More

    ಥ್ರಿಪ್ಸ್-ಮೈಟ್ಸ್ ನುಸಿ ಪೀಡೆ ರೋಗ ನಿಯಂತ್ರಣ ಅಭಿಯಾನ

    ಬಾಗಲಕೋಟೆ: ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ತೋಟಕ್ಕೆ ತಗಲುವ ಥ್ರಿಪ್ಸ್ ಮತ್ತು ಮೈಟ್ಸ್ ನುಸಿ ಪೀಡೆ ರೋಗ ನಿಯಂತ್ರಣ ಸಲುವಾಗಿ ರೇಷ್ಮೆ ಬೆಳೆಗಾರರಲ್ಲಿ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಎಂ.ಕೋರೆ ತಿಳಿಸಿದ್ದಾರೆ.

    ಥ್ರಿಪ್ಸ್ ಮತ್ತು ಮೈಟ್ಸ್ ನುಸಿ ಬಾಧೆ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮ ಮತ್ತು ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಇತ್ತೀಚೆಗೆ ಹಿಪ್ಪು ನೇರಳೆ ತೋಟಗಳಲ್ಲಿ ಗಿಡಗಳಿಗೆ ಹಾನಿ ಉಂಟಾಗಿ ಸೊಪ್ಪಿನ ಇಳುವರಿ ಕುಂಠಿತಗೊಂಡು ರೇಷ್ಮೆ ವ್ಯವಸಾಯದಲ್ಲಿ ಗೂಡಿನ ಗುಣಮಟ್ಟ ಹಾಗೂ ಇಳುವರಿ ಮೇಲೆ ಪರಿಣಾಮ ಬೀರಿದೆ.

    ನುಸಿ ಹಾವಳಿ ತಡೆಗಟ್ಟುವ ಸಲುವಾಗಿ ಬಾಗಲಕೋಟೆ ರೇಷ್ಮೆ ಉಪನಿರ್ದೇಶಕರ ನೇತೃತ್ವದಲ್ಲಿ ಅರಿವು ಮೂಡಿಸುವ ಅಭಿಯಾನ ಏರ್ಪಡಿಸಿ ಮುಂಜಾಗ್ರತೆ ಕ್ರಮಗಳು, ಜೈವಿಕ ನಿಯಂತ್ರಣ ಮತ್ತು ರಾಸಾಯನಿಕ ನಿಯಂತ್ರಣದಲ್ಲಿ ಶಿಾರಸು ಮಾಡಿದ ಯಾವುದಾದರೂ ನುಸಿ ನಾಶಕವನ್ನು ಬಳಸುವ ಪ್ರಮಾಣದ ಬಗ್ಗೆ ರೈತರಿಗೆ ತಿಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೈನೋೈರಾಫಿನ್ ಶೇ. 30 ಎಸ್‌ಸಿ ರಾಸಾಯನಿಕವನ್ನು 0.5 ಮಿ.ಲೀ./ಲೀ ಪ್ರಮಾಣದಲ್ಲಿ ಪ್ರತಿ ಎಕರೆಗೆ 150-175 ಲೀ. 20 ದಿನ, ೆನಜಾಕ್ಷಿನ್ ಶೇ.10 ಇಸಿಯನ್ನು 2.0 ಮಿ.ಲೀ ಪ್ರಮಾಣದಲ್ಲಿ, ಡೈಕೋಪಾಲ್ ಶೇ.18.5 ಇಸಿ ಕೊಲೋನೆಲ್-ಎಸ್‌ನ್ನು 1.5 ಮಿ.ಲೀ. ಪ್ರಮಾಣದಲ್ಲಿ, ಪ್ರಾಪರ್ ಜೈಟ್ ಶೇ. 57ಇಸಿ ಓಮೈಟ್‌ನ್ನು 2.5ಮಿ.ಲೀ. ಹಾಗೂ ವೇಟಸಲ್ಪರ್ ಶೇ.80 ಡಬ್ಲೂಡಿಜಿಯನ್ನು 3 ಗ್ರಾಂ ಲೀ. ಪ್ರಮಾಣದಲ್ಲಿ ಪ್ರತಿ ಎಕರೆಗೆ 150-175 ಲೀಟರ್‌ನ್ನು 20 ದಿನಗಳವರೆಗೆ ನಾಶಕವನ್ನು ಬಳಸಬೇಕು ಎಂದು ಉಪನಿರ್ದೇಶಕರು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts