More

    ಸಿಬ್ಬಂದಿಗೆ ಸಂಬಳ ನೀಡಲು ಬಡ್ಡಿ ದುಡ್ಡಿಗೆ ಮೊರೆಹೋದ ತಿರುಪತಿ ದೇಗುಲ; ಎಷ್ಟಿದೆ ಗೊತ್ತೆ ಠೇವಣಿ?

    ತಿರುಪತಿ: ಕರೊನಾದಿಂದಾಗಿ ಭಕ್ತರು ಬಾರದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಿರುಪತಿ- ತಿರುಮಲ ದೇವಸ್ಥಾನ ಮಂಡಳಿ ನಿರ್ವಹಣೆಗಾಗಿ ಬಡ್ಡಿ ದುಡ್ಡಿಗೆ ಮೊರೆ ಹೋಗಿದೆ.

    ದೇಗುಲಗಳ ನಿರ್ವಹಣೆ ಹಾಗೂ ಸಿಬ್ಬಂದಿ ಸಂಬಳಕ್ಕಾಗಿ ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರುವ 12,000 ಕೋಟಿ ರೂ. ಮೊತ್ತದ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ನಿರ್ಣಯಿಸಿದೆ.

    ಈ ವರ್ಷಕ್ಕಾಗಿ 3,309 ಕೋಟಿ ರೂ.ಗಳ ಬಜೆಟ್​ ಮಂಡಿಸಲಾಗಿತ್ತು. ಭಕ್ತರ ದೇಣಿಗೆ ಅಥವಾ ಹುಂಡಿ ಮೂಲಕ 1,313 ಕೋಟಿ ರೂ. ಆದಾಯ ಬರಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ, ಕರೊನಾ ನಿರ್ಬಂಧದಿಂದಾಗಿ ಈ ಆದಾಯದಲ್ಲಿ ಭಾರಿ ಕುಸಿತ ಉಂಟಾಗಿದೆ.

    ಇದನ್ನೂ ಓದಿ; ಕರೊನಾ ಸುಳ್ಳಿನ ರೋಗ, ಬೇಕಿದ್ರೆ ಸಾಬೀತು ಮಾಡ್ತೇನೆ: ಸರ್ಕಾರ, ವೈದ್ಯರಿಗೆ ಸ್ವಾಮೀಜಿ ಸವಾಲು!

    ತಿರುಪತಿ ದೇಗುಲಕ್ಕೆ ಹುಂಡಿ ಬಳಿಕ ಅತ್ಯಧಿಕ ಆದಾಯವಿರುವುದೇ ಠೇವಣಿಗಳ ಮೇಲಿನ ಬಡ್ಡಿಯಲ್ಲಿ 2020-21ನೇ ಸಾಲಿನಲ್ಲಿ ಬಡ್ಡಿ ಮೂಲಕವೇ ಅಂದಾಜು 706 ಕೋಟಿ ರೂ. ಆದಾಯ ದೊರೆಯುವ ನಿರೀಕ್ಷೆ ಹೊಂದಲಾಗಿದೆ.

    ಈ ಮೊದಲು ಈ ಬಡ್ಡಿಯನ್ನು ವಾರ್ಷಿಕ, ಅರ್ಧ ವಾರ್ಷಿಕ ಅವಧಿಗೆ ಲೆಕ್ಕ ಹಾಕಿ ಠೇವಣಿ ಅವಧಿ ಮುಗಿದ ಬಳಿಕವಷ್ಟೇ ಅದನ್ನು ಪಡೆಯಲಾಗುತ್ತಿತ್ತು. ಆದರೆ, ಈಗ ಅದನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

    ಇದನ್ನೂ ಓದಿ; ತೆರಿಗೆ ಸಂಗ್ರಹ ಕುಸಿತ, ರಾಜ್ಯಕ್ಕೆ ಆರ್ಥಿಕ ಸಂಕಷ್ಟ

    ಈ ಕೂಡಲೇ ಜಾರಿಗೆ ಬರುವಂತೆ ಎಲ್ಲ ಠೇವಣಿಗಳ ಬಡ್ಡಿಯನ್ನು ಮಾಸಿಕವಾಗಿ ಪಡೆದುಕೊಳ್ಳಲಾಗುವುದು. ಇದರಿಂದ ಪ್ರತಿ ತಿಂಗಳು ಹಣ ದೊರೆತು ಸಂಬಳ ಪಾವತಿ, ಇತರ ಖರ್ಚುಗಳು ಹಾಗೂ ಪೂಜಾ ವೆಚ್ಚವನ್ನು ಭರಿಸಲು ಬಳಸಿಕೊಳ್ಳಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.

    ಇದಲ್ಲದೇ, ಟಿಟಿಡಿ ಎಸ್​ಬಿಐನಲ್ಲಿ 5,387 ಕೆಜಿ ಚಿನ್ನ, ಇಂಡಿಯನ್ ಓವರ್​ಸೀಸ್​ ಬ್ಯಾಂಕ್​ನಲ್ಲಿ 1,938 ಕೆಜಿ ಹಾಗೂ ಪಿಎನ್​ಬಿ ಬ್ಯಾಂಕ್​ನಲ್ಲಿ 1,381 ಕೆಜಿ ಚಿನ್ನ ಠೇವಣಿ ಇಟ್ಟಿದೆ. ಇತ್ತೀಚೆಗೆ ಪಿಎನ್​ಬಿಯಲ್ಲಿದ್ದ ಚಿನ್ನವನ್ನು ಎಸ್​ಬಿಐಗೆ ವರ್ಗಾಯಿಸಿದೆ. ಇದರ ಮೇಲೆ ವಾರ್ಷಿಕ ಶೇ.2.5 ಬಡ್ಡಿ ದೊರೆಯುತ್ತಿದೆ. ಇದನ್ನು ದೀರ್ಘಾವಧಿ ಬಡ್ಡಿ ಯೋಜನೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಕೋವಿಡ್​ನಿಂದಾಗಿ 80 ದಿನಗಳವರೆಗೆ ದೇಗುಲವನ್ನು ಮುಚ್ಚಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts