More

    ಆಮೆ ಮಾಂಸ ತಿಂದು 9 ಮಂದಿ ದುರ್ಮರಣ, 78 ಜನರ ಸ್ಥಿತಿ ಗಂಭೀರ! ವೈದ್ಯರಿಂದ ಶಾಕಿಂಗ್ ಹೇಳಿಕೆ

    ದೊಡೊಮಾ: ಮಾನವ ಅನೇಕ ರೀತಿಯ ಜೀವಿಗಳನ್ನು ಆಹಾರವಾಗಿ ಸೇವಿಸುತ್ತಾನೆ. ಆದರೆ, ಕೆಲವೊಮ್ಮೆ ಕೆಲವು ರೀತಿಯ ಮಾಂಸಗಳನ್ನು ತಿಂದ ಬಳಿಕ ದುರಂತಗಳು ಸಂಭವಿಸುತ್ತವೆ. ಅದಕ್ಕೆ ಹಲವು ಕಾರಣಗಳೂ ಇವೆ. ಕೆಲವು ಕಾರ್ಖಾನೆಗಳು ತಮ್ಮ ಕಂಪನಿಗಳ ತ್ಯಾಜ್ಯವನ್ನು ಸುತ್ತಮುತ್ತಲಿನ ನದಿ ಮತ್ತು ಸಮುದ್ರಗಳಿಗೆ ಸುರಿಯುತ್ತವೆ ಅಥವಾ ಹರಿಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ, ಸಾಗರಗಳಲ್ಲಿನ ಮೀನು ಮತ್ತು ಆಮೆಗಳಂತಹ ಜೀವಿಗಳು ತ್ಯಾಜ್ಯವನ್ನು ಆಹಾರವಾಗಿ ಸೇವಿಸಿ, ಸಾವಿಗೀಡಾಗುತ್ತವೆ. ಇಂತಹ ಜಲಚರಗಳು ರಾಶಿ, ರಾಶಿಯಾಗಿ ಕಡಲತೀರಕ್ಕೆ ಬರುವುದನ್ನು ನಾವು ನೋಡುತ್ತೇವೆ. ಕೆಲವರು ಸ್ವಲ್ಪವೂ ಯೋಚಿಸಿದೇ ಸತ್ತ ಜೀವಿಗಳನ್ನು ತಿಂದು ಸಾವಿಗೀಡಾಗಿರುವ ಘಟನೆಗಳು ನಡೆದಿವೆ. ಇತ್ತೀಚೆಗೆ ಇಂಥದ್ದೇ ಭೀಕರ ದುರಂತವೊಂದು ನಡೆದಿದೆ.

    ಸಮುದ್ರದ ಆಮೆ ಮಾಂಸವನ್ನು ತಿಂದು 9 ಮಂದಿ ಸಾವಿಗೀಡಾಗಿರುವ ಘಟನೆ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ ನಡೆದಿದೆ. 78 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಪೂರ್ವ ಆಫ್ರಿಕಾದ ತಾಂಜಾನಿಯಾದ ಜನರು ಹೆಚ್ಚಾಗಿ ಸಮುದ್ರ ಆಮೆಗಳನ್ನು ತಿನ್ನುತ್ತಾರೆ. ಇಲ್ಲಿ ಸಿಗುವ ಕಡಲಾಮೆಗಳಿಗೆ ಸಾಕಷ್ಟು ಬೇಡಿಕೆ ಇದೆ. ವಿಶೇಷವಾಗಿ ಜಂಜಿಬಾರ್ ಸಮುದ್ರ ದ್ವೀಪಗಳಲ್ಲಿ ಕಂಡುಬರುವ ಆಮೆಗಳು ತುಂಬಾ ರುಚಿಕರವಾಗಿರುತ್ತವೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಸುತ್ತಮುತ್ತಲಿನ ಜನರು ಇಲ್ಲಿಗೆ ಬಂದು ಆಮೆ ಮಾಂಸವನ್ನು ತಿನ್ನುತ್ತಾರೆ.

    ವಿವಿಧ ರುಚಿಗಳಲ್ಲಿ ಆಮೆ ಮಾಂಸವನ್ನು ಇಲ್ಲಿ ಬೇಯಿಸಿ ಮಾರಾಟ ಮಾಡಲಾಗುತ್ತದೆ. ಆದರೆ, ಆಮೆ ಮಾಂಸವನ್ನು 9 ಮಂದಿ ಸಾವಿಗೀಡಾಗಿದ್ದು, 78 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ತಾಂಜಾನಿಯಾ ದೇಶವೇ ಬೆಚ್ಚಿಬಿದ್ದಿದೆ.

    ಕೆಲವು ವಿಧದ ಆಮೆಗಳಲ್ಲಿ ಕಿಲೋನಿಟಾಕ್ಸಿಯಮ್​ ಎಂಬ ರಾಸಾಯನಿಕ ಅಂಶವಿದೆ. ಇದರಿಂದ ಆಹಾರ ವಿಷವಾಗಿ, ತಿಂದವರು ಸಾಯುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯ ವೈದ್ಯರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಆಮೆ ಮಾಂಸದಿಂದ ಒಟ್ಟು ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು, ಇನ್ನು ಕೆಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಘಟನೆಯ ಬಗ್ಗೆ ಕೂಲಂಕಷ ತನಿಖೆಯನ್ನು ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

    ಸಾವಿನ ದವಡೆಯಲ್ಲಿ ಮತ್ತೊಬ್ಬ ನೀಲಿ ತಾರೆ! ಏನಾಗ್ತಿದೆ ಪೋರ್ನ್​ ಇಂಡಸ್ಟ್ರಿಯಲ್ಲಿ? ಇಲ್ಲಿದೆ ಅಸಲಿ ಕಾರಣ…

    ಆಸ್ಕರ್​ ವೇದಿಕೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್​! ಕಾರಣ ಇದೇ ನೋಡಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts