More

    ಬೆಂಗಳೂರು-ತಿರುಪತಿ ರೈಲುಗಳ ಮಾರ್ಗ ಬದಲಾವಣೆ; ಸುರಕ್ಷತಾ ಕಾಮಗಾರಿ ಆರಂಭ ಹಿನ್ನೆಲೆ ಕ್ರಮ

    ಬೆಂಗಳೂರು: ತಿರುಪತಿ ನಿಲ್ದಾಣದಲ್ಲಿ ಸುರತಾ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಡುವ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆ ಸೂಚಿಸಿದೆ.

    ಸರ್​.ಎಂ.ವಿಶ್ವೇಶ್ವರಯ್ಯ ಟಮಿರ್ನಲ್​ ನಿಲ್ದಾಣದಿಂದ ಮಾ.11 ಮತ್ತು 18 ರಂದು ಹೊರಡುವ ಟಾಟಾನಗರ ಸಾಪ್ತಾಹಿಕ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲು(ಸಂಖ್ಯೆ 12890) ಕಟ್ಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

    ಮಾ.12, 14, 19, ಮತ್ತು 21 ರಂದು ಸರ್​.ಎಂ.ವಿಶ್ವೇಶ್ವರಯ್ಯ ಟಮಿರ್ನಲ್​ ನಿಲ್ದಾಣದಿಂದ ಹೊರಡುವ ಹಟಿಯಾ ದ್ವಿ-ಸಾಪ್ತಾಹಿಕ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲು (ಸಂಖ್ಯೆ 12836) ಕಟ್ಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

    ಭಾಗಶಃ ರದ್ದು ಸಾಧ್ಯತೆ

    ಮುರುಡೇಶ್ವರ ಮತ್ತು ಸೇನಾಪುರ ಭಾಗದ ನಡುವೆ ಸುರತೆಗೆ ಸಂಬಂಧಿಸಿದ ಕಾಮಗಾರಿ ಇರುವುದರಿಂದ ಮಾ.7ರಂದು ಕೆಲ ರೈಲುಗಳು ರದ್ದಾಗುವ ಸಾಧ್ಯತೆ ಇದೆ ಎಂದು ಕೊಂಕಣ ರೈಲ್ವೆ ಸೂಚಿಸಿದೆ. ಸರ್​.ಎಂ.ವಿಶ್ವೇಶ್ವರಯ್ಯ ರ್ಟಮಿನಲ್​ ನಿಲ್ದಾಣದಿಂದ ಮಾ.6ರಂದು ಹೊರಡುವ ಮುರುಡೇಶ್ವರ ಎಕ್ಸ್​ಪ್ರೆಸ್​ ರೈಲು (ಸಂಖ್ಯೆ 16585) ಕುಂದಾಪುರವರೆಗೆ ಸಂಚರಿಸಲಿದೆ. ಕುಂದಾಪುರ&ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶ@ ರದ್ದಾಗಲಿದೆ.

    ಮುರುಡೇಶ್ವರ-ಸರ್​.ಎಂ.ವಿಶ್ವೇಶ್ವರಯ್ಯ ರ್ಟಮಿನಲ್​ ನಿಲ್ದಾಣ ರೈಲು (ಸಂಖ್ಯೆ 16586) ಮಾ.7ರಂದು ಕುಂದಾಪುರ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts