More

    ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಬೇಕು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

    ತುಮಕೂರು: ರಾಜ್ಯದಲ್ಲಿ ಚುನಾವಣಾ ಕಾವೇರಿದ್ದು ವಾಗ್ದಾಳಿ, ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡ ಪ್ರಚಾರ ಎಲ್ಲೆಡೆ ನಡೆಯುತ್ತಿದೆ. ಜೆಡಿಎಸ್​ ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಧುಗಿಯ ಕೈಮರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

    ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೊಂಡವಾಡಿ ಚಂದ್ರಶೇಖರ್​ಗೆ ಸ್ವಾಗತ ತಿಳಿಸಿದ ಅವರು, ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ದೇವೇಗೌಡರ ಆಶೀರ್ವಾದದಿಂದ ಗೆದ್ದ ಕೆ.ಎನ್.ರಾಜಣ್ಣ ಈಗ ದೇವೇಗೌಡರ ಸಾವನ್ನು ಬಯಸಿದ್ದಾರೆ. ದೇವೇಗೌಡರನ್ನು ಕುತಂತ್ರ ರಾಜಕಾರಣದಿಂದ ತುಮಕೂರಿನಲ್ಲಿ ಸೋಲಿಸಲಾಯಿತು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ. ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ ತುಮಕೂರಿನಲ್ಲಿ 11 ಕ್ಕೆ 11 ಕ್ಷೇತ್ರ ಗೆಲ್ಲಬೇಕು. ತುಮಕೂರು ಜಿಲ್ಲೆಯ ಜನತೆ ಈ ಕೆಲಸ ಮಾಡಬೇಕು, ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಮದ್ವೆಯಾಗಿ 17 ವರ್ಷಗಳ ಬಳಿಕ ಗೊತ್ತಾಯ್ತು ಇಬ್ಬರ ನಡುವಿನ ಅಸಲಿ ಸಂಬಂಧ!

    2008ರ ಉಪ ಚುನಾವಣೆಯಲ್ಲಿ ಮಧುಗಿರಿಯಿಂದ ಅನಿತಾಳನ್ನು ನಿಲ್ಲಿಸಿದೆ. ಅದಕ್ಕೂ ಮುಂಚೆ ಅನಿತಾ ಬಳಿ ಒಪ್ಪಿಗೆ ಕೇಳಿದೆ. ಆಗ ನನ್ನ ಮಗ ನಿಖಿಲ್, ‘ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನನ್ನು ನಿಲ್ಲಿಸ್ತಿದ್ದಾನೆ, ನೀನು ಸ್ಪರ್ಧೆ ಮಾಡಬೇಡ’ ಎಂದಿದ್ದ. ಕೊನೆಗೂ‌ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದಳು. ಅನಿತಾ ಮದುವೆ ಮುಂಚೆ ನನಗೆ ಷರತ್ತು ಹಾಕಿದ್ದಳು. ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆ ಆಗುವೆ ಅಂದಿದ್ದರು. ದೇವರ ಇಚ್ಛೆ ಅನಿತಾ ಕೂಡ ರಾಜಕೀಯಕ್ಕೆ ಬರುವಂತಾಯಿತು ಎಂದು ಕುಮಾರಸ್ವಾಮಿ ಹೇಳಿದರು.

    ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts