More

    ರಕ್ಷಣಾ ಸಾಧನಗಳಿಲ್ಲದೆ ಕಸ ಸಂಗ್ರಹಿಸುವ, ಪ್ಲಾಸ್ಟಿಕ್​ ಸುತ್ತಿಕೊಂಡು ರೋಗಿಗಳ ಆರೈಕೆ ಮಾಡಿದ ನರ್ಸ್​ಗಳಿಗೆ ಅಂಟಿಕೊಂಡ ಕರೊನಾ

    ಲಂಡನ್​: ಆಸ್ಪತ್ರೆಯಲ್ಲಿ ಕ್ಲಿನಿಕಲ್​ ವೇಸ್ಟ್​ ಸಂಗ್ರಹಿಸಲು ಬಳಸುವ ಪ್ಲಾಸ್ಟಿಕ್​ ಚೀಲಗಳೇ ಅವರ ಪಾಲಿಗೆ ರಕ್ಷಣಾ ಸಾಧನಗಳಾಗಿದ್ದವು. ಅವುಗಳನ್ನೇ ತಲೆಯಿಂದ ಕಾಲಿನವರೆಗೆ ಧರಿಸಿ ರೋಗಿಗಳ ಆರೈಕೆ ಮಾಡಿದ್ದರು. ಯಾವುದು ನಮ್ಮನ್ನು ಬಾಧಿಸದಿರಲಿ ಎಂದು ಪ್ರಾರ್ಥಿಸಿಕೊಂಡು ಸೇವೆ ಸಲ್ಲಿಸುತ್ತಿದ್ದರೋ ಇಗ ಅದೇ ಅವರನ್ನು ಬಿಗಿದಪ್ಪಿಕೊಂಡಿದೆ.

    ಕೋವಿಡ್​-19 ರೋಗಿಗಳಿಗೆ ಆರೈಕೆ ಮಾಡುತ್ತಿದ್ದ ಮುಂಚೂಣಿ ಪಡೆಯ ಮೂವರು ನರ್ಸ್​ಗಳಿಗೆ ಕರೊನಾ ಸೋಂಕು ಆವರಿಸಿಕೊಂಡಿದೆ. ವೈಯಕ್ತಿಕ ರಕ್ಷಣಾ ಸಾಧನಗಳ (ಪರ್ಸನಲ್​ ಪ್ರೊಟೆಕ್ಷನ್​ ಇಕ್ವಿಪ್​ಮೆಂಟ್​-ಪಿಪಿಇ) ಕೊರತೆಯೇ ಸೋಂಕು ಬಾಧಿತರಾಗಲು ಕಾರಣವಾಗಿದೆ. ಇದ್ಯಾವುದೋ ಬಡ ರಾಷ್ಟ್ರದ ಕತೆಯಲ್ಲ. ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಬ್ರಿಟನ್​ನಲ್ಲೂ ಕರೊನಾ ಮುಂಚೂಣಿ ಪಡೆಯ ಯೋಧರಿಗೆ ರಕ್ಷಣಾ ಸಾಧನಗಳಿಲ್ಲದಂತಾಗಿದೆ.

    ಇತ್ತೀಚೆಗಷ್ಟೇ ಲಂಡನ್​ನ ನಾರ್ತ್​ವಿಕ್​ ಪಾರ್ಕ್​ ಆಸ್ಪತ್ರೆಯ ಮೂವರು ನರ್ಸ್​ಗಳು ಕ್ಲಿನಿಕಲ್​ ವೇಸ್ಟ್​ನ ಪ್ಲಾಸ್ಟಿಕ್​ ಬ್ಯಾಗ್​ ಬಳಸಿ ಮಾಡಿಕೊಂಡಿದ್ದ ರಕ್ಷಣಾ ದಿರಿಸು ಧರಿಸಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪಿಪಿಇಗಳ ಕೊರತೆಯಿಂದಾಗಿ ಈ ರೀತಿ ಮಾಡಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮೂವರಿಗೂ ಸೋಂಕು ವ್ಯಾಪಿಸಿದೆ. ದಾದಿಯರಿಗೆ ಅಗತ್ಯ ರಕ್ಷಣಾ ಸಾಧನಗಳನ್ನು ಒದಗಿಸುವಂತೆ ಅಲ್ಲಿನ ರಾಯಲ್​ ಕಾಲೇಜ್​ ಆಫ್​ ನರ್ಸಿಂಗ್​ ಸರ್ಕಾರಕ್ಕೆ ಒತ್ತಾಯ ಮಾಡಿದೆ.

    ಬ್ರಿಟನ್​ನಲ್ಲಿ ಕರೊನಾತಂಕ ದಿನೇದಿನೆ ಹೆಚ್ಚುತ್ತಿದೆ. 60,000ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 7,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸ್ವತಃ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಕರರೊನಾ ಸೋಂಕಿನಿಂದಾಗಿ ಐಸಿಯು ಸೇರಿದ್ದಾರೆ. ಜತೆಗೆ, ಮೇ ಅಂತ್ಯದವರೆಗೂ ಅಲ್ಲಿ ಲಾಕ್​ಡೌನ್ ತೆರವಾಗುವ ಸಾಧ್ಯತೆಗಳಿಲ್ಲ. ಈ ಕಾರಣದಿಂದಾಗಿ ಅಲ್ಲಿನ ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದೆ. (ಏಜೆನ್ಸೀಸ್​)

    ‘ವೆಂಟಿಲೇಟರ್​ ಕೊಡಿ, ಜೀವನ ಪರ್ಯಂತ ನಿಮ್ಮನ್ನು ಮರೆಯೋಲ್ಲ..’ ಭಾರತದ ಬಳಿ ಅಂಗಲಾಚಿದ ಪಾಕ್​ ಕ್ರಿಕೆಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts