More

    ದ್ವಿಪಥ ರೈಲು ಮಾರ್ಗದಿಂದ ಗೋವಾ ಅಭಿವೃದ್ಧಿ

    ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಗೋವಾದಲ್ಲಿ ಕೈಗೊಂಡಿರುವ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿಯಿಂದ ಅಲ್ಲಿಯ ಪರಿಸರ, ಪಾರಂಪರಿಕ ವಿಶೇಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಬದಲಾಗಿ ಆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಹೆಚ್ಚುವರಿ ಮಹಾಪ್ರಬಂಧಕ ಪಿ.ಕೆ. ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

    ಬುಧವಾರ ವರ್ಚುವಲ್ ಸುದ್ದಿಗೋಷ್ಠಿ ಮೂಲಕ ಈ ಕುರಿತು ವಿವರ ನೀಡಿದ ಅವರು, ಹೊಸಪೇಟೆಯಿಂದ ವಾಸ್ಕೊ ಡ ಗಾಮಾವರೆಗಿನ 342 ಕಿಮೀ ಉದ್ದ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಸುಮಾರು 2,200 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ-ಉಣಕಲ್ ಮಧ್ಯದ 10 ಕಿಮೀ ಉದ್ದದ ಮಾರ್ಗದ ದ್ವಿಪಥಗೊಳಿಸುವಿಕೆ ಹೊರತುಪಡಿಸಿದರೆ ಕರ್ನಾಟಕದಲ್ಲಿ ಈ ಕಾಮಗಾರಿ ಪೂರ್ಣಗೊಂಡಂತಾಗಿದೆ. ಬಾಕಿ ಉಳಿದಿರುವ ಕಾಮಗಾರಿ ಬರುವ ಮಾರ್ಚ್​ನಲ್ಲಿ ಪೂರ್ಣಗೊಳ್ಳಲಿದೆ ಎಂದರು.

    ದ್ವಿಪಥ ಮಾರ್ಗದಿಂದ ರೈಲುಗಳ ಸಂಚಾರ ವೇಗ ಹೆಚ್ಚುತ್ತದೆ. ಪ್ರಯಾಣಿಕರ ಹಾಗೂ ಸರಕು ಸಾಗಾಟಕ್ಕೆ ಅನುಕೂಲವಾಗುತ್ತದೆ. ಆದರೆ, ಗೋವಾದಲ್ಲಿ ಈ ಕಾಮಗಾರಿಗೆ ವಿರೋಧ ವ್ಯಕ್ತವಾಗುತ್ತಿದೆ. ಕಲ್ಲಿದ್ದಲು ಸಾಗಾಟ ಹೆಚ್ಚಾಗಿ ಪರಿಸರ ನಾಶವಾಗುತ್ತದೆಯೆಂದು ಗೋವಾ ನಿವಾಸಿಗಳು ಆತಂಕಗೊಳ್ಳುವ ಅಗತ್ಯವಿಲ್ಲ. ಗೋವಾ ಬಂದರುಗಳಿಂದ ಸಾಗಿಸುತ್ತಿದ್ದ ಕಲ್ಲಿದ್ದಲು ಈಗಾಗಲೇ ಶೇ. 20ರಷ್ಟು ಕಡಿಮೆಯಾಗಿದೆ. 4 ವರ್ಷಗಳ ಹಿಂದೆ ಪ್ರತಿ ವರ್ಷ 12 ಮಿಲಿಯನ್ ಟನ್ ಕಲ್ಲಿದ್ದಲು ಸಾಗಿಸಲಾಗಿತ್ತು. ಆದರೆ 2019ರಲ್ಲಿ 9 ಮಿಲಿಯನ್ ಟನ್​ಗೆ ಇಳಿದಿದೆ. ಭವಿಷ್ಯದಲ್ಲಿ ಕಲ್ಲಿದ್ದಲು ಸಾಗಾಟ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

    ರೈಲ್ವೆ ಮಾರ್ಗ ದ್ವಿಪಥಗೊಳ್ಳುವುದರ ಜತೆಗೆ ಇಲೆಕ್ಟ್ರಿಫಿಕೇಶನ್ ಕಾಮಗಾರಿಗೂ ಮಂಜೂರಿ ದೊರೆತಿದೆ. ಗೋವಾದಲ್ಲಿ ನೈಋತ್ಯ ರೈಲ್ವೆಯ 3 ರೈಲುಗಳು ವಾರದಲ್ಲಿ 2 ಬಾರಿ ಸಂಚರಿಸುತ್ತಿವೆ. ಈಗಾಗಲೇ ದೇಶದ ವಿವಿಧೆಡೆಯಿಂದ ಗೋವಾಕ್ಕೆ ರೈಲು ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಕೇಳಿಬರುತ್ತಿದೆ. ದ್ವಿಪಥ ಮಾರ್ಗ ನಿರ್ವಣದ ಜತೆಗೆ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ಪ್ಲಾಟ್​ಫಾಮರ್್​ಗಳ ನಿರ್ವಣ, ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳನ್ನೂ ನಿರ್ವಿುಸಲಾಗುವುದು ಎಂದು ತಿಳಿಸಿದರು.

    ಈಗಿರುವ ರೈಲು ಮಾರ್ಗವನ್ನು ಬ್ರಿಟಿಷರು 1880ರಲ್ಲಿ ನಿರ್ವಿುಸಿದ್ದರು. ಅವರಿಗೆ ಗೋವಾದ ಅಭಿವೃದ್ಧಿ ಬೇಕಿರಲಿಲ್ಲ. ಹೀಗಾಗಿ ದ್ವಿಪಥ ಮಾರ್ಗ ಅಳವಡಿಕೆಗೆ ಚಿಂತಿಸಿರಲಿಲ್ಲ. ದ್ವಿಪಥ ಮಾರ್ಗಕ್ಕೆ ಹೆಚ್ಚುವರಿಯಾಗಿ ಭೂಮಿ ವಶಪಡಿಸಿಕೊಳ್ಳುತ್ತಿಲ್ಲ. ಈಗಿರುವ ಮಾರ್ಗದ ಪಕ್ಕದಲ್ಲಿಯೇ ಮತ್ತೊಂದು ಮಾರ್ಗ ಅಳವಡಿಸಲಾಗುವುದು ಎಂದರು.

    ಈ ಕಾಮಗಾರಿಗೆ 60 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಎಷ್ಟು ಮರಗಳನ್ನು ಕಟಾವು ಮಾಡಬೇಕೆಂಬ ಬಗ್ಗೆ ಇನ್ನೂ ಸರ್ವೆ ಮಾಡಿಲ್ಲ. ಈಗಿರುವ ಮರಗಳನ್ನು ಉಳಿಸಿಕೊಂಡು ಕಾಮಗಾರಿ ನಡೆಸಲು ಪ್ರಯತ್ನಿಸಲಾಗುವುದು ಎಂದು ಇ. ವಿಜಯಾ ಹೇಳಿದರು.

    ಮುಖ್ಯ ಪ್ರೊಜೆಕ್ಟ್ ಮ್ಯಾನೇಜರ್ ಪಿ.ಕೆ. ಕ್ಷತ್ರಿಯ, ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಎಸ್.ಕೆ. ಝಾ, ಉಪಸ್ಥಿತರಿದ್ದರು.

    ಗೋವಾದಲ್ಲಿ 90 ಕಿಮೀ ಉದ್ದದ ಮಾತ್ರ ಏಕಪಥ ರೈಲು ಮಾರ್ಗ ಇದ್ದು, ದ್ವಿಪಥ ಮಾರ್ಗ ಅಳವಡಿಕೆಯಿಂದ ಆ ರಾಜ್ಯದ ಅಭಿವೃದ್ಧಿಯಾಗುತ್ತದೆ. ಶೇ. 40ಕ್ಕೂ ಹೆಚ್ಚು ಪ್ರವಾಸಿಗರು ರಸ್ತೆ ಮೂಲಕವೇ ಗೋವಾಕ್ಕೆ ಆಗಮಿಸುತ್ತಿದ್ದಾರೆ. ದ್ವಿಪಥ ಮಾರ್ಗ ಹಾಗೂ ರೈಲ್ವೆ ಇಲೆಕ್ಟ್ರಿಫಿಕೇಶನ್​ನಿಂದ ರೈಲು ಸಂಚಾರ ಹೆಚ್ಚುತ್ತದೆ.

    | ಇ. ವಿಜಯಾ ಡಿಜಿಎಂ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts