ಮಂಡ್ಯ: ಮಂಡ್ಯ ಜಿಲ್ಲೆಯೊಂದರಲ್ಲೇ ಮೂವರು ತಹಸೀಲ್ದಾರ್ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಜಿಲ್ಲೆಯ ಮೂರು ತಾಲೂಕು ಕಚೇರಿಗಳಿಗೆ ಭೇಟಿ ನೀಡಿದ್ದವರಿಗೆ ಈಗ ಸೋಂಕಿನ ಭಯ ಆವರಿಸಿದೆ.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ತಾಲೂಕಿನ ತಹಸೀಲ್ದಾರ್ ಅವರಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ. ಮಂಡ್ಯ ತಹಸೀಲ್ದಾರ್ ಚಂದ್ರಶೇಖರ್, ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿ ಮತ್ತು ಶ್ರೀರಂಗಪಟ್ಟಣದ ತಹಸೀಲ್ದಾರ್ ಶ್ವೇತಾ ರವೀಂದ್ರ ಸೋಂಕಿಗೆ ಒಳಗಾದವರು.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮೂವರೂ ತಹಸೀಲ್ದಾರರು ವೈದ್ಯರ ಸಲಹೆ ಮೇರೆಗೆ ಐಸೋಲೇಷನ್ಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಈ ಮೂರು ತಾಲೂಕು ಕಚೇರಿಗಳಿಗೆ ಕಳೆದ ಕೆಲವು ದಿನಗಳಲ್ಲಿ ಭೇಟಿ ನೀಡಿದ್ದವರಿಗೆ ಮತ್ತು ಕಚೇರಿ ಸಿಬ್ಬಂದಿಗೆ ಆತಂಕ ಉಂಟಾಗಿದೆ.
ಇದು ಹಾಟೆಸ್ಟ್ ಸೀರೆ!; ಇದನ್ನು ಬೆಂಕಿಪೊಟ್ಟಣದೊಳಗಿಟ್ಟು ಒಯ್ಯಬಹುದು..!