವನ್ನು ಹೊಸದಾಗಿ ಹಾಕಿಸುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದಕ್ಕೆ ಸುದೀರ್ಘ ಸಮಯ ತಗುಲುವ ಹಿನ್ನೆಲೆಯಲ್ಲಿ ಆರರಿಂದ ಎಂಟು ತಿಂಗಳ ಕಾಲ ಗರ್ಭಗುಡಿಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ವೆಂಕಟೇಶ್ವರ ವಿಗ್ರಹವನ್ನು ಮುಖ್ಯ ದೇವಸ್ಥಾನದ ಬಳಿ ಇನ್ನೊಂದು ಕಡೆ ಪ್ರತಿಷ್ಠಾಪಿಸಲಾಗುವುದು ಎಂಬ ಮಾಹಿತಿಯೂ ಹೊರಬಿದ್ದಿದೆ. ಅಂದಹಾಗೆ ಮುಂದಿನ ವರ್ಷದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಯಾವಾಗಿನಿಂದ ಎಲ್ಲಿಯವರೆಗೆ ಗರ್ಭಗುಡಿ ಬಂದ್ ಇರಲಿದೆ ಎನ್ನುವ ಬಗ್ಗೆ ಟಿಟಿಡಿ ಸದ್ಯದಲ್ಲೇ ಮಾಹಿತಿ ತಿಳಿಸಲಿದೆ.
ಕಳೆದ ಸಲ ಅಂದರೆ 1958ರಲ್ಲಿ ಆನಂದ ನಿಲಯಮ್ಗೆ ಬಂಗಾರದ ಕವಚವನ್ನು ಹೊದಿಸಲಾಗಿದ್ದು, ಆಗ ಅದಕ್ಕೆ 8 ವರ್ಷ ತಗುಲಿದ್ದು, ಅದಾದ ಮೇಲೆ ಮತ್ತೆ ಅದನ್ನು ಬದಲಿಸಿರಲಿಲ್ಲ. 8ನೇ ಶತಮಾನದಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಮೊದಲ ಸಲ ಈ ಬಂಗಾರದ ಕವಚನ್ನು ಹಾಕಿಸಿದ್ದ ಎಂದು ಹೇಳಲಾಗುತ್ತಿದೆ. ಅದಾದ ಬಳಿಕ ಸುಮಾರು 7 ಸಲ ಬಂಗಾರದ ಕವಚ ಬದಲಿಸಲಾಗಿದೆ ಇಲ್ಲವೇ ಮಾರ್ಪಡಿಸಲಾಗಿದೆ ಎನ್ನಲಾಗುತ್ತಿದೆ.
ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್ಗಾಗಿ ಓಡುತ್ತಿದ್ದಾಗ ಹೃದಯಾಘಾತ..
ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!