More

    ಪಿಂಚಣಿ ಅದಾಲತ್‌ಗೆ ತಿಪಟೂರು ಉಪವಿಭಾಗ ಸಜ್ಜು ; ಜೂ.25ರಿಂದ ಜು.23ರವರೆಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅದಾಲತ್

    ತುಮಕೂರು: ಜಿಲ್ಲೆಯಲ್ಲಿ ಕುಂಟುತ್ತ ಸಾಗಿರುವ ಪಿಂಚಣಿ ಅದಾಲತ್ ಬಗ್ಗೆ ಜೂ.13ರಂದು ‘ವಿಜಯವಾಣಿ’ ಪ್ರಕಟಿಸಿದ್ದ ವರದಿಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಗುರುವಾರ ಅದಾಲತ್ ಆರಂಭವಾಗಲಿದೆ.

    ತಿಪಟೂರು ಉಪವಿಭಾಗದ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಲ್ಳಿ ತಾಲೂಕಿಗಳಲ್ಲಿ ಜೂ.25ರಿಂದ ಜು.23ರವರೆಗೆ ವಿವಿಧ ದಿನಗಳಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ನೇತೃತ್ವದಲ್ಲಿ ಅದಾಲತ್ ನಡೆಯಲಿದೆ.

    ಗ್ರಾಮೀಣ ಭಾಗದ ಅರ್ಹರು ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಮಹತ್ವಾಕಾಂಕ್ಷಿ ‘ಪಿಂಚಳಿ ಅದಾಲತ್’ ಜಿಲ್ಲೆಯಲ್ಲಿ ಹಳ್ಳಹಿಡಿದಿದ್ದ ಬಗ್ಗೆ ಸಮಗ್ರ ವರದಿ ಪ್ರಕಟಿಸಲಾಗಿತ್ತು. ಪಂಚ ಸೌಕರ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ವಸತಿ ಸೌಕರ್ಯಗಳ ನೈಜ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಮನೆಯ ಬಾಗಿಲಿನಲ್ಲಿಯೇ ಪಡೆಯಬಹುದು.

    ಜೂ.25ರಂದು ತುರುವೇಕೆರೆ ತಾಲೂಕು ದಂಡಿನಶಿವರದ ಡಮರುಗ ಕಲಾ ಮಂದಿರ, 26ರಂದು ತಿಪಟೂರಿನ ಕಸಬಾ ಹೋಬಳಿ ಸರ್ಕಾರಿ ನೌಕರರ ಭವನ, 30ರಂದು ಹಂದನಕೆರೆ ಹೋಬಳಿ ದೊಡ್ಡಎಣ್ಣೆಗೆರೆ, ಜು.2ರಂದು ತುರುವೇಕೆರೆ ತಾಲೂಕು ಕಸಬಾ ಹೋಬಳಿ ಮಲ್ಲಾಘಟ್ಟ ಕರೆಕೋಡಿ ಗಂಗಾಧರೇಶ್ವರ ದೇವಾಲಯ, 4ರಂದು ತಿಪಟೂರು ತಾಲೂಕು ನೊಣವಿನಕೆರೆ ನಾಡಕಚೇರಿ, 7ರಂದು ಹುಳಿಯಾರು ಹೋಬಳಿ ದೊಡ್ಡಬಿದರೆ, 14ರಂದು ತಿಪಟೂರು ತಾಲೂಕು ಹೊನ್ನವಳ್ಳಿ ನಾಡಕಚೇರಿ, 16ರಂದು ದೆಬ್ಬೇಘಟ್ಟ ಹೋಬಳಿ ಕಣತ್ತೂರು, 21ರಂದು ಕಂದಿಕೆರೆ ಹೋಬಳಿ ರಾಮನಹಳ್ಳಿ ಹಾಗೂ 23ರಂದು ಕಿಬ್ಬನಹಳ್ಳಿ ನಾಡಕಚೇರಿ ಆವರಣದಲ್ಲಿ ಅದಾಲತ್ ನಡೆಯಲಿದ್ದು, ಆಯಾ ಹೋಬಳಿಯ ಜನರು ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

    ಸಾಮಾಜಿಕ ಭದ್ರತಾ ಯೋಜನೆಯಲ್ಲಿರುವ ಪಿಂಚಣಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿ ಸರ್ಕಾರಿ ಇಲಾಖೆಗಳಲ್ಲಿ ಬಾಕಿ ಇರುವ ಕೆಲಸಗಳಿಗೆ ನೇರವಾಗಿ ಅದಾಲತ್‌ನಲ್ಲಿ ಪರಿಹಾರ ಪಡೆಯಬಹುದು, ನಿಗದಿತ ದಿನಾಂಕದಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು.
    ಕೆ.ಆರ್.ನಂದಿನಿ ಉಪವಿಭಾಗಾಧಿಕಾರಿ, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts