More

    ನರಸೀಪುರ ಪೊಲೀಸ್ ಠಾಣೆಯಲ್ಲೇ ಕಳ್ಳತನ?: 58 ಸಜೀವ ಬುಲೆಟ್​ಗಳು ನಾಪತ್ತೆ!​

    ಮೈಸೂರು: ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಇದು. ಪೊಲೀಸ್​ ಠಾಣೆಯಲ್ಲಿ 58 ಬುಲೆಟ್​ಗಳು ನಾಪತ್ತೆಯಾಗಿದ್ದು, ಕಳ್ಳತನವಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

    ಇದನ್ನೂ ಓದಿ: ಎಲ್ಲೆಲ್ಲೂ ಹೆಣಗಳ ರಾಶಿ: ಹತ್ತಿರ ಸುಳಿಯದ ಸಂಬಂಧಿಕರು- ಚಿಕಿತ್ಸೆಗೆ ದಿನಗಟ್ಟಲೆ ಕಾಯುವ ಸ್ಥಿತಿ!

    ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿದ್ದ 58 ಸಜೀವ್​ ಬುಲೆಟ್​ಗಳು ನಾಪತ್ತೆಯಾಗಿವೆ. 303 ರೈಫಲ್​ಗೆ ಬಳಸುವ ಗುಂಡುಗಳಾಗಿದ್ದವು. ಇದೀಗ ಬುಲೆಟ್‌ಗಳು ಹೇಗೆ ಕಾಣೆಯಾದವು ಎಂಬುದರ ಬಗ್ಗೆ ತಲೆ ಪೊಲೀಸರು ಕೆಡಿಸಿಕೊಂಡಿದ್ದಾರೆ.

    ಶಸ್ತ್ರಾಸ್ತ್ರಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಗೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

    VIDEOS| ಬಡತನದಲ್ಲೂ ಅರಳಿದ ಪ್ರತಿಭೆ: ಅಣ್ಣ-ತಂಗಿ ಡ್ಯಾನ್ಸ್​ಗೆ​ ಲಕ್ಷಾಂತರ ಮಂದಿ ಫಿದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts