More

    ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ

    ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲಿ ರದ್ದಾದ ರೈಲುಗಳಲ್ಲ ಪ್ರಯಾಣಿಸಲು ಟಿಕೆಟ್ ಪಡೆದಿದ್ದವರಿಗೆ ಹಣ ಮರುಪಾವತಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಅದಕ್ಕಾಗಿ 9 ನಿಲ್ದಾಣಗಳಲ್ಲಿ ಕೇಂದ್ರಗಳನ್ನು ತೆರೆದಿದ್ದಾರೆ.

    ಇದನ್ನೂ ಓದಿ: ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

    ಕರೊನಾ ಭೀತಿಯಿಂದಾಗಿ ಮಾ. 24ರಿಂದ ದೇಶವ್ಯಾಪಿ ಲಾಕ್​ಡೌನ್ ಮಾಡಲಾಗಿದೆ. ಅದರಿಂದಾಗಿ ರೈಲು ಸಂಚಾರ ರದ್ದಾಗುವಂತಾಗಿತ್ತು. ಆದರೆ, ಅದಕ್ಕೂ ಮುನ್ನ ರೈಲಿನಲ್ಲಿ ಪ್ರಯಾಣಿಕರು ಸಾವಿರಾರು ಜನರು ಟಿಕೆಟ್ ಖರೀದಿಸಿದ್ದರು. ರದ್ದಾದ ರೈಲುಗಳಲ್ಲಿ ಸಂಚರಿಸಲು ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಅದಕ್ಕಾಗಿ ಕೆಎಸ್​ಆರ್ ಬೆಂಗಳೂರು ನಗರ ನಿಲ್ದಾಣ, ಬೆಂಗಳೂರು ದಂಡು, ಯಶವಂತಪುರ, ಕೆ.ಆರ್. ಪುರ, ಕೆಂಗೇರಿ, ಮಂಡ್ಯ, ತುಮಕೂರು ಮತ್ತು ಹೊಸೂರು ನಿಲ್ದಾಣಗಳ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್​ಗಳಲ್ಲಿ ಹಣ ವಾಪಸ್ ಪಡೆಯಬಹುದು.

    ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ

    ವಾರದ ದಿನಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಟಿಕೆಟ್ ಹಣ ವಾಪಸ್ ಪಡೆಯಲು ಸಮಯ ನಿಗದಿ ಮಾಡಲಾಗಿದೆ. ಜು.31ರೊಳಗೆ ಹಣ ನಿಗದಿತ ಕೌಂಟರ್​ಗಳಲ್ಲಿ ಹಣ ಪಡೆಯುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

    ಸತ್ತವ ಎದ್ದು ಬಂದ; ಮತ್ತೆ ಸತ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts