More

    ಎರಡನೇ ಮಹಡಿಯಿಂದ ಬಿದ್ದಿದ್ದ 3 ವರ್ಷದ ಮಗು ಸಾವು; ಫಲಿಸಲಿಲ್ಲ ಮೂರು ದಿನಗಳ ಜೀವನ್ಮರಣ ಹೋರಾಟ

    ಬೆಂಗಳೂರು: ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. ಮೂರು ದಿನಗಳಿಂದ ಜೀವನ್ಮರಣ ಹೋರಾಟದ ನಡೆಸುತ್ತಿದ್ದ ಬಾಲಕನನ್ನು ಬದುಕುಳಿಸಿಕೊಳ್ಳುವ ವೈದ್ಯರ ಅವಿರತ ಪ್ರಯತ್ನ ಕೊನೆಗೂ ಫಲಿಸಲಿಲ್ಲ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ರಾಹುಲ್ ಸಾವಿಗೀಡಾದ ಬಾಲಕ. ಈತ ಕೆಂಗೇರಿ ಬಿಡಿಎ ಜ್ಞಾನಭಾರತಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಆಟವಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದ. ಗಂಭೀರ ಗಾಯಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಈತನನ್ನು ಕೆಂಗೇರಿ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಸಂಜೆ ಈತ ಕೊನೆಯುಸಿರೆಳೆದಿದ್ದಾನೆ.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ರಾಹುಲ್ ಕಲಬುರಗಿ ಮೂಲದ ಗಾರೆ ಮೇಸ್ತ್ರಿ ಶಿವಪ್ಪ ಮತ್ತು ಅಂಬಿಕಾ ದಂಪತಿಯ ಪುತ್ರ. ಕಳೆದ 3 ವರ್ಷದಿಂದ ಈ ದಂಪತಿ ಮಗನೊಂದಿಗೆ ಅಪಾರ್ಟ್‌ಮೆಂಟ್‌ನ ಕಾವೇರಿ ಎಚ್ ಬ್ಲಾಕ್ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಬೆಳಗ್ಗೆ 11.07ರಲ್ಲಿ ಬಾಲ್ಕನಿಯಲ್ಲಿ ಚೇರ್ ಮೇಲೆ ನಿಂತುಕೊಂಡು ಮಗು ಆಟವಾಡುತ್ತಿದ್ದಾಗ ಅನಾಹುತ ಸಂಭವಿಸಿತ್ತು. ತಕ್ಷಣ ಅಕ್ಕಪಕ್ಕದ ನಿವಾಸಿಗಳು ಮತ್ತು ಪಾಲಕರು ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಅನಾಹುತದ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಮಹಿಳೆಯ ಶವ ಪತ್ತೆ; ಪೊಲೀಸ್ ಅಧಿಕಾರಿಗಳ ದೌಡು, ವ್ಯಾಪಕ ಪರಿಶೀಲನೆ

    ಬೆಂಗಳೂರು-ಮೈಸೂರು ದಶಪಥ: ನಾಳೆಯಿಂದಲೇ ಟೋಲ್ ಕಲೆಕ್ಷನ್; ಪೊಲೀಸ್ ಭದ್ರತೆಯಲ್ಲಿ ಹಣ ಸಂಗ್ರಹಕ್ಕೆ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts