More

    ತಿರುಪತಿ ತಿಮ್ಮಪ್ಪನ ಸನ್ನಿಧಿಗೆ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ!

    ತಿರುಮಲ: ದೇಶದ ಹಲವೆಡೆ ಕೋಮು ಸಂಘರ್ಷಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೆಲವರು ಕೋಮು ಸಾಮರಸ್ಯ ಸಾರುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲ ಧರ್ಮವನ್ನು ಗೌರವಿಸಿದಾಗ ಮಾತ್ರ ಅಲ್ಲಿ ಪ್ರೀತಿ ಮತ್ತು ಶಾಂತಿ ನೆಲೆಯೂರಲು ಸಾಧ್ಯ ಎಂಬ ಸಂದೇಶವನ್ನು ಕೆಲವರು ಸಾರುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

    ಹೌದು, ಸೆ. 20ರಂದು ಮುಸ್ಲಿಂ ಕುಟುಂಬವೊಂದು ತಿರುಪತಿ ದೇವಸ್ಥಾನಕ್ಕೆ 1.02 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ. ಅಬ್ದುಲ್​ ಘನಿ ಮತ್ತು ನುಬಿನಾ ಬಾನು ದಂಪತಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ಚೆಕ್​ ವಿತರಣೆ ಮಾಡಿದ್ದಾರೆ.

    ದಂಪತಿಯು ಶ್ರೀ ವೆಂಕಟೇಶ್ವರನ ಪರಮ ಭಕ್ತರು ಎಂದು ತಿಳಿದುಬಂದಿದೆ. ಧರ್ಮ ಬೇರೆಯಾದರೂ ಭಕ್ತಿ ಒಂದೇ ಎಂದು ಸಾರಿರುವ ದಂಪತಿ, ಎಲ್ಲರ ಗಮನದ ಸೆಳೆದಿರುವುದಲ್ಲದೆ, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

    ಅಂದಹಾಗೆ ದಂಪತಿ ಚೆನ್ನೈ ಮೂಲದವರು. ಸೆ. 20ರಂದು ದೇವಾಲಯ ಆವರಣ ರಂಗನಾಯಕುಲ ಮಂಟಪಂನಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ರೆಡ್ಡಿ ಅವರನ್ನು ಭೇಟಿ ಮಾಡಿದ ದಂಪತಿ 1.02 ಕೋಟಿ ರೂಪಾಯಿ ಮೌಲ್ಯದ ಚೆಕ್​ ಹಸ್ತಾಂತರ ಮಾಡಿದರು.

    1.02 ಕೋಟಿ ರೂಪಾಯಿ ದೇಣಿಗೆಯಲ್ಲಿ ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ ಮಾಡುವ ಶ್ರೀ ವೆಂಕಟೇಶ್ವರ ಅನ್ನ ಪ್ರಸಾದಂ ಟ್ರಸ್ಟ್​ಗೆ 15 ಲಕ್ಷ ರೂ., ಹಾಗೂ ಉಳಿದ 87 ಲಕ್ಷ ರೂ. ಶ್ರೀ ಪದ್ಮಾವತಿ ಅತಿಥಿ ಗೃಹದಲ್ಲಿನ ಅಡುಗೆಮನೆಯಲ್ಲಿ ಹೊಸ ಪೀಠೋಪಕರಣಗಳು ಮತ್ತು ಇನ್ನಿತರ ವಸ್ತುಗಳಿಗೆ ಮೀಸಲಾಗಿದೆ.

    ಇತ್ತೀಚೆಗಷ್ಟೇ ರಿಲಯನ್ಸ್​ ಇಂಡಸ್ಟ್ರಿ ಚೇರ್ಮನ್​ ಮುಕೇಶ್​ ಅಂಬಾನಿ ಅವರು ತಿರುಪತಿಗೆ ಭೇಟಿ ನೀಡಿ 1.5 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರು. ಇದು ಭಾರಿ ಸುದ್ದಿಯಾಯಿತು.(ಏಜೆನ್ಸೀಸ್​)

    ತಾಜ್ ಮಹಲ್ ಮುಂದೆ ಫೊಟೋ ತೆಗೆಯುವಾಗ ಕೋತಿ ದಾಳಿ; ಸ್ಪೈನ್ ಮಹಿಳೆ ಆಸ್ಪತ್ರೆಗೆ ದಾಖಲು

    ಶಿಕ್ಷಕರ ವರ್ಗಾವಣೆ: ರೈಲನ್ನೇ ಅಡ್ಡಗಟ್ಟಿದ ವಿದ್ಯಾರ್ಥಿಗಳು- ಮಕ್ಕಳ ಪ್ರತಿಭಟನೆಗೆ ರೈಲ್ವೆ ಸಿಬ್ಬಂದಿ ಸುಸ್ತು

    ಮಿಗ್​ಗೆ ವಿದಾಯ: ಶ್ರೀನಗರದ ಮಿಗ್ 51 ಸ್ಕ್ವಾಡ್ರನ್ ಸ್ವೋರ್ಡ್ ಆರ್ಮ್ಸ್​ 30ಕ್ಕೆ ನಿವೃತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts