More

    ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಭೇಟಿ

    ಅರಸೀಕೆರೆ: ದಕ್ಷಿಣ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಸಂಜೀವ್ ಕಿಶೋರ್ ಶುಕ್ರವಾರ ನಗರದ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ವಿದ್ಯುದ್ದೀಕರಣ ಮಾರ್ಗ, ನೂತನ ಉದ್ಯಾನವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

    ಸ್ಥಳದಲ್ಲಿ ಹಾಜರಿದ್ದ ರೈತಸಂಘ ಹಾಗೂ ಮಾನವ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಹಲವು ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಸ್ಥಳೀಯ ನಿಲ್ದಾಣದಿಂದ ಹೊರಡುವ ಪ್ಯಾಸೆಂಜರ್ ಅಥವಾ ವೇಗದೂತ ರೈಲು ಗಾಡಿಗೆ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಹೆಸರಿಡಬೇಕು. ಹಾಗೆಯೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಭಕ್ತರ ಅನುಕೂಲಕ್ಕೆ ವಿಶೇಷ ರೈಲು ಸಂಚಾರ ಆರಂಭಿಸಬೇಕು ಎಂದರು.
    ಸಮಾಜ ಸೇವಕ ಉಂಡಿಗನಾಳು ದಿನೇಶ್ ಮನವಿ ಪತ್ರನೀಡಿ ಲಕ್ಷ್ಮೀಪುರ, ಮಲ್ಲೇಶ್ವರ ನಗರ ಸಂಪರ್ಕಿಸುವ ಮೇಲ್ಸೇತುವೆ ನಿರ್ಮಾಣ, ವೃದ್ಧರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಎಸ್ಕ್ಯುಲೇಟರ್ ಸೌಲಭ್ಯ ಕಲ್ಪಿಸುವ ಜತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಬೇಕು ಎಂದರು.
    ಜೈನಸಮುದಾಯದ ಮುಖಂಡರಾದ ಮಾಂಗಿಲಾಲ್ ಮೆಹತಾ, ಮಹವೀರ್ ಬೋಹರಾ, ಸಂತೋಷ್, ಶಿವು, ಗೊಲ್ಲರಹಳ್ಳಿ ಷಡಕ್ಷರಿ, ಅಯೂಬ್ ಪಾಷಾ, ದಸ್ತಗೀರ್, ಬೀರಪ್ಪ, ಏಜಾಜ್ ಪಾಷಾ ಸೇರಿ ಹಲವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts